ಮುಂಬೈ: ಖ್ಯಾತ ಬಾಲಿವುಡ್‌ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಸುಂಶಾಂತ್‌ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪದ ಮೇಲೆ ಒಬ್ಬ ಡ್ರಗ್ಸ್ ಪೂರೈಕೆದಾರನನ್ನು ಌಂಟಿ ನಾರ್ಕೋಟಿಕ್ಸ್ ಬ್ಯೂರೋ ಅರೆಸ್ಟ್ ಮಾಡಿದೆ.
ಇದರೊಂದಿಗೆ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಮೊದಲ ಬಂಧನವಾದಂತಾಗಿದೆ. ಆದ್ರೆ ನ್ಯಾರ್ಕೋ ಬ್ಯೂರೋ ಅಧಿಕಾರಿಗಳು ಮಾತ್ರ ಬಂಧಿಸಿರುವ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಮತ್ತಷ್ಟು ಕುತೂಹಲ ಮೂಡಿಸಿದೆ.
ಆದ್ರೆ ಇದುವರೆಗಿನ ವಿಚಾರಣೆಯಲ್ಲಿ ಈ ಡ್ರಗ್ಸ್ ಪೆಡ್ಲರ್‌ಗಳು ದೇಶದ ವಿವಿಧ ಮೆಟ್ರೋಗಳಲ್ಲಿ ಹೈ ಎಂಡ್ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸುತಿದ್ದರೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಇದರಲ್ಲಿ ಬೆಂಗಳೂರಿನ ಮೂವರು ಪೇಜ್ 3 ಸೆಲಿಬ್ರೆಟಿಗಳೂ ಇವರಿಂದ ಡ್ರಗ್ಸ್ ಪಡೆದಿರುವವರಲ್ಲಿ ಸೇರಿದ್ದಾರೆಂದು ತಿಳಿದು ಬಂದಿದೆ.
ಈ ಸಂಬಧ ವಿಸ್ತೃತವಾದ ತನಿಖೆಗೆ ಖುದ್ದು ಎನ್‌ಸಿಬಿ ಉನ್ನತ ಅಧಿಕಾರಿಗಳೇ ಈಗ ಫೀಲ್ಡಿಗಿಳಿದಿದ್ದು, ಸ್ವತಃ ಎನ್‌ಸಿಬಿ ನಿರ್ದೇಶಕ ರಾಕೇಶ್ ಆಸ್ತಾನಾ ಈಗ ದೆಹಲಿಯಿಂದ ಎನ್‌ಸಿಬಿ ಸ್ಪೇಷಲ್ ಡೈರೆಕ್ಟರ್ ಕೆಪಿಎಸ್ ಮಲ್ಹೋತ್ರಾ ಅವರನ್ನು ಮುಂಬೈಗೆ ಖುದ್ದಾಗಿ ತನಿಖೆಯ ನೇತೃತ್ವ ವಹಿಸಲು ಕಳಿಸಿದ್ದಾರೆಂದು ತಿಳಿದು ಬಂದಿದೆ.