ವೆಂಟಿಲೆಟರ್ ಇಲ್ಲದೆ SPBಗೆ ಚಿಕಿತ್ಸೆ ಕೊಡಲು ಸಾಧ್ಯವಾಗ್ತಿಲ್ಲ, ಆತಂಕದಲ್ಲಿ ವೈದ್ಯರು

|

Updated on: Aug 19, 2020 | 4:46 PM

[lazy-load-videos-and-sticky-control id=”Wks2okld42g”] ಚೆನ್ನೈ:ಕೊರೊನಾ ಸೋಂಕು ದೃಢಪಟ್ಟ ಮೇಲೆ ಏಳು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ S.P. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ. ತೀರ ಹಾನಿಗೊಳಗಾಗಿರುವ SPB ಶ್ವಾಸಕೋಶ ಕೊರೊನಾ ಸೋಂಕು ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ SPB ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಷ್ಟು ದಿನಗಳಾದರೂ ಎಸ್ಪಿಬಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರುತ್ತಿಲ್ಲ. ಆಸ್ಪತ್ರೆಯ ವೈದ್ಯರು ವೆಂಟಿಲೇಟರ್ ಇಲ್ಲದೆ ಎಸ್ಪಿಬಿ ಅವರಿಗೆ ಚಿಕಿತ್ಸೆ ಕೊಡಲು ಪ್ರಯತ್ನ […]

ವೆಂಟಿಲೆಟರ್ ಇಲ್ಲದೆ SPBಗೆ ಚಿಕಿತ್ಸೆ ಕೊಡಲು ಸಾಧ್ಯವಾಗ್ತಿಲ್ಲ, ಆತಂಕದಲ್ಲಿ ವೈದ್ಯರು
Follow us on

[lazy-load-videos-and-sticky-control id=”Wks2okld42g”]

ಚೆನ್ನೈ:ಕೊರೊನಾ ಸೋಂಕು ದೃಢಪಟ್ಟ ಮೇಲೆ ಏಳು ದಿನಗಳಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾನ ಗಾರುಡಿಗ S.P. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದೆ.

ತೀರ ಹಾನಿಗೊಳಗಾಗಿರುವ SPB ಶ್ವಾಸಕೋಶ
ಕೊರೊನಾ ಸೋಂಕು ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿರುವ SPB ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇಷ್ಟು ದಿನಗಳಾದರೂ ಎಸ್ಪಿಬಿ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರುತ್ತಿಲ್ಲ. ಆಸ್ಪತ್ರೆಯ ವೈದ್ಯರು ವೆಂಟಿಲೇಟರ್ ಇಲ್ಲದೆ ಎಸ್ಪಿಬಿ ಅವರಿಗೆ ಚಿಕಿತ್ಸೆ ಕೊಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವೈದ್ಯರ ಚಿಕಿತ್ಸೆಗೆ ಎಸ್ಪಿಬಿಯವರ ದೇಹ ಸ್ಪಂದಿಸದೆ ಇರುವುದು ವೈದ್ಯರಿಗೆ ಆತಂಕ ತಂದಿಟ್ಟಿದೆ. ಎಸ್ಪಿಬಿಯವರ ಶ್ವಾಸಕೋಶವು ತೀರ ಹಾನಿಗೊಳಗಾಗಿದ್ದು ಯಾವುದೇ ರೀತಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.

ನಿನ್ನೆ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿಲ್ಲ
ಹೀಗಾಗಿ ಎಸ್ಪಿಬಿಯವರ ಶ್ವಾಸಕೋಶ ನಿರ್ವಹಿಸಬೇಕಾದ ಕೆಲಸವನ್ನು, ವೈದ್ಯರು ಅಳವಡಿಸಿರುವ ವೆಂಟಿಲೇಟರ್ ನಿರ್ವಹಿಸುತ್ತಿದೆ. ಇದರಿಂದಾಗಿ ಎಸ್ಪಿಬಿ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಆಸ್ಪತ್ರೆಯಿಂದ ದಿನನಿತ್ಯ ಬಿಡುಗಡೆಯಾಗುವ ಹೆಲ್ತ್ ಬುಲೆಟಿನ್ ನಿನ್ನೆ ಬಿಡುಗಡೆಯಾಗಿಲ್ಲ. ಹೀಗಾಗಿ ಎಸ್ಪಿಬಿ ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.

Published On - 10:45 am, Wed, 19 August 20