AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಾದ್ಯಂತ ಟ್ರೆಂಡ್ ಆಗುತ್ತಿದೆ ‘ಪ್ರೇಮದ ಊರಲಿ’ ಸಿನಿಮಾ, ಕಾರಣವೇನು?

ಕನ್ನಡದ ಸಣ್ಣ ಸಿನಿಮಾ ‘ಪ್ರೇಮದ ಊರಲಿ’ ಬಗ್ಗೆ ರಾಷ್ಟ್ರದಾದ್ಯಂತ ಲಕ್ಷಾಂತರ ಜನರು ಚರ್ಚಿಸುತ್ತಿದ್ದಾರೆ, ಸಿನಿಮಾದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಹವಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಇಂಡಿಯಾ ಟ್ರೆಂಡ್​​ನಲ್ಲಿ ಕಾಣಿಸಿಕೊಂಡಿದೆ. ‘ಪ್ರೇಮದ ಊರಲಿ’ ಸಿನಿಮಾದ ಕಲೆಕ್ಷನ್ ಬಗ್ಗೆ, ಸಿನಿಮಾದ ಕಲಾವಿದರ ಬಗ್ಗೆ, ಸಿನಿಮಾದ ಕತೆಯ ಬಗ್ಗೆ, ಸಿನಿಮಾದ ನಿರ್ದೇಶಕರ ಬಗ್ಗೆ, ಸಿನಿಮಾದ ಬುಕಿಂಗ್ ಹೀಗೆ ಹಲವು ಮಾಹಿತಿಗಳನ್ನು ಜನರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಾರೆ.

ಭಾರತದಾದ್ಯಂತ ಟ್ರೆಂಡ್ ಆಗುತ್ತಿದೆ ‘ಪ್ರೇಮದ ಊರಲಿ’ ಸಿನಿಮಾ, ಕಾರಣವೇನು?
Premada Oorali Movie
ಮಂಜುನಾಥ ಸಿ.
|

Updated on:Oct 07, 2026 | 12:02 PM

Share

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ಟಾಪ್ ಟ್ರೆಂಡಿಂಗ್​​ನಲ್ಲಿ
  • ದೇಶದಾದ್ಯಂತ ಟ್ರೆಂಡ್​ ಆಗುತ್ತಿದೆ ‘ಪ್ರೇಮದ ಊರಲಿ’ ಸಿನಿಮಾ
  • ‘ಪ್ರೇಮದ ಊರಲಿ’ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ಗೆ ಹೋಗಲಿದೆ

ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ಸರಳ, ಸುಂದರ ಕನ್ನಡ ಸಿನಿಮಾ ‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್​​​ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ. ಯಾವ ದೊಡ್ಡ ಸ್ಟಾರ್​​ಗಳ ಬೆಂಬಲ, ದೊಡ್ಡ ನಿರ್ಮಾಣ ಸಂಸ್ಥೆ, ವಿತರಕರ ಬೆಂಬಲಗಳಿಲ್ಲದೆ ಬಿಡುಗಡೆ ಆದ ‘ಪ್ರೇಮದ ಊರಲಿ’ ಸಿನಿಮಾ ಈಗ ರಾಜ್ಯದಾದ್ಯಂತ ಹೌಸ್​​ಫುಲ್ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ ‘ಪ್ರೇಮದ ಊರಲಿ’ ಸಿನಿಮಾದ ಖ್ಯಾತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ದೇಶದಾದ್ಯಂತ ಹಬ್ಬಿದೆ. ಸಿನಿಮಾದ ಬಗ್ಗೆ ದೇಶದಾದ್ಯಂತ ಚರ್ಚೆಗಳಾಗುತ್ತಿದ್ದು, ಅದಕ್ಕೆ ಸಾಕ್ಷಿ ಗೂಗಲ್ ಟ್ರೆಂಡ್ಸ್​​​ನಲ್ಲಿ ‘ಪ್ರೇಮದ ಊರಲಿ’ ಸಿನಿಮಾ ರಾಷ್ಟ್ರಮಟ್ಟದಲ್ಲಿ ಟಾಪ್​​ನಲ್ಲಿರುವುದು.

ಕನ್ನಡದ ಸಣ್ಣ ಸಿನಿಮಾ ‘ಪ್ರೇಮದ ಊರಲಿ’ ಬಗ್ಗೆ ರಾಷ್ಟ್ರದಾದ್ಯಂತ ಲಕ್ಷಾಂತರ ಜನರು ಚರ್ಚಿಸುತ್ತಿದ್ದಾರೆ, ಸಿನಿಮಾದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಹವಣಿಸುತ್ತಿದ್ದಾರೆ. ಇದೇ ಕಾರಣಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಇಂಡಿಯಾ ಟ್ರೆಂಡ್​​ನಲ್ಲಿ ಕಾಣಿಸಿಕೊಂಡಿದೆ. ‘ಪ್ರೇಮದ ಊರಲಿ’ ಸಿನಿಮಾದ ಕಲೆಕ್ಷನ್ ಬಗ್ಗೆ, ಸಿನಿಮಾದ ಕಲಾವಿದರ ಬಗ್ಗೆ, ಸಿನಿಮಾದ ಕತೆಯ ಬಗ್ಗೆ, ಸಿನಿಮಾದ ನಿರ್ದೇಶಕರ ಬಗ್ಗೆ, ಸಿನಿಮಾದ ಬುಕಿಂಗ್ ಹೀಗೆ ಹಲವು ಮಾಹಿತಿಗಳನ್ನು ಜನರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದಾರೆ.

ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯ ದೊಡ್ಡ ಸಿನಿಮಾಗಳು, ಸ್ಟಾರ್ ನಟರುಗಳ ಸಿನಿಮಾಗಳು ಮಾಡದ ಸಾಧನೆಯನ್ನು ‘ಪ್ರೇಮದ ಊರಲಿ’ ಸಿನಿಮಾ ಮಾಡುತ್ತಿದೆ. ಸಿನಿಮಾ ಬಿಡುಗಡೆ ಆಗಿ ಎರಡು ವಾರಗಳಾಗಿದ್ದು, ಪ್ರತಿದಿನವೂ ಸಿನಿಮಾದ ಗಳಿಕೆಯಲ್ಲಿ ಏರಿಕೆ ಆಗುತ್ತಲೇ ಇದೆ. ನಿನ್ನೆ (ಅಕ್ಟೋಬರ್ 06) ಸಹ ಸಿನಿಮಾ ಮೂರು ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಈಗಾಗಲೇ ‘ಪ್ರೇಮದ ಊರಲಿ’ ಸಿನಿಮಾ ತೆಲುಗಿಗೆ ಡಬ್ ಆಗಿ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ರಿಲೀಸ್ ಆಗಿದ್ದು, ಅಲ್ಲಿಯೂ ಒಳ್ಳೆಯ ಗಳಿಕೆಯನ್ನೇ ಮಾಡಿದೆ.

ಇದನ್ನೂ ಓದಿ:ಓಂ ಪ್ರಕಾಶ್ ರಾವ್ ನನ್ನ ಗುರುಗಳು: ಹೆಮ್ಮೆಯಿಂದ ಹೇಳಿದ ‘ಪ್ರೇಮದ ಊರಲಿ’ ಡೈರೆಕ್ಟರ್

‘ಪ್ರೇಮದ ಊರಲಿ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್​​ಗೆ ಕೊಂಡೊಯ್ಯುವ ಪ್ರಯತ್ನವನ್ನು ಮಾಡಲಾಗುತ್ತಿದ್ದು, ಜಯಣ್ಣ ಕಂಬೈನ್ಸ್, ಕೆಆರ್​​ಜಿ ಸೇರಿದಂತೆ ಇನ್ನೂ ಕೆಲವರು ಸಿನಿಮಾಕ್ಕೆ ಕೈಜೋಡಿಸಿದ್ದಾರೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೆಯುತ್ತಿದೆ. ಉತ್ತರ ಭಾರತದಲ್ಲಿ ‘ಕೆಜಿಎಫ್’, ‘ಪುಷ್ಪ’ ವಿತರಣೆ ಮಾಡಿದ್ದ ಆನಂದ್ ತಡಾನಿ ಅವರೇ ‘ಪ್ರೇಮದ ಊರಲಿ’ ಸಿನಿಮಾ ಅನ್ನು ಸಹ ವಿತರಣೆ ಮಾಡಲಿದ್ದಾರೆ ಎಂಬ ಸುದ್ದಿ ಇದೆ.

ಯಾವ ದೊಡ್ಡ ಸ್ಟಾರ್ ನಟರು, ದೊಡ್ಡ ನಿರ್ಮಾಣ ಸಂಸ್ಥೆಗಳ ಬೆಂಬಲ ಇಲ್ಲದೆ ಕೇವಲ ಕತೆಯನ್ನು, ಸ್ವ ಪ್ರತಿಭೆಯನ್ನು ನೆಚ್ಚಿಕೊಂಡು ಮಾಡಿದ ಸಿನಿಮಾ ಅನ್ನು ಪ್ರೇಕ್ಷಕರು ಕೈಹಿಡಿದು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. ಸಿನಿಮಾಕ್ಕೆ ಮುಖ್ಯವಾಗಿರುವುದು ಸ್ಟಾರ್ ನಟ, ದೊಡ್ಡ ಬಜೆಟ್, ಭಾರಿ ದೊಡ್ಡ ಪ್ರಚಾರ ಅಲ್ಲ ಬದಲಿಗೆ ಒಳ್ಳೆಯ ಕತೆ, ನಿರೂಪಣೆ, ಒಳ್ಳೆಯ ಮೇಕಿಂಗ್ ಮತ್ತು ಸಂಗೀತ ಎಂಬುದು ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸಿನಿಂದ ಮತ್ತೊಮ್ಮೆ ಸಾಬೀತಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:43 am, Wed, 7 October 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More