AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಪ್ರೇಮಿಗಳ ದಿನಕ್ಕೆ ಚಿರು ಪುತ್ರನ ಪೋಟೋ ರಿವೀಲ್

Meghana Raj Instagram Post: ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೆ ಜೂನಿಯರ್ ಚಿರಂಜೀವಿಯ ಪೋಟೋವನ್ನು ರಿವೀಲ್ ಮಾಡುತ್ತೇವೆ ಎಂದು ನಟಿ ಮೇಘನಾ ರಾಜ್ ಸಾಮಾಜಿಕ ಕಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಮೇಘನಾ ತಮ್ಮ ಮುದ್ದು ಮಗುವಿನ ಪೋಟೋ ಹಂಚಿಕೊಂಡಿಲ್ಲ.

Meghana Raj: ಪ್ರೇಮಿಗಳ ದಿನಕ್ಕೆ ಚಿರು ಪುತ್ರನ ಪೋಟೋ ರಿವೀಲ್
ಮೇಘನಾ ರಾಜ್ ಸರ್ಜಾ
Follow us
sandhya thejappa
|

Updated on:Feb 12, 2021 | 10:58 AM

ಬೆಂಗಳೂರು: ಇತ್ತಿಚೆಗೆ ಮೇಘನಾ ರಾಜ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಶೇಷವಾದ ಪೋಸ್ಟ್ ಹಾಕಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತ್ತು. ಸದ್ಯ ಆ ಸಂದೇಶಕ್ಕೆ ಇಂದು ಬ್ರೇಕ್ ಬಿದ್ದಿದೆ. ಇದೇ ಫೆಬ್ರವರಿ 14 ಪ್ರೇಮಿಗಳ ದಿನದಂದೇ ಜೂನಿಯರ್ ಚಿರು ಪೋಟೋ ರಿವೀಲ್ ಮಾಡೋದಾಗಿ ಮೇಘನಾ ರಾಜ್ ಇನ್​ಸ್ಟಾಗ್ರಾಮ್​ನಲ್ಲಿ ಮಾಹಿತಿ ನೀಡಿದ್ದಾರೆ.

ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೆ ಜೂನಿಯರ್ ಚಿರಂಜೀವಿಯ ಫೋಟೋವನ್ನು ರಿವೀಲ್ ಮಾಡುತ್ತೇವೆ ಎಂದು ನಟಿ ಮೇಘನಾ ರಾಜ್ ಸಾಮಾಜಿಕ ಕಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಮೇಘನಾ ತಮ್ಮ ಮುದ್ದು ಮಗುವಿನ ಪೋಟೋ ಹಂಚಿಕೊಂಡಿಲ್ಲ. ಸದ್ಯ ಚಿರು ಹಾಗು ಮೇಘನಾ ಬಾಂಧವ್ಯದ ವಿಡಿಯೋ ಹರಿ ಬಿಟ್ಟು ತನ್ನ ಪುತ್ರನ ಫೋಟೋವನ್ನು ರಿವೀಲ್ ಮಾಡುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ನಟ ಚಿರಂಜೀವಿ ಮತ್ತು ನಟಿ ಮೇಘನಾ ರಾಜ್ ಪ್ರೀತಿಸಿ ವಿವಾಹವಾಗಿದ್ದರು. 2018 ಮೇ 2ರಂದು ಸಪ್ತಪತಿ ತುಳಿದಿದ್ದರು. ಚಿರು ಮತ್ತು ಮೇಘನಾ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಮೇಘನಾ ತಾಯಿ ಪ್ರಮಿಳಾ ಜೋಷಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾದ್ದರಿಂದ ಏಪ್ರಿಲ್ 29ರಂದು ರೋಮನ್ ಕ್ಯಾಥೋಲಿಕ್ ಪದ್ಧತಿಯಲ್ಲಿ ಮದುವೆಯಾಗಿದ್ದರು. ಆ ಬಳಿಕ  ಮೇ 2ರಂದು ಹಿಂದೂ ಧರ್ಮದ ಸಂಪ್ರದಾಯದಂತೆ ಅರಮನೆ ಮೈದಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

View this post on Instagram

A post shared by Meghana Raj Sarja (@megsraj)

2020 ರ ಜೂನ್ 7 ರಂದು ಚಿರಂಜೀವಿ ಉಸಿರಾಟದ ಸಮಸ್ಯೆಯಿಂದ ನಿಧನ ಹೊಂದಿದ್ದರು. ಈ ಹೊತ್ತಿಗೆ ಮೇಘನಾ ರಾಜ್​ ಗರ್ಭಿಣಿಯಾಗಿದ್ದರು. ತನ್ನ ಗಂಡನ ಸಾವಿನ ನೋವಲ್ಲಿದ್ದ ಮೇಘನಾರನ್ನು ಮೈದುನ ದ್ರುವ ಸರ್ಜಾ ತಮ್ಮನಂತೆ ಹೆಗಲಾಗಿ ನಿಂತರು. 2020 ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಮೇಘನಾ ರಾಜ್ ಪುತ್ರನಿಗೆ ದ್ರುವ ಸರ್ಜಾ ಸುಮಾರು ಅಂದಾಜು 10 ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಖರೀದಿಸಿದ್ದರು.

ಇದನ್ನೂ ಓದಿ: 1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲು ಸಿದ್ಧವಾಗ್ತಿದೆ ಪೊಗರು.. ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್

Published On - 9:59 am, Fri, 12 February 21