Vijay Prakash: ‘ನನ್ನ ಧ್ವನಿ ಕಿಚ್ಚ ಸುದೀಪ್ಗೆ ಸಖತ್ ಸೂಟ್ ಆಗುತ್ತೆ’; ವಿಜಯ್ ಪ್ರಕಾಶ್
ಕೊವಿಡ್ ಸಂಕಷ್ಟದ ಸಂದರ್ಭದಿಂದ ಸಾಕಷ್ಟು ಜನರಿಗೆ ತೊಂದರೆ ಎದುರಾಗಿದೆ. ಇದಕ್ಕೆ ಕಲಾವಿದರು ಕೂಡ ಹೊರತಾಗಿಲ್ಲ. ಸಾಕಷ್ಟು ಕಲಾವಿದರು ಶೂಟಿಂಗ್ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಸಹಾಯಕ್ಕೆ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡ ಮುಂದೆ ಬಂದಿದೆ.
ಕೊವಿಡ್ ಸಂಕಷ್ಟದ ಸಂದರ್ಭದಿಂದ ಸಾಕಷ್ಟು ಜನರಿಗೆ ತೊಂದರೆ ಎದುರಾಗಿದೆ. ಇದಕ್ಕೆ ಕಲಾವಿದರು ಕೂಡ ಹೊರತಾಗಿಲ್ಲ. ಸಾಕಷ್ಟು ಕಲಾವಿದರು ಶೂಟಿಂಗ್ ಇಲ್ಲದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರ ಸಹಾಯಕ್ಕೆ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡ ಮುಂದೆ ಬಂದಿದೆ. ‘ಕಲಾನಿಧಿ’ ಕಾರ್ಯಕ್ರಮದ ಮೂಲಕ ಅವರು ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ. ಗಾಯಕ ವಿಜಯ್‌ಪ್ರಕಾಶ್ ಈ ಕಾರ್ಯಕ್ರಮದ ನೇತೃತ್ವ ಹೊತ್ತುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಸಂಸದ ತೇಜಸ್ವಿ ಸೂರ್ಯ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆದಿದೆ. ಜೂನ್ 25-27 ಅವಧಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ವಿಶೇಷ ಕಾರ್ಯಕ್ರದ ಬಗ್ಗೆ ಹಾಗೂ ಇತರ ವಿಚಾರಗಳ ಬಗ್ಗೆ ಟಿವಿ9 ಕನ್ನಡದ ಜತೆಗೆ ವಿಜಯ್ ಪ್ರಕಾಶ್ ಮಾತನಾಡಿದ್ದಾರೆ. ಆಗ, ಅವರು ತಮ್ಮ ಧ್ವನಿ ಯಾರಿಗೆ ಹೆಚ್ಚು ಸೂಟ್ ಆಗುತ್ತದೆ ಎಂದು ಹೇಳಿಕಂಡಿದ್ದಾರೆ.
