ಬೆಂಗಳೂರು: ತನ್ನ ಮಾತು, ನಿರೂಪಣೆಯ ಮೂಲಕ ಕನ್ನಡಿಗರ ಮನ ಗೆದ್ದು ಮನೆ ಮಾತಾಗಿರುವ ಅನುಶ್ರೀ ಹೆಸರು ಡ್ರಗ್ಸ್ ಜಾಲದಲ್ಲಿ ಹೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕುತ್ತಿದೆ. ಈಗ ಸ್ಯಾಂಡಲ್ ವುಡ್ ಬೆಚ್ಚಿ ಬೀಳಿಸುವ ಮತ್ತೊಂದು ಭಯಾನಕ ಸುದ್ದಿ ಸಿಸಿಬಿಗೆ ಗೊತ್ತಾಗಿದೆಯಂತೆ. ಬಗೆದಷ್ಟು ಬಯಲಾಗುತ್ತಿರುವ ಡ್ರಗ್ಸ್ ನಂಟಿನ ಬೃಹತ್ ಜಾಲದಲ್ಲಿ ಮತ್ತಿಬ್ಬರು ರಿಯಾಲಿಟಿ ಶೋ ಸ್ಪರ್ಧಿಗಳು ಭಾಗಿಯಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಸಿಕ್ಕಿದೆ.
ನಿರೂಪಕಿ ಅನುಶ್ರೀ ಜೊತೆ ರಿಯಾಲಿಟಿ ಶೋ ಸ್ಟಾರ್ ಡ್ರಗ್ಸ್ ನಂಟಿದೆ ಎಂಬ ಮಾತು ಹೇಳಿಬಂದಿದೆ. ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ನಟಿಗೂ ಡ್ರಗ್ಸ್ ಅಮಲಿದೆಯಂತೆ. ಈ ನಟಿ ಅನುಶ್ರೀ ಜೊತೆ ಪಾರ್ಟಿಗೆ ಹೋಗ್ತಿದ್ರಂತೆ. ಕರಾವಳಿ ಮೂಲದ ನಟಿ ಕಮ್ ರಿಯಾಲಿಟಿ ಶೋ ಸ್ಟಾರ್ ಆಗಿರುವ ಇವರಿಗೆ ನಶೆ ಲಿಂಕ್ ಇದೆ ಎಂದು ಹೇಳಲಾಗುತ್ತಿದೆ.
ಇವರು ಅನುಶ್ರೀ ಜೊತೆ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ರು ಎಂಬ ಮಾಹಿತಿ ಸಿಕ್ಕಿದೆ. ಆದರೆ ಸಿಸಿಬಿ ಅಧಿಕಾರಿಗಳು ಕಿರುತೆಗೆ ನಟಿಯ ಹೆಸರನ್ನು ರಿವಿಲ್ ಮಾಡಿಲ್ಲ. ಹಲವು ಫೇಮಸ್ ಸೀರಿಯಲ್ಗಳಲ್ಲಿ ನಟಿಸಿರುವ ಈ ಕಿರುತೆರೆ ನಟಿಯ ಬಗ್ಗೆ ಬಂಧಿತ ಕೊರಿಯೋಗ್ರಾಫರ್ ಸ್ಯಾಮ್ ಫರ್ನಾಂಡೀಸ್ ಸ್ಫೋಟಕ ಮಾಹಿತಿಯನ್ನು ಸಿಸಿಬಿ ಬಳಿ ಬಾಯ್ಬಿಟ್ಟಿದ್ದಾನೆ.
ಅಲ್ಲದೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದ ಮತ್ತೊಬ್ಬ ನಟನಿಗೂ ಡ್ರಗ್ ನಂಟಿದೆಯಂತೆ. ಅನುಶ್ರೀಗೆ ಇವರಿಬ್ಬರ ಜೊತೆಗೂ ನಂಟಿದೆಯಂತೆ. ಹಾಗೂ ಇವರು ಡ್ರಗ್ ಪಾರ್ಟಿ ಮಾಡಿರುವ ಬಗ್ಗೆ ಸಿಸಿಬಿ ಬಳಿ ಪಕ್ಕಾ ಎವಿಡೆನ್ಸ್ ಇದೆಯಂತೆ.
Published On - 8:28 am, Fri, 2 October 20