ಯಾರಿಗೂ ಬೇಡವಾದ ಚುನಾವಣೆ ನನಗೂ ಬೇಡವೆಂದ ‘ಒಳ್ಳೆ ಹುಡುಗ’!

  • TV9 Web Team
  • Published On - 16:19 PM, 3 Dec 2019
ಯಾರಿಗೂ ಬೇಡವಾದ ಚುನಾವಣೆ ನನಗೂ ಬೇಡವೆಂದ ‘ಒಳ್ಳೆ ಹುಡುಗ’!

ಕನ್ನಡದ ನಟ ಪ್ರಥಮ್ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ. ಇದು ಯಾರಿಗೂ ಬೇಡವಾದ ಚುನಾವಣೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಸದ್ಯ ಸಾಕಷ್ಟು ನಟರು ಬೈ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ನಟ ಪ್ರಥಮ್ ವಿಭಿನ್ನ ಹಾದಿ ತುಳಿದಿದ್ದಾರೆ.

ಐರಾಗೆ ಮೊದಲ ಬರ್ತ್​ಡೇ ಸಂಭ್ರಮ:

ನಟ ಯಶ್-ರಾಧಿಕಾ ಪಂಡಿತ್ ದಂಪತಿ ಪುತ್ರಿ ಐರಾ ಮೊದಲ ವರ್ಷದ ಜನ್ಮ ದಿನ ಆಚರಿಸಿಕೊಂಡಿದ್ದಾಳೆ. ಐರಾಳ ಬರ್ತ್ ಡೇ ಸಂಭ್ರಮವನ್ನ ರಾಧಿಕಾ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಗರ್ಭಿಣಿಯಾಗಿದ್ದಾಗ ತೆಗೆದುಕೊಂಡ ಫೋಟೋವೊಂದನ್ನ ಶೇರ್ ಮಾಡಿ ಐರಾಳಿಗೆ ಶುಭ ಕೋರಿದ್ದಾರೆ.

‘ಭಜರಂಗಿ-2’ ಶೂಟಿಂಗ್ ಕಂಪ್ಲೀಟ್:

ಸ್ಯಾಂಡಲ್​ವುಡ್​ನ ‘ಭಜರಂಗಿ-2’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬರುವ ಏಪ್ರಿಲ್ ಅಥವಾ ಮೇ ತಿಂಗಳಿಗೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ನಟಿಸಿದ್ದ ‘ಭಜರಂಗಿ’ ಚಿತ್ರ ಹಿಟ್ ಆಗಿತ್ತು. ಆಂಜನೇಯನ ಭಕ್ತನಾಗಿ ಶಿವಣ್ಣ ಮಿಂಚಿದ್ದರು.

ಪತ್ನಿ ಅನುಷ್ಕಾ ಬಗ್ಗೆ ವಿರಾಟ್ ಮಾತು:

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ್ದಾರೆ. ಅನುಷ್ಕಾ ಌಕ್ಟ್ ಮಾಡಿದ್ದ ‘ಹೇ ದಿಲ್ ಹೈ ಮುಷ್ಕಿಲ್’ ಚಿತ್ರ ನನಗೆ ತುಂಬಾ ಇಷ್ಟ ಅಂತಾ ವಿರಾಟ್ ಮನದಾಳ ತಿಳಿಸಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಪತ್ನಿ ಅನುಷ್ಕಾಳನ್ನ ಗುಣಗಾನ ಮಾಡಿದ್ದಾರೆ.

ನಿತಿನ್​ಗೆ ವರವಾಗುತ್ತಾ ‘ಭೀಷ್ಮ’..?

ಟಾಲಿವುಡ್ ನಟ ನಿತಿನ್ ‘ಭೀಷ್ಮ’, ‘ರಂಗ್’ ಸಿನಿಮಾಗಳಲ್ಲಿ ಌಕ್ಟ್ ಮಾಡ್ತಿದ್ದಾರೆ. ನಿತಿನ್​ಗೆ ಈ ಚಿತ್ರಗಳು ಕೈ ಕೊಟ್ರೆ ತೆಲುಗು ಚಿತ್ರರಂಗದಲ್ಲಿ ಮತ್ತೆ ಮೇಲೆಳೋದು ಕಷ್ಟ ಅಂತಾ ಟಾಲಿವುಡ್ ಮಂದಿ ಮಾತ್ನಾಡಿಕಕೊಳ್ತಿದ್ದಾರೆ. ‘ಜಯಂ’ ಸಿನಿಮಾದಲ್ಲಿ ಮಿಂಚಿದ್ದ ನಿತಿನ್, ಬಳಿಕ ನಟಿಸಿದ ಚಿತ್ರಗಳು ಅಷ್ಟೇನು ಯಶಸ್ಸು ತಂದುಕೊಟ್ಟಿಲ್ಲ.

ಪ್ಲಾಸ್ಟಿಕ್ ವಿರುದ್ಧ ಜಾಗೃತಿ:

ವರನಟ ಡಾಕ್ಟರ್ ರಾಜ್​ಕುಮಾರ್ ಕುಟುಂಬಸ್ಥರು ಪ್ಲಾಸ್ಟಿಕ್ ವಿರುದ್ಧ ಜನರಿಗೆ ಜಾಗೃತಿ ಮೂಡಿಸ್ತಿದೆ. ಪರಿಸರ ರಕ್ಷಣೆ ರಾಜ್ ಪುತ್ರರು ಮುಂದಾಗಿದ್ದು, ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಕರೆ ಕೊಟ್ಟಿದ್ದಾರೆ. ಆ ಮೂಲಕ ರಾಜ್​ಕುಮಾರ್​ಗಿದ್ದ ಸಮಾಜಮುಖಿ ಕಾಳಜಿಯನ್ನ ಮುಂದುವರಿಸಿದ್ದಾರೆ.

‘ಯಜಮಾನ’ನಿಗೆ 19 ರ ಸಂಭ್ರಮ:
ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್ ಌಕ್ಟ್ ಮಾಡಿದ್ದ ‘ಯಜಮಾನ’ ಚಿತ್ರಕ್ಕೆ 19 ವರ್ಷ ತುಂಬಿದೆ. 2000ನೇ ಇಸವಿಯ ಡಿಸೆಂಬರ್​ನಲ್ಲಿ ‘ಯಜಮಾನ’ ಸಿನಿಮಾ ರಿಲೀಸ್ ಆಗಿತ್ತು. ದ್ವಿಪಾತ್ರದಲ್ಲಿ ಅಭಿನಯಿಸಿದ್ದ ವಿಷ್ಣು ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ರು. ಬಳಿಕ ಚಿತ್ರ ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿತ್ತು.