ಕೆಜಿಎಫ್​ ಟೈಮ್ಸ್​ ಪತ್ರಿಕೆಯ ಅಂತಿಮ ಆವೃತ್ತಿ ಪ್ರಕಟ.. ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ಹವಾ

ಹಳೆಯ ಪತ್ರಿಕೆಗಳನ್ನು ಹೋಲುವ ಕೆಜಿಎಫ್​ ಟೈಮ್ಸ್​ ಜನವರಿ 8ರಂದು ಬಿಡುಗಡೆಯಾಗಲಿರುವ ಟೀಸರ್​ಗೆ ಭರ್ಜರಿ ಪ್ರಚಾರ ನೀಡಿದೆ. ಈ ಅಂತಿಮ ಆವೃತ್ತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕೆಜಿಎಫ್​ ಟೈಮ್ಸ್​ ಪತ್ರಿಕೆಯ ಅಂತಿಮ ಆವೃತ್ತಿ ಪ್ರಕಟ.. ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ಹವಾ
ಕೆಜಿಎಫ್​ ಟೈಮ್ಸ್​
Skanda

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 04, 2021 | 6:25 PM

ಪ್ರಶಾಂತ್​ ನೀಲ್​ ನಿರ್ದೇಶನದ, ಯಶ್​ ನಾಯಕತ್ವದ ಬಹುನಿರೀಕ್ಷಿತ ಕೆಜಿಎಫ್​ 2 ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಮೊದಲ ಭಾಗವನ್ನು ಕಂಡು ಮನಸೋತಿರುವ ಪ್ರೇಕ್ಷಕ ಮಹಾಪ್ರಭುಗಳು ಎರಡನೇ ಭಾಗಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಶಾಂತ್​ ನೀಲ್​ ‘ಕೆಜಿಎಫ್​ ಟೈಮ್ಸ್​’ ಪತ್ರಿಕೆಯನ್ನೇ ಬಿಡುಗಡೆಗೊಳಿಸಿದ್ದಾರೆ.

ಪ್ರೇಕ್ಷಕರ ನಿರೀಕ್ಷೆ, ಕುತೂಹಲಗಳಿಗೆ ತಕ್ಕನಾಗಿ ಪ್ರಚಾರತಂತ್ರ ರೂಪಿಸುತ್ತಿರುವ ಕೆಜಿಎಫ್​ 2 ಸಿನಿ ತಂಡ ಇಂದು ಕೆಜಿಎಫ್​ ಟೈಮ್ಸ್​ ಹೆಸರಿನ ಪತ್ರಿಕೆಯ ಮುಖಪುಟ ತಯಾರಿಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಜೊತೆಗೆ ಇಂಗ್ಲಿಷ್​ ಭಾಷೆಯಲ್ಲೂ ಮುಖಪುಟ ತಯಾರಾಗಿದ್ದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ಹವಾ ಎಬ್ಬಿಸಿದೆ.

ಹಳೆಯ ಕಾಲದ ಪತ್ರಿಕೆಗಳನ್ನು ಹೋಲುವ ಮುಖಪುಟದಲ್ಲಿ ನಾಯಕನಾ ಅಥವಾ ಖಳನಾಯಕನಾ? ಎಂಬ ತಲೆಬರಹ ಎದ್ದು ಕಾಣುತ್ತಿದೆ. ಸುದ್ದಿ ಶೀರ್ಷಿಕೆಗಳಲ್ಲಿ ನಾಯಕ ರಾಕಿಗೆ ಸಂಬಂಧಿಸಿದ ಘಟನೆಗಳನ್ನು ನೆನಪಿಸುವ ಸಂಗತಿಗಳನ್ನು ನೀಡಲಾಗಿದ್ದು, ಮೇಲ್ಭಾಗದ ಬಲ ತುದಿಯಲ್ಲಿ ಅಂತಿಮ ಆವೃತ್ತಿ ಎನ್ನುವುದೂ ಅಚ್ಚಾಗಿದೆ.

ಜನವರಿ 8ರಂದು ಕೆಜಿಎಫ್​ 2 ಚಿತ್ರದ ಟೀಸರ್​ ಬಿಡುಗಡೆ ಆಗಲಿದ್ದು, ಅದರ ಪ್ರಯುಕ್ತವೇ ಪತ್ರಿಕೆಯ ಮುಖಪುಟ ರಚಿಸಲಾಗಿದೆ. ಫೇಸ್​ಬುಕ್​, ಟ್ವಿಟರ್​, ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಕೆಜಿಎಫ್​ ಟೈಮ್ಸ್​ ಅಭಿಮಾನಿಗಳ ನಿರೀಕ್ಷೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ.

https://tv9kannada.com/prashanth-neel-to-direct-movie-for-jr-ntr

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada