ಬೆಂಗಳೂರು: ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೂರಕ್ಕೆ ನೂರು ಸತ್ಯ. ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನಮ್ಮ ಮದರಸಾದಲ್ಲೇ ಎಂದು ನಗರದ ಟ್ಯಾನರಿ ರೋಡ್ನಲ್ಲಿರುವ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಸಾದ ಮೌಲಾನಾ ಜೈನುಲ್ ಅಬ್ಬಿದ್ದೀನಿ ಸ್ಪಷ್ಟನೆ ನೀಡಿದ್ದಾರೆ.
ಹಿಂದಿ ನಟ ದಿಲೀಪ್ ಕುಮಾರ್ರ ಮೂಲ ಹೆಸರು ಮಹಮ್ಮದ್ ಯೂಸುಫ್. ಆದರೆ ಅವರು ದಿಲೀಪ್ ಕುಮಾರ್ ಎಂಬ ಹೆಸರಿನಿಂದ ಫೇಮಸ್ ಆಗಿದ್ರು. ಹಾಗಾಗಿ ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಸಮಸ್ಯೆ ಅಲ್ಲ ಎಂದು ಮೌಲಾನಾ ಸ್ಪಷ್ಟನೆ ನೀಡಿದ್ದಾರೆ.
ಸಂಜನಾ ಮದುವೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಇಸ್ಲಾಂನಲ್ಲಿ ದಂಧೆ ಮಾಡುವುದು ತಪ್ಪು. ಅದನ್ನು ಬಿಟ್ಟು ಬಂದ್ರೆ ನಾವು ಅವರನ್ನು ಮುಸ್ಲಿಂ ಎಂದೇ ಸ್ವೀಕರಿಸುತ್ತೆವೆ. ನಾನು ಜೈಲ್ಗೆ ಅವರನ್ನು ಭೇಟಿ ಆಗಲು ಹೋಗಲ್ಲ. ಹಾಗೆ ಹೋಗುವ ಹಾಗಿಲ್ಲ. ನಾನು ತಪ್ಪು ಮಾಡಿದ್ದೀನಿ ಅಂತಾ ಸಂಜನಾ ಅಲ್ಲಾಹುವಿನ ಬಳಿ ಬೇಡಿಕೊಂಡ್ರೆ ಮತ್ತೆ ಅವರಿಗೆ ಅಲ್ಲಾಹು ಅವಕಾಶ ಕೊಡ್ತಾರೆ ಎಂದು ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಾಸದ ಮೌಲಾನಾ ಜೈನುಲ್ ಅಬ್ಬಿದ್ದೀನಿ ಹೇಳಿದ್ದಾರೆ.