ಸಿಬ್ಬಂದಿಯ ಸಂಭಾವನೆ ಹೆಚ್ಚಿಸಿದ ರಿವಾಲ್ವಾರ್ ರಾಣಿ, ಕಂಗನಾ ನಡೆ ಕಂಡು ಬೆಚ್ಚಿಬಿದ್ದ ಬಾಲಿವುಡ್
ಕಂಗನಾ ರನೌತ್.. ಸದ್ಯ ಬಾಲಿವುಡ್ನ ಟಾಪ್ ನಟಿ.. ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿನಿಂದಲೂ ವಿಭಿನ್ನ ಪಾತ್ರಗಳ ಮೂಲವೇ ಗುರುತಿಸಿಕೊಂಡಿರೋ ಕಂಗನಾಗೆ, ಬಿ ಟೌನ್ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪಾದರಸದಂತಾ ಅಭಿನಯವೇ ಕಂಗನಾ ಸ್ಟ್ರೆಂಥ್. ಮೊದ ಮೊದಲು ಸಿಕ್ಕ ಸಿಕ್ಕ ಪಾತ್ರಗಳಲ್ಲಿ ನಟಿಸಿ ಕಂಗನಾ ರನೌತ್ ಸೈ ಎನ್ನಿಸಿಕೊಂಡಿದ್ರು. ಆದ್ರೆ, ಇತ್ತೀಚೆಗಂತೂ ಕಂಗನಾರನ್ನ ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕರು ಪಾತ್ರ ಹೆಣೆಯುತ್ತಿದ್ದಾರೆ. ಹಣ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ. ಕಂಗನಾರ ಕಾಲ್ ಶೀಟ್ ಪಡೆದು ಸಿನಿಮಾ ಮಾಡಬೇಕು ಅನ್ನೋ ನಿರ್ಮಾಪಕರಿಗೆ ಈಗ ಕಂಗನಾ ನಡೆಯೇ […]
ಕಂಗನಾ ರನೌತ್.. ಸದ್ಯ ಬಾಲಿವುಡ್ನ ಟಾಪ್ ನಟಿ.. ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿನಿಂದಲೂ ವಿಭಿನ್ನ ಪಾತ್ರಗಳ ಮೂಲವೇ ಗುರುತಿಸಿಕೊಂಡಿರೋ ಕಂಗನಾಗೆ, ಬಿ ಟೌನ್ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪಾದರಸದಂತಾ ಅಭಿನಯವೇ ಕಂಗನಾ ಸ್ಟ್ರೆಂಥ್.
ಮೊದ ಮೊದಲು ಸಿಕ್ಕ ಸಿಕ್ಕ ಪಾತ್ರಗಳಲ್ಲಿ ನಟಿಸಿ ಕಂಗನಾ ರನೌತ್ ಸೈ ಎನ್ನಿಸಿಕೊಂಡಿದ್ರು. ಆದ್ರೆ, ಇತ್ತೀಚೆಗಂತೂ ಕಂಗನಾರನ್ನ ಮನಸ್ಸಿನಲ್ಲಿಟ್ಟುಕೊಂಡೇ ನಿರ್ದೇಶಕರು ಪಾತ್ರ ಹೆಣೆಯುತ್ತಿದ್ದಾರೆ. ಹಣ ಎಷ್ಟೇ ಖರ್ಚಾದ್ರೂ ಪರವಾಗಿಲ್ಲ. ಕಂಗನಾರ ಕಾಲ್ ಶೀಟ್ ಪಡೆದು ಸಿನಿಮಾ ಮಾಡಬೇಕು ಅನ್ನೋ ನಿರ್ಮಾಪಕರಿಗೆ ಈಗ ಕಂಗನಾ ನಡೆಯೇ ತಲೆ ಬಿಸಿ ತಂದಿದೆ.
ಕಂಗನಾ ಸದ್ಯ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವತಾರ ತಾಳೋದಕ್ಕಾಗಿ ಬರೋಬ್ಬರಿ 24 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಆದ್ರೀಗ ಚರ್ಚೆಗೆ ಕಾರಣವಾಗಿರೋ ವಿಚಾರ ಅಂದ್ರೆ ಕಂಗನಾಗೆ ಸಂಭಾವನೆ ಕೊಡೋದಲ್ಲ. ಬದಲಿಗೆ ಕಂಗನಾ ರನೌತ್ ಸಹೋದ್ಯೋಗಿಗಳಿಗೆ ಸಂಭಾವನೆ ನೀಡೋ ವಿಚಾರ.
ಅಂದ ಹಾಗೆ ಕಂಗಾನಾ ಎಲ್ಲೇ ಹೋದ್ರೂ, ಅವರ ಜೊತೆ 8 ಜನ ಅಸಿಸ್ಟೆಂಟ್ಗಳಿರ್ತಾರಂತೆ. ಯಾವುದೇ ನಿರ್ಮಾಪಕರನ್ನ ಭೇಟಿ ಮಾಡಿದ್ರೂ, ಸಿನಿಮಾದ ಅಥವಾ ಯಾವುದೇ ಖಾಸಗಿ ಕಾರ್ಯಕ್ರಮಕ್ಕೆ ಹೋದ್ರೂ ಕಂಗನಾ ರನೌತ್ ಜೊತೆ ಖಾಸಗಿ ಬಂದೋಬಸ್ತ್ ಸಿಬ್ಬಂದಿ ಹೊರತುಪಡಿಸಿ 8 ಜನ ಸಹೋದ್ಯೋಗಿಗಳಿಗೂ ಸಂಬಳ ನೋಡೋದು ನಿರ್ಮಾಪಕರಿಗೆ ತಲೆ ಬಿಸಿಯಾಗಿದೆಯಂತೆ.
ಹೀಗಾಗಿ, ಕಂಗಾನಾಗೆ ಸಂಭಾವನೆ ನೀಡೋಕೆ ಒಪ್ಪಿದ್ರೂ ಅವರ ಜೊತೆ ಬರೋರಿಗೆಲ್ಲಾ ಸಂಭಾವನೆ ಕೊಡೋಕೆ ಮಾತ್ರ ನಿರ್ಮಾಪಕರಿಗೆ ಸಿಕ್ಕಾಪಟ್ಟೆ ಹೊರೆಯಾಗ್ತಿದೆಯಂತೆ. ಸದ್ಯ ಈ ಸುದ್ದಿ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಸದ್ಯ ಕಂಗನಾ ಅಭಿನಯಿಸಿರೋ ಭಾರತೀಯ ಮಹಿಳಾ ಕಬ್ಬಡ್ಡಿ ಆಟಗಾರ್ತಿಯಾಗಿ ಕಾಣಿಸಿಕೊಂಡಿರೋ ಪಂಗಾ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಕಮಾಲ್ ಮಾಡ್ತಿದೆ. ಇದೆಲ್ಲದರ ಜೊತೆ ಈ ರೀತಿ ಚರ್ಚೆ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಕಂಗನಾ ಈ ಬೆಳವಣಿಗೆ ಬಗ್ಗೆ ಹೇಗೆ ಪ್ರತಿಕ್ರಿಯಿಸ್ತಾರೋ ನೋಡಬೇಕಿದೆ.
Published On - 8:09 am, Wed, 25 December 19