ಸ್ಯಾಂಡಲ್ವುಡ್ ಡ್ರಗ್ಸ್ ಜಾಲ ದೇಶಾದ್ಯಂತ: ಮುಂಬೈ, ಗೋವಾ, ದೆಹಲಿಯಲ್ಲೂ ರೇಡ್
[lazy-load-videos-and-sticky-control id=”q7qGRl2t7bQ”] ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಇದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿರುವ NCBಗೆ ಮಹತ್ವದ ಮಾಹಿತಿ ಸಿಕ್ಕಿದೆ. ಇದು ಕೇವಲ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ಆಗಿ ಉಳಿದಿಲ್ಲ. ಭಾರತದ ಪ್ರಮುಖ ಡ್ರಗ್ಸ್ ಜಾಲದ ಕೇಸ್ ಆಗಿದೆ. ಬೆಂಗಳೂರು, ಮುಂಬೈ, ಗೋವಾ, ದೆಹಲಿಯಲ್ಲಿ NCB ಈ ಬಗ್ಗೆ ತನಿಖೆ ನಡೆಸಿದೆ. ಈವರೆಗೆ ಕಿಂಗ್‌ಪಿನ್ ಅನಿಕಾ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲಿ ಅನಿಕಾ, ಅನೂಪ್, ರಿಜೇಶ್ ರವೀಂದ್ರನ್ ಸೆರೆ ಹಿಡಿಯಲಾಗಿದೆ. […]
[lazy-load-videos-and-sticky-control id=”q7qGRl2t7bQ”]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಇದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿರುವ NCBಗೆ ಮಹತ್ವದ ಮಾಹಿತಿ ಸಿಕ್ಕಿದೆ. ಇದು ಕೇವಲ ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್ ಆಗಿ ಉಳಿದಿಲ್ಲ. ಭಾರತದ ಪ್ರಮುಖ ಡ್ರಗ್ಸ್ ಜಾಲದ ಕೇಸ್ ಆಗಿದೆ.
ಬೆಂಗಳೂರು, ಮುಂಬೈ, ಗೋವಾ, ದೆಹಲಿಯಲ್ಲಿ NCB ಈ ಬಗ್ಗೆ ತನಿಖೆ ನಡೆಸಿದೆ. ಈವರೆಗೆ ಕಿಂಗ್‌ಪಿನ್ ಅನಿಕಾ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ. ಕರ್ನಾಟಕದಲ್ಲಿ ಅನಿಕಾ, ಅನೂಪ್, ರಿಜೇಶ್ ರವೀಂದ್ರನ್ ಸೆರೆ ಹಿಡಿಯಲಾಗಿದೆ.
ಮುಂಬೈನಲ್ಲಿ ಚೌದ್ರಿ ದಂಪತಿ, ಮೊಹಮ್ಮದ್ ರೆಹಮಾನ್, R.S.ಭತ್ರಿ, ಗೋವಾ ಮೂಲದ ಫಯೂದ್ ಅಹ್ಮದ್ ಬಂಧಿಸಲಾಗಿದೆ. ಆರೋಪಿ ಫಯೂದ್ ಅಹ್ಮದ್ ದೆಹಲಿಯಲ್ಲಿ ಡ್ರಗ್ಸ್ ಇಟ್ಟಿದ್ದ. NCB ಅಹ್ಮದ್ ಸಂಗ್ರಹಿಸಿಟ್ಟಿದ್ದ ಡ್ರಗ್ಸ್ ವಶಕ್ಕೆ ಪಡೆದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
Published On - 10:03 am, Wed, 2 September 20