ಬೆಂಗಳೂರು: ಪ್ರೇಮಿಗಳ ದಿನದಂದೇ ಜೂನಿಯರ್ ಚಿರುವಿನ ದರ್ಶನ ಮಾಡಿಸುತ್ತೇನೆಂದು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದ ಮೇಘನಾ ರಾಜ್ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಜೂನಿಯರ್ ಚಿರುವಿನ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ಮೊದಲ ಬಾರಿಗೆ ಪುಟ್ಟ ಕಂದಮ್ಮನ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಅಕ್ಟೊಬರ್ 22 ರಂದು ಜೂನಿಯರ್ ಚಿರುವಿನ ಜನನವಾಗಿತ್ತು. ಇನ್ನು ವಿಶೇಷ ಅಂದ್ರೆ ಅಂದೇ ಚಿರು ಮತ್ತು ಮೇಘನಾ ಎಂಗೇಜ್ ಮೆಂಟ್ ಆಗಿದ್ದರು.
2020 ಸಿನಿಮಾ ರಂಗಕ್ಕೆ ಅತೀ ಕೆಟ್ಟ ವರ್ಷ. ಯಾಕಂದ್ರೆ ಆ ವರ್ಷ ಚಿತ್ರರಂಗ ಉತ್ತಮ ನಟರನ್ನು ಕಳೆದುಕೊಂಡಿದೆ. ಅದರಲ್ಲಿ ಚಿರಂಜೀವಿ ಸರ್ಜಾ ಕೂಡ ಒಬ್ಬರು. ಜೂನಿಯರ್ ಚಿರು ಆಗಮನದಿಂದ ಚಿರುನೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಕುಟುಂಬಸ್ಥರು ಮತ್ತು ಅಭಿಮಾನಿಗಳು ನಂಬಿಕೊಂಡಿದ್ದಾರೆ.
ಜೂ. ಚಿರು ಹುಟ್ಟಿದಾಗ ಫೋಟೋ ರಿವೀಲ್ ಮಾಡಿದ್ದ ಚಿರಂಜೀವಿ ಕುಟುಂಬ ಮತ್ತೇ ಯಾವತ್ತೂ ಮಗುವಿನ ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಂಡಿರಲಿಲ್ಲ. ಪ್ರೇಮಿಗಳ ದಿನದಂದು ಜೂ ಚಿರುವನ್ನು ಜಗತ್ತಿಗೆ ಪರಿಚಯಿಸುವುದಾಗಿ ಕೆಲ ದಿನಗಳ ಹಿಂದೆ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ತಮ್ಮ ಇನ್ಸ್ಟಾಗ್ರಾಮ್ ಖಾತೆ ಹೇಳಿಕೊಂಡಿದ್ದರು. ಅದರಂತೆ ಇಂದು ತಮ್ಮ ಪುಟ್ಟ ಕಂದಮ್ಮನ ವಿಡಿಯೋ ಹಂಚಿಕೊಂಡಿದ್ದಾರೆ. ನಮ್ಮ ಸಿಂಬಾ ಎಂದು ಮಗುವಿನ ವಿಡಿಯೋ ಪೂಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Meghana Raj: ಪ್ರೇಮಿಗಳ ದಿನಕ್ಕೆ ಚಿರು ಪುತ್ರನ ಪೋಟೋ ರಿವೀಲ್