ಬೆಂಗಳೂರು: ಸ್ಯಾಂಡಲ್ವುಡ್ಗೆ ಜೊತೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವ ಪ್ರಕರಣ ಸಂಬಂಧ ನೋಟಿಸ್ ಪಡೆದಿರುವ ನಟ ಯೋಗೀಶ್ ಅಲಿಯಾಸ್ ಲೂಸ್ ಮಾದ, ಇತ್ತೀಚೆಗೆ ಪಾರ್ಟಿ ವೇಳೆ ಸ್ಥಳೀಯರು ದೂರು ನೀಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಲೂಸ್ ಮಾದ ಯೋಗೀಶ್ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ನಿನ್ನೆ ISD ಪೊಲೀಸರು ಯೋಗೀಶ್‌ನನ್ನು ತನಿಖೆಗೆ ಒಳಪಡಿಸಿದ್ದರು. ತನಿಖೆ ಬಳಿಕ ಲೂಸ್ ಮಾದ ಯೋಗೀಶ್ ಬೆಂಗಳೂರಿನ ಕೋಣನಕುಂಟೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಅವರು ಪಾರ್ಟಿ ಮಾಡಿದ್ದು, ಅದಕ್ಕೆ ಸ್ಥಳೀಯರು ದೂರು ನೀಡಿರುವುದರ ಬಗ್ಗೆ ಮಾತನಾಡಿದ್ದಾರೆ.
ಶನಿವಾರ ನನಗೆ ನೋಟಿಸ್ ನೀಡಿದ್ದರು. ಸುಮಾರು 2 ಗಂಟೆ ಪೊಲೀಸರು ವಿಚಾರಣೆ ನಡೆಸಿದ್ರು. ಮಾಹಿತಿ ಪಡೆಯಲು ನನ್ನನ್ನು ಕರೆದಿರಬಹುದು. ರಾಗಿಣಿ ಬಗ್ಗೆ ನನ್ನ ಬಳಿ ಯಾವುದೇ ಪ್ರಶ್ನೆ ಕೇಳಿಲ್ಲ. 2013ರ ನಂತರ ನಟಿ ರಾಗಿಣಿ ಜತೆ ನಾನು ಸಂಪರ್ಕದಲ್ಲಿಲ್ಲ. ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ವಿಚಾರಣೆಗೆ ಮತ್ತೆ ಕರೆದ್ರೆ ಬರಬೇಕೆಂದು ಪೊಲೀಸರು ಹೇಳಿದ್ದಾರೆ ಎಂದು ಹೇಳಿದ್ರು.
ಸಿಗರೇಟ್, ಮದ್ಯ, ಗುಟ್ಕಾ ಸೇವಿಸಿ ಅಭ್ಯಾಸ ಇದೆ. ಆದರೆ ಬೇರೆ ಅಭ್ಯಾಸವಿಲ್ಲ:
ನಾನು ಪಾರ್ಟಿಯಲ್ಲಿ ಭಾಗಿಯಾಗಿದ್ದು ನಿಜ. ಪಾರ್ಟಿ ವೇಳೆ ಸ್ಥಳೀಯರು ಸೌಂಡ್ ಹೆಚ್ಚು ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. ಪಾರ್ಟಿ ಸ್ಥಳಕ್ಕೆ ಪೊಲೀಸರು ಬಂದಿದ್ರು. ನನಗೆ ಸಿಗರೇಟ್, ಮದ್ಯ, ಗುಟ್ಕಾ ಸೇವಿಸಿ ಅಭ್ಯಾಸ ಇದೆ. ಆದರೆ ಬೇರೆ ಅಭ್ಯಾಸವಿಲ್ಲ. ಪೊಲೀಸರು ನನ್ನ ಮೊಬೈಲ್ ಫೋನ್ ವಶಕ್ಕೆ ಪಡೆದಿಲ್ಲ ಎಂದು ಅವರ ಮೇಲಿದ್ದ ಪಾರ್ಟಿ ಆರೋಪವನ್ನು ತಳ್ಳಿ ಹಾಕಿದ್ದಾರೆ.
Published On - 1:05 pm, Tue, 22 September 20