‘ಕೆಜಿಎಫ್’ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದ ಮೇಲೆ ರಾಕಿಂಗ್ ಸ್ಟಾರ್ ಯಶ್ ಇಡೀ ರಾಷ್ಟ್ರಕ್ಕೆ ಪರಿಚಯವಾಗಿದ್ದಾರೆ. ಈಗಾಗಲೇ ಯಶ್ ‘ಕೆಜಿಎಫ್-2’ ಶೂಟಿಂಗ್ ಪೂರ್ಣಗೊಳಿಸಿದ್ದು, ಸಿನಿಮಾ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ, ಯಶ್ಗೆ ಆ್ಯಕ್ಷನ್ ಕಟ್ ಹೇಳೋಕೆ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರು ರೆಡಿ ಆಗಿದ್ದಾರಂತೆ!
ಅವರು ಬೇರಾರು ಅಲ್ಲ, ಪುರಿ ಜಗನ್ನಾಥ್. ಹೌದು, ಯಶ್ ನಟನೆಯ ಕೆಜಿಎಫ್ ಸಿನಿಮಾ ನೋಡಿರುವ ಪುರಿ ಜಗನ್ನಾಥ್ ತುಂಬಾನೇ ಮೆಚ್ಚಿಕೊಂಡಿದ್ದಾರಂತೆ. ಹೀಗಾಗಿ, ಯಶ್ಗೋಸ್ಕರ ವಿಶೇಷ ಕಥೆ ಕೂಡ ಸಿದ್ಧಮಾಡಿಕೊಂಡಿದ್ದಾರೆ. ಯಶ್ ಜೊತೆ ಈಗಾಗಲೇ ಪುರಿ ಜಗನ್ನಾಥ್ ಒಂದು ಹಂತದ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪುರಿ ಹೇಳಿರುವ ಕಥೆಯ ಒಂದೆಳೆ ಯಶ್ಗೂ ಇಷ್ಟವಾಗಿದೆ. ಹೀಗಾಗಿ ಪ್ರಿಪ್ರೊಡಕ್ಷನ್ ಕೆಲಸ ನಡೆಸಲು ಯಶ್ ಒಕೆ ಎಂದಿದ್ದಾರಂತೆ.
ಈ ಸಿನಿಮಾದ ಕಥೆ ಮಾಫಿಯಾ ಹಿನ್ನಲೆಯಲ್ಲಿ ಮೂಡಿ ಬರುತ್ತಿದೆ. ಕಥೆ ಬಗ್ಗೆ ಯಶ್ ತುಂಬಾನೇ ಮೆಚ್ಚುಗೆಯ ಮಾತನಾಡಿದ್ದಾರೆ ಎನ್ನಲಾಗಿದೆ. ಪುರಿ ಸದ್ಯ ವಿಜಯ್ ದೇವರಕೊಂಡ ನಟನೆಯ ‘ಫೈಟರ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಿದ್ದಾರೆ. ಮುಂಬೈನಲ್ಲಿ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಈ ಸಿನಿಕಮಾದ ಕೆಲಸಗಳು ಪೂರ್ಣಗೊಂಡ ನಂತರ ಯಶ್ ಜೊತೆ ಕೈಜೋಡಿಸುವ ವಿಚಾರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಆಲೋನೆಯನ್ನು ಪುರಿ ಇಟ್ಟುಕೊಂಡಿದ್ದಾರೆ.
ಯಶ್ ಸದ್ಯ, ‘ಕೆಜಿಎಫ್-2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಜನ್ಮದಿನದ ಅಂಗವಾಗಿ ಜ.8ರಂದು ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದೆ. ದಿನ ಕಳೆದಂತೆ ಚಿತ್ರದ ಮೇಲಿನ ಕುತೂಹಲ ಹೆಚ್ಚುತ್ತಲೇ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್-2’ನಲ್ಲಿ ಬಾಲಿವುಡ್ನ ಸಂಜಯ್ ದತ್ ಹಾಗೂ ರವೀನಾ ಟಂಡನ್ ಕೂಡ ಬಣ್ಣ ಹಚ್ಚುತ್ತಿದ್ದಾರೆ.
ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್