Kiccha 46: ‘ಕಿಚ್ಚ 46’ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್​ ನೀಡಿದ ಚಿತ್ರತಂಡ; ಜುಲೈ 2ರಂದು ಟೀಸರ್​ ಬಿಡುಗಡೆ

Kiccha 46 Teaser: ಸುದೀಪ್​ ಅವರ ಹೊಸ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್​ ಬಿಡುಗಡೆ ಆಗಲಿದೆ.

Kiccha 46: ‘ಕಿಚ್ಚ 46’ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್​ ನೀಡಿದ ಚಿತ್ರತಂಡ; ಜುಲೈ 2ರಂದು ಟೀಸರ್​ ಬಿಡುಗಡೆ
ಕಿಚ್ಚ ಸುದೀಪ್​

Updated on: Jun 27, 2023 | 7:46 PM

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಹೊಸ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ 46ನೇ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಖತ್​ ಕೌತುಕ ಇದೆ. ಈ ಸಿನಿಮಾದ ಕೆಲಸಗಳು ಈಗ ಭರದಿಂದ ಸಾಗಿವೆ. ‘ವಿಕ್ರಾಂತ್​ ರೋಣ’ ಬಿಡುಗಡೆ ಆದ ಬಳಿಕ ಸುದೀಪ್​ ಅವರು ದೀರ್ಘ ಗ್ಯಾಪ್​ ಪಡೆದುಕೊಂಡಿದ್ದರು. ನಂತರ ಕ್ರಿಕೆಟ್​ ಕಡೆಗೆ ಗಮನ ನೀಡಿದ್ದರು. ಬಹಳ ದಿನಗಳ ಬಳಿಕ ಅವರು 46ನೇ ಸಿನಿಮಾದ (Kiccha 46) ಕೆಲಸಗಳಿಗೆ ಚಾಲನೆ ನೀಡಿದರು. ಈಗ ಈ ಸಿನಿಮಾ ತಂಡದಿಂದ ಹೊಸ ಅಪ್​ಡೇಟ್​ ನೀಡಲಾಗಿದೆ. ಈ ಸಿನಿಮಾದ ಟೀಸರ್​ ರಿಲೀಸ್​ ದಿನಾಂಕವನ್ನು ಬಹಿರಂಗ ಮಾಡಲಾಗಿದೆ. ಜುಲೈ 2ರಂದು ಬೆಳಗ್ಗೆ 11.46ಕ್ಕೆ ‘ಕಿಚ್ಚ 46’ ಚಿತ್ರದ ಟೀಸರ್ (Kiccha 46 Teaser)​ ಬಿಡುಗಡೆ ಆಗಲಿದೆ.

ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್​ ಅವರು ಮೂರು ಸಿನಿಮಾಗಳಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಆ ಪೈಕಿ ‘ವಿ ಕ್ರಿಯೇಷನ್ಸ್​’ನ ಕಲೈಪುಲಿ ಎಸ್​. ಧಾನು ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ಅವರು ಪ್ರೋಮೋ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು.

ಕಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್​’ ಜೊತೆ ಕಿಚ್ಚ ಸುದೀಪ್​ ಅವರು ಕೈ ಜೋಡಿಸಿದ್ದು, ಅದ್ದೂರಿ ಬಜೆಟ್​ನಲ್ಲಿ ‘ಕಿಚ್ಚ 46’ ಚಿತ್ರ ನಿರ್ಮಾಣ ಆಗುತ್ತಿದೆ. ‘ಕಬಾಲಿ’, ‘ತುಪಾಕಿ’, ‘ಅಸುರನ್​’ ಮುಂತಾದ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಕಲೈಪುಲಿ ಎಸ್​. ಧಾನು ಅವರಿಗೆ ಇದೆ.

ಇದನ್ನೂ ಓದಿ: ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಡೈರೆಕ್ಟರ್ ರಮೇಶ್ ಕಿಟ್ಟಿ ಬಂಧನ

‘ಕಿಚ್ಚ 46’ ಚಿತ್ರದ ಟೀಸರ್​ ನೋಡಲು ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಕಾದಿದ್ದಾರೆ. ಟೀಸರ್​ ರಿಲೀಸ್​ ಡೇಟ್​ ಯಾವುದು ಎಂಬುದನ್ನು ತಿಳಿಸುವ ಸಲುವಾಗಿ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಕಾಣಿಸಿಕೊಂಡಿದ್ದಾರೆ. ಅನೂಪ್​ ಭಂಡಾರಿ, ನಿರೂಪ್​ ಭಂಡಾರಿ, ಸಪ್ತಮಿ ಗೌಡ, ಡಾಲಿ ಧನಂಜಯ್​, ವಾಸುಕಿ ವೈಭವ್​, ಡಾರ್ಲಿಂಗ್​ ಕೃಷ್ಣ, ನವೀನ್​ ಶಂಕರ್​, ಅಮೃತಾ ಅಯ್ಯಂಗಾರ್​ ಮುಂತಾದವರು ‘ಡೇಟ್​ ಗೊತ್ತಾಯ್ತಾ’ ಎಂದು ಪ್ರಶ್ನೆ ಕೇಳುವ ಮೂಲಕ ಕೌತುಕ ಮೂಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:17 pm, Tue, 27 June 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us