AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲು ಸಿದ್ಧವಾಗ್ತಿದೆ ಪೊಗರು.. ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್

Cinema News | ಟಾಲಿವುನಲ್ಲಿ ಸ್ಯಾಂಡಲ್​ವುಡ್ ಸಿನಿಮಾಗಳ ಕ್ರೇಜ್ ದೊಡ್ಡ ಸಂಚಲನ ಮೂಡಿಸೋದು ಫಿಕ್ಸ್ ಆಗಿದೆ. ಇಷ್ಟು ದಿನ ರಾಜ್ಯದಲ್ಲಿ ತೆಲುಗು ಸಿನಿಮಾಗಳು ಅಬ್ಬರಿಸ್ತಾವೆ ಅಂತಿತ್ತು. ಆದ್ರೀಗ, ಟಾಲಿವುಡ್‌ ಸಾಮ್ರಾಜ್ಯವನ್ನ ಆಳೋಕೆ ಕನ್ನಡದ ಸ್ಟಾರ್‌ಗಳು ರೆಡಿಯಾಗಿದ್ದಾರೆ.

1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲು ಸಿದ್ಧವಾಗ್ತಿದೆ ಪೊಗರು.. ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್
ನಟ ಧ್ರುವ ಸರ್ಜಾ
ಆಯೇಷಾ ಬಾನು
|

Updated on:Feb 12, 2021 | 7:03 AM

Share

ಸ್ಯಾಂಡಲ್​ವುಡ್‌ನ ಬಿಗ್‌ಸ್ಟಾರ್‌ಗಳ ಸಿನಿಮಾಗಳು ಟಾಲಿವುಡ್, ಕಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡೋದು ಕನ್ಫರ್ಮ್ ಆಗಿದೆ. ಸದ್ಯಕ್ಕಂತೂ ಸ್ಯಾಂಡಲ್​ವುಡ್ ಸಿನಿಮಾಗಳ ರಿಲೀಸ್‌ಗೆ ಎದುರಾಗಿದ್ದ ಅಡೆತಡೆಗಳಿಗೆ ಬ್ರೇಕ್ ಬಿದ್ದಿದ್ದು ಮೊದಲ ಸಿನಿಮಾ ಪೊಗರು ಬೆಳ್ಳಿ ಪರದೆ ಮೇಲೆ ಅಬ್ಬರಿಸೋಕೆ ರೆಡಿಯಾಗಿದೆ. ಅಂದ್ಹಾಗೆ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾಗೆ ಥಿಯೇಟರ್ ಫಿಕ್ಸ್ ಆಗಿವೆ.

ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಬರೋಬ್ಬರಿ 1100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದ್ರಲ್ಲಿ ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲೇ ಪೊಗರಿಗೆ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ಫಿಕ್ಸ್ ಆಗಿದ್ಯಂತೆ. ಹೀಗಾಗಿ ಪೊಗರು ನಂತರ ರಿಲೀಸ್ ಆಗ್ತಿರೋ ರಾಬರ್ಟ್.. ಯುವರತ್ನ.. ಕೋಟಿಗೊಬ್ಬ-3. ಕೆಜಿಎಫ್ ಎಲ್ಲವೂ ಪರಭಾಷೆ ಸಿನಿಮಾ ಅಭಿಮಾನಿಗಳನ್ನ ಮೋಡಿ ಮಾಡಲಿವೆ.

ಇನ್ನು, ರಾಬರ್ಟ್ ತಂಡ ಸಿನಿಮಾದ ಬಗ್ಗೆ ಒಂದೊಂದೇ ಅಪ್ ಡೇಟ್ ನೀಡಿ ಅಭಿಮಾನಿಗಳಲ್ಲಿ ಮತ್ತಷ್ಟು ನಿರೀಕ್ಷೆ ಹುಟ್ಟು ಹಾಕ್ತಿದೆ. ಸದ್ಯಕ್ಕಂತೂ ರಾಬರ್ಟ್ ಸಿನಿಮಾದ ತೆಲುಗು ಸಾಂಗ್ ಇಂದು ರಿಲೀಸ್ ಆಗ್ತಿದೆ. ನಂತರ ಫೆಬ್ರವರಿ-16ಕ್ಕೆ ದರ್ಶನ್ ಹುಟ್ಟುಹಬ್ಬಕ್ಕೆ ಟ್ರೇಲರ್‌ ರಿಲೀಸ್ ಮಾಡಿ ದರ್ಶನ್‌ಗೆ ಬರ್ತ್‌ಡೇ ಗಿಫ್ಟ್ ನೀಡಲಿದೆ ಚಿತ್ರತಂಡ.

ಒಟ್ನಲ್ಲಿ, ಈಗಾಗ್ಲೇ ಕನ್ನಡದ ಸಿನಿಮಾಗಳು ಮಾಡ್ತಿರೋ ಮೋಡಿಗೆ ಪರಭಾಷೆ ಸಿನಿಮಾ ಮಂದಿ ಬೆರಗುಗಣ್ಣಿಂದ ನೊಡ್ತಿದ್ದಾರೆ. ಕೆಜಿಎಫ್ -2 ಟ್ರೈಲರ್ ಮಾಡಿರೋ ಮೋಡಿ ಸದ್ಯ ರಿಲೀಸ್ ಆಗ್ತಿರೋ ಕನ್ನಡ ಸಿನಿಮಾಗಳ ಮೇಲಿನ ಕುತೂಹಲ ಹೆಚ್ಚು ಮಾಡ್ತಿದೆ.

 ಇದನ್ನೋ ಓದಿ: ಪ್ರೇಮಿಗಳ ದಿನಕ್ಕೆ ‘ಪೊಗರು’ ಹುಡುಗನ ಹಾಡುಗಳ ದರ್ಬಾರ್

Published On - 6:52 am, Fri, 12 February 21

Follow Us
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ವಿದಾನಸೌಧ ಮೇಲೆ ಹಾರಾಡಿದ ಹೆಲಿಕಾಪ್ಟರ್‌, NSG ಕಮಾಂಡೋ ಮಾಕ್ ಡ್ರಿಲ್ ನೋಡಿ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ