ಮಲೆಯಾಳಂ ನಟಿ ಮಂಜಿಮಾ ಮೋಹನ್ ಬ್ಯೂಟಿ ಸೀಕ್ರೆಟ್​ ಏನು ಗೊತ್ತಾ?

|

Updated on: Sep 28, 2019 | 5:13 PM

ಹೊಸ ಅಲೆಯ ನಟಿಯರ ಪೈಕಿ ಮಲೆಯಾಲಂ ಬೆಡಗಿ ಮಂಜಿಮಾ ಮೋಹನ್​ ಮುಗ್ಧ ನಟನೆಯ ಮೂಲಕ ಸಿನಿರಸಿಕರನ್ನು ಗೆದ್ದ ತಾರೆ. ನಟನೆಯಲ್ಲಿ ಪರ್ಫೆಕ್ಟ್ ಆಗಿರೋ ಮಂಜಿಮಾ ಸೌಂದರ್ಯವನ್ನು ಅದೇ ರೀತಿ ಕಾಪಾಡಿದ್ದಾರೆ. ಮುದ್ದಾದ ಮುಖ, ಚಬ್ಬಿಚಬ್ಬಿಯಾದ ಕೆನ್ನೆ, ಚೆಂದದ ತುಟಿ ಇವರ ಸೌಂದರ್ಯವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ. ಸೌಂದರ್ಯ ಕಾಪಾಡಲು ಯಾವ ಮಾರ್ಗ ಅನುಸರಿಸ್ತಾರೆ ಅನ್ನೋ ಕುತುಹೂಲ ನಿಮಗಿದ್ಯಾ?: ಬ್ಯೂಟಿಫುಲ್ ನಟಿ ಮಂಜೀಮಾ ಅವರು ಪ್ರತಿದಿನ ತನ್ನೊಂದಿಗೆ ನೀರಿನ ಬಾಟಲಿಯನ್ನು ಒಯ್ಯುವುದನ್ನು ಮಿಸ್ ಮಾಡೋದೆ ಇಲ್ವಂತೆ. ಹೆಚ್ಚಿನ ಪ್ರಮಾಣದಲ್ಲಿ ನೀರು […]

ಮಲೆಯಾಳಂ ನಟಿ ಮಂಜಿಮಾ ಮೋಹನ್ ಬ್ಯೂಟಿ ಸೀಕ್ರೆಟ್​ ಏನು ಗೊತ್ತಾ?
Follow us on

ಹೊಸ ಅಲೆಯ ನಟಿಯರ ಪೈಕಿ ಮಲೆಯಾಲಂ ಬೆಡಗಿ ಮಂಜಿಮಾ ಮೋಹನ್​ ಮುಗ್ಧ ನಟನೆಯ ಮೂಲಕ ಸಿನಿರಸಿಕರನ್ನು ಗೆದ್ದ ತಾರೆ. ನಟನೆಯಲ್ಲಿ ಪರ್ಫೆಕ್ಟ್ ಆಗಿರೋ ಮಂಜಿಮಾ ಸೌಂದರ್ಯವನ್ನು ಅದೇ ರೀತಿ ಕಾಪಾಡಿದ್ದಾರೆ. ಮುದ್ದಾದ ಮುಖ, ಚಬ್ಬಿಚಬ್ಬಿಯಾದ ಕೆನ್ನೆ, ಚೆಂದದ ತುಟಿ ಇವರ ಸೌಂದರ್ಯವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ.

ಸೌಂದರ್ಯ ಕಾಪಾಡಲು ಯಾವ ಮಾರ್ಗ ಅನುಸರಿಸ್ತಾರೆ ಅನ್ನೋ ಕುತುಹೂಲ ನಿಮಗಿದ್ಯಾ?:
ಬ್ಯೂಟಿಫುಲ್ ನಟಿ ಮಂಜೀಮಾ ಅವರು ಪ್ರತಿದಿನ ತನ್ನೊಂದಿಗೆ ನೀರಿನ ಬಾಟಲಿಯನ್ನು ಒಯ್ಯುವುದನ್ನು ಮಿಸ್ ಮಾಡೋದೆ ಇಲ್ವಂತೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಶರೀರವನ್ನು ತೇವಾಂಶದಿಂದ ಇರುವಂತೆ ಮಾಡಿ ಸೌಂದರ್ಯದ ಮೇಲೇ ಗಾಢ ಪರಿಣಾಮ ಬೀರುತ್ತಂತೆ. ಮನೆಯಿಂದ 15 ನಿಮಿಷ ಇರಲಿ ಅಥವಾ 5 ಗಂಟೆಗಳ ಕಾಲವೇ ಇರಲಿ ಸನ್ಸ್ಕ್ರೀನ್ ಕಡ್ಡಾಯವಾಗಿ ಯೂಸ್ ಮಾಡ್ತಾರಂತೆ ಈ ಚೆಲುವೆ. ನಮ್ಮ ವಾತಾವರಣಕ್ಕೆ ತ್ವಚೆಯನ್ನು ಹೆಲ್ತಿಯಾಗಿಡಲು ಸನ್​ಸ್ಕ್ರೀನ್ ಅತ್ಯವಶ್ಯಕ ಅಂತಾರೆ ಮಂಜೀಮಾ. ಹಾಗೆಯೇ ಇವರ ತುಟಿಗಳಿಗೆ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯುವುದಿಲ್ಲ.

ದಿನದಲ್ಲಿ ಹೆಚ್ಚಿನ ಪ್ರಮಾಣದ ಫ್ರೂಟ್ಸ್​ ತಿಂತಾರಂತೆ. ಹಾಗೆಯೇ ಸಮ್ಮರ್ ಟೈಮ್​ನಲ್ಲಿ ನಾನ್​ವೆಜ್​ ಪದಾರ್ಥಗಳಿಂದ ದೂರ ಇರ್ತಾರಂತೆ. ಯಾಕಂದ್ರೆ ಇದು ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸಿ ತ್ವಚೆಯ ಮೇಲೆ ಪರಿಣಾಮ ಬೀರಬಹುದು ಅನ್ನೋದು ಮಂಜಿಮಾ ಅಭಿಪ್ರಾಯ. ಆದ್ರೆ ಈ ಸಮಯದಲ್ಲಿ ಮೀನು ಸೇವನೇ ತ್ವಚೆಗೆ ಒಳ್ಳೆಯದು ಅಂತಾರೆ.

ದೇವರನಾಡು ಕೇರಳದ ಬ್ಯೂಟಿ ಮಂಜಿಮಾ ವಾರದಲ್ಲಿ ಮೂರು ಬಾರಿ ತನ್ನ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡ್ತಾರಂತೆ. ಹಾಗೆಯೇ ಫೇಸ್ ಕ್ಲೀನ್ ಅಪ್ ಕೂಡಾ ಇವರ ಬ್ಯೂಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ಮುಖದಲ್ಲಿ ಸದಾ ನಗು ಇದ್ದರೆ ಮಾತ್ರ ಸೌಂದರ್ಯದ ಹೊಸ ಮೆರಗು ಬರುತ್ತೆ ಅಂತಾರೆ ಬ್ಯೂಟಿ ಕ್ವೀನ್ ಮಂಜಿಮಾ

Published On - 3:40 pm, Sat, 28 September 19