ಮುಂಬೈ: ಕನ್ನಡದ ನಟಿ ಶ್ವೇತಾ ಕುಮಾರಿ ಅವರು ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮಾದಕ ದ್ರವ್ಯ ನಿಯಂತ್ರಣ ಮಂಡಳಿ (ಎನ್ಸಿಬಿ) ಕಚೇರಿಗೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಮುಂಬೈನ ಕ್ರೌನ್ ಬ್ಯುಸಿನೆಸ್ ಹೋಟೆಲ್ನಲ್ಲಿ 400 ಗ್ರಾಂ ಡ್ರಗ್ನೊಂದಿಗೆ ಶ್ವೇತಾ ನಿನ್ನೆ (ಜ.3) ಸಿಕ್ಕಿಬಿದ್ದಿದ್ದರು. ಭಾನುವಾರ ಅವರನ್ನು ದಿನಪೂರ್ತಿ ವಿಚಾರಣೆ ಮಾಡಲಾಗಿತ್ತು. ನಂತರ ಬಿಡುಗಡೆ ಮಾಡಲಾಗಿತ್ತು. ಇಂದು ಕೂಡ ಅವರು ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ಎನ್ಸಿಬಿ ವಿಚಾರಣೆ ಮುಂದುವರಿಯಲಿದೆ. ಅಲ್ಲದೆ, ಮತ್ತೋರ್ವ ಶಂಕಿತನಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ನಂತರ ಡ್ರಗ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಅನೇಕ ಸ್ಟಾರ್ಗಳಿಗೆ ಸಮನ್ಸ್ ನೀಡಲಾಗಿತ್ತು.
Published On - 4:54 pm, Mon, 4 January 21