Kichcha Sudeep: ಜುಲೈ 6 ಎಂದರೆ ಸುದೀಪ್​ ಪಾಲಿಗೆ ಭಾರಿ ವಿಶೇಷ; ‘ಹುಚ್ಚ’ ಚಿತ್ರ ತೆರೆಕಂಡು ಕಳೆಯಿತು 22 ವರ್ಷ

Kichcha Sudeep Movies: ‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ 22 ವರ್ಷ ಹಾಗೂ ‘ಈಗ’ ಚಿತ್ರ ತೆರೆಕಂಡು 11 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಆ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.

Kichcha Sudeep: ಜುಲೈ 6 ಎಂದರೆ ಸುದೀಪ್​ ಪಾಲಿಗೆ ಭಾರಿ ವಿಶೇಷ; ‘ಹುಚ್ಚ’ ಚಿತ್ರ ತೆರೆಕಂಡು ಕಳೆಯಿತು 22 ವರ್ಷ
ಕಿಚ್ಚ ಸುದೀಪ್​

Updated on: Jul 06, 2023 | 5:05 PM

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಭಾರತೀಯ ಚಿತ್ರರಂಗದಲ್ಲಿ ಸ್ಟಾರ್​ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1997ರಲ್ಲಿ. ಅಂದಿನಿಂದ ಇಂದಿನ ತನಕ ಬಣ್ಣದ ಲೋಕದಲ್ಲಿ ಬೇಡಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅನೇಕ ಏಳು-ಬೀಳುಗಳನ್ನು ಕಂಡವರು ಕಿಚ್ಚ ಸುದೀಪ್​. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಬಿಗ್​ ಬಾಸ್​ ನಿರೂಪಕನಾಗಿ ಅವರು ಹಂತ-ಹಂತವಾಗಿ ಬೆಳೆದುಬಂದರು. ಅವರ ವೃತ್ತಿ ಜೀವನದಲ್ಲಿ ಕೆಲವು ಸಿನಿಮಾಗಳಿಗೆ ವಿಶೇಷ ಸ್ಥಾನ ಇದೆ. ಆ ಪಟ್ಟಿಯಲ್ಲಿ ‘ಹುಚ್ಚ’ (Huchcha Movie) ಮತ್ತು ‘ಈಗ’ ಸಿನಿಮಾಗಳು ಕೂಡ ಇವೆ. ಈ ಎರಡೂ ಸಿನಿಮಾಗಳು ತೆರೆಕಂಡಿದ್ದು ಜುಲೈ 6ರಂದು ಎಂಬುದು ವಿಶೇಷ.

2001ರ ಜುಲೈ 6ರಂದು ‘ಹುಚ್ಚ’ ಸಿನಿಮಾ ತೆರೆಕಂಡಿತು. ಇಂದಿಗೆ ಬರೋಬ್ಬರಿ 22 ವರ್ಷ ಪೂರೈಸಿದೆ. ‘ಹುಚ್ಚ’ ಚಿತ್ರಕ್ಕೆ ಓಂ ಪ್ರಕಾಶ್​ ರಾವ್​ ನಿರ್ದೇಶನ ಮಾಡಿದ್ದರು. ರಾಜೇಶ್​ ರಾಮನಾಥ್​ ಸಂಗೀತ ನೀಡಿದ್ದರು. ಆ ಸಿನಿಮಾದ ‘ಉಸಿರೇ ಉಸಿರೇ..’ ಹಾಡನ್ನು ಅಭಿಮಾನಿಗಳು ಈಗಲೂ ಗುನುಗುತ್ತಾರೆ. ಸುದೀಪ್ ಅವರಿಗೆ ಜೋಡಿಯಾಗಿ ರೇಖಾ ವೇದವ್ಯಾಸ್​ ನಟಿಸಿದ್ದರು. 22 ವರ್ಷ ಕಳೆದರೂ ಅಭಿಮಾನಿಗಳ ಫೇವರಿಟ್​ ಪಟ್ಟಿಯಲ್ಲಿ ‘ಹುಚ್ಚ’ ಸಿನಿಮಾಗೆ ಸ್ಥಾನ ಇದೆ. ಅದರಲ್ಲಿನ ಸುದೀಪ್​ ಅವರ ನಟನೆಗೆ ಫಿದಾ ಆಗದವರಿಲ್ಲ.

ಸುದೀಪ್​ ಅಭಿನಯದ ‘ಈಗ’ ಸಿನಿಮಾ 2012ರ ಜುಲೈ 6ರಂದು ಬಿಡುಗಡೆ ಆಯಿತು. ನಿರ್ದೇಶಕ ರಾಜಮೌಳಿ ಅವರ ಜೊತೆ ಕಿಚ್ಚ ಸುದೀಪ್​ ಅವರ ಕಾಂಬಿನೇಷನ್​ಗೆ ಜನರು ಫಿದಾ ಆದರು. ತುಂಬ ಡಿಫರೆಂಟ್​ ಆದ ಕಾನ್ಸೆಪ್ಟ್​ನಲ್ಲಿ ಮೂಡಿಬಂದ ಆ ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಗ್ರಾಫಿಕ್ಸ್​ ಬಳಕೆ ಹೇರಳವಾಗಿತ್ತು. ಸುದೀಪ್​ ಅವರು ನೆಗೆಟಿವ್​ ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡು ಚಪ್ಪಾಳೆ ಗಿಟ್ಟಿಸಿದರು. ಬಾಕ್ಸ್​ ಆಫೀಸ್​ನಲ್ಲಿ ‘ಈಗ’ ಸಿನಿಮಾ ಸೂಪರ್​ ಹಿಟ್​ ಆಯಿತು. ಆ ಗೆಲುವಿಗೆ ಈಗ 11 ವರ್ಷ ಆಗಿದೆ.

ಇದನ್ನೂ ಓದಿ: Kichcha Sudeep: ಕ್ಯಾನ್ಸರ್​ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್​

‘ಹುಚ್ಚ’ ಸಿನಿಮಾ ಬಿಡುಗಡೆಯಾಗಿ 22 ವರ್ಷ ಹಾಗೂ ‘ಈಗ’ ಚಿತ್ರ ತೆರೆಕಂಡು 11 ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಆ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದಿನ ಕಾಲ ಹೇಗಿತ್ತು ಎಂಬುದನ್ನು ಮೆಲುಕು ಹಾಕಲಾಗುತ್ತಿದೆ. ಪ್ರಸ್ತುತ ಸುದೀಪ್​ ಅವರು 46ನೇ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಟೀಸರ್​ ಇತ್ತೀಚೆಗಷ್ಟೇ ರಿಲೀಸ್​ ಆಗಿ ಹವಾ ಎಬ್ಬಿಸಿದೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್​ ಇರಲಿದೆ ಎಂಬುದು ಟೀಸರ್​ ನೋಡಿದರೆ ಗೊತ್ತಾಗುತ್ತದೆ. ವಿಜಯ್​ ಕಾರ್ತಿಕೇಯ ಅವರು ನಿರ್ದೇಶನ ಮಾಡುತ್ತಿದ್ದು, ಕಾಲಿವುಡ್​ ನಿರ್ಮಾಪಕ ಕಲೈಪುಲಿ ಎಸ್​. ಧಾನು ಅವರು ಬಂಡವಾಳ ಹೂಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us