ನಿರೀಕ್ಷಿತ ಯಶಸ್ಸು ಕಾಣದ ವರ್ಲ್ಡ್ ಫೇಮಸ್ ಲವ್ವರ್, ನಟನ ನಿರ್ಧಾರದಿಂದ ಫ್ಲಾಪ್ ಆಯ್ತಾ ಚಿತ್ರ?
ಟಾಲಿವುಡ್ನ ವಿಜಯ್ ದೇವರಕೊಂಡ ಸದ್ಯ ವರ್ಲ್ಡ್ ಫೇಮಸ್ ಲವರ್ ಆಗಿ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡ್ತಿದ್ದಾರೆ. ಆದ್ರೆ ವಿಜಯ್ ದೇವರಕೊಂಡ ಅಂದುಕೊಂಡಂಗೆ ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ಪಡೆಯೋದ್ರಲ್ಲಿ ವಿಫಲವಾಗಿದೆ. ದೇವರಕೊಂಡ ಸಿನಿಮಾಗಳ ಪ್ಲಾಪ್ಗೆ ವಿಜಯ್ ಸೂತ್ರವೇ ಹೊಣೆಯಾಗಿದೆಯಾ ಅನ್ನೋ ಅನುಮಾನ ಮೂಡಿದೆ. ಟಾಲಿವುಡ್ನ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟ ಅಂದ್ರೆ ವಿಜಯ್ ದೇವರಕೊಂಡ. ವಿಜಯ್ ದೇವರಕೊಂಡ ಇತ್ತೀಚೆಗೆ ಅಭಿನಯಿಸ್ತಿರೋ ಸಿನಿಮಾಗಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಪಡೆಯುತ್ತಿಲ್ಲ. ಅಂದ್ಹಾಗೆ ವಿಜಯ್ ದೇವರಕೊಂಡ […]
ಟಾಲಿವುಡ್ನ ವಿಜಯ್ ದೇವರಕೊಂಡ ಸದ್ಯ ವರ್ಲ್ಡ್ ಫೇಮಸ್ ಲವರ್ ಆಗಿ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡ್ತಿದ್ದಾರೆ. ಆದ್ರೆ ವಿಜಯ್ ದೇವರಕೊಂಡ ಅಂದುಕೊಂಡಂಗೆ ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ಪಡೆಯೋದ್ರಲ್ಲಿ ವಿಫಲವಾಗಿದೆ. ದೇವರಕೊಂಡ ಸಿನಿಮಾಗಳ ಪ್ಲಾಪ್ಗೆ ವಿಜಯ್ ಸೂತ್ರವೇ ಹೊಣೆಯಾಗಿದೆಯಾ ಅನ್ನೋ ಅನುಮಾನ ಮೂಡಿದೆ.
ಟಾಲಿವುಡ್ನ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದ ನಟ ಅಂದ್ರೆ ವಿಜಯ್ ದೇವರಕೊಂಡ. ವಿಜಯ್ ದೇವರಕೊಂಡ ಇತ್ತೀಚೆಗೆ ಅಭಿನಯಿಸ್ತಿರೋ ಸಿನಿಮಾಗಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಪಡೆಯುತ್ತಿಲ್ಲ. ಅಂದ್ಹಾಗೆ ವಿಜಯ್ ದೇವರಕೊಂಡ ಹೇಳಿಕೊಳ್ಳುವಂತಹ ಯಶಸ್ಸು ಪಡೆಯದಿರೋದಕ್ಕೆ ಹಾಗೆಯೇ ಒಳ್ಳೆ ಸಿನಿಮಾ ಆಗದಿರೋದಕ್ಕೆ ಸ್ವತಃ ಅರ್ಜುನ್ ರೆಡ್ಡಿನೇ ಕಾರಣವಾ ಅನ್ನೋ ಟಾಕ್ ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ.
ಅಂದ್ಹಾಗೆ 2017ರಲ್ಲಿ ರಿಲೀಸ್ ಆಗಿದ್ದ ಅರ್ಜುನ್ ರೆಡ್ಡಿ ಸಿನಿಮಾದ ಸಕ್ಸಸ್ ವಿಜಯ್ ದೇವರಕೊಂಡ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಟ್ಟಿತ್ತು. ಆದ್ರೀಗ ವಿಜಯ್ ದೇವರಕೊಂಡ ಅಭಿನಯದ ವರ್ಲ್ಡ್ ಫೇಮಸ್ ಲವರ್ ಸಿನಿಮಾ ರಿಲೀಸ್ ಆದ ನಂತರ ಮತ್ತೆ ಅರ್ಜುನ್ ರಡ್ಡಿ ಬಗ್ಗೆ ಮಾತನಾಡುವಂತೆ ಮಾಡಿದೆ. ಸದ್ಯ ವರ್ಲ್ಡ್ ಫೇಮಸ್ ಲವರ್ ಸಿನಿಮಾದಲ್ಲಿ ಅರ್ಜುನ್ ರೆಡ್ಡಿ ಒತ್ತಡಕ್ಕೆ ಮಣಿದು ನಿರ್ದೇಶಕ ಕ್ರಾಂತಿ ಮಹದೇವ್ ಸಿನಿಮಾದ ಸೆಕೆಂಡ್ ಹಾಫ್ ಕಥೆಯನ್ನ ಬದಲಾಯಿಸಿದ್ದಾರಂತೆ.
ವರ್ಲ್ಡ್ ಫೇಮಸ್ ಲವರ್ ಸಿನಿಮಾದ ಸೆಕೆಂಡ್ ಹಾಫ್ ಕಥೆಯಲ್ಲಿ ಹಾಗೂ ದೃಶ್ಯಾವಳಿಗಳನ್ನ ನಟ ವಿಜಯ್ ಹೇಳಿದ ರೀತಿಯಲ್ಲೇ ಚಿತ್ರೀಕರಿಸಲಾಗಿದೆಯಂತೆ. ಹೀಗಾಗಿ ನಿರ್ದೇಶ ಕ್ರಾಂತಿ ಮಹದೇವ್ ಕ್ರಿಯೇಟಿವಿಟಿಗೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಅಂದು ಕೊಂಡಂತೆ ಕಟ್ಟಿಕೊಡುವಲ್ಲಿ ಚಿತ್ರತಂಡ ಎಡವಿದೆ ಅನ್ನೋ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ಆದ್ದರಿಂದ ಹೇಳಿಕೊಳ್ಳುವಂತಹ ಸಕ್ಸಸ್ ಸಿಗದೇ ವಿಜಯ್ ಫ್ಲಾಪ್ ಸಿನಿಮಾ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ.
ಒಟ್ಟಿನಲ್ಲಿ ಕೆಲವೊಮ್ಮೆ ನಟರು ತಮ್ಮ ನಟನೆ ಬಗ್ಗೆ ಮಾತ್ರವಲ್ಲದೇ ಸಿನಿಮಾದ ಬೇರೆ ಬೇರೆ ವಿಭಾಗಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ತಾರೆ. ಈ ಮೂಲಕ ಮಾಡೋ ಬದಲಾವಣೆಗಳು ಇಂತಹ ಘಟನಾವಳಿಗಳಿಗೆ ಕಾರಣವಾಗುತ್ತವೆ. ಅರ್ಜುನ್ ರೆಡ್ಡಿ ಗುಂಗಲ್ಲೇ ಇರೋ ವಿಜಯ್ ಅದ್ರಿಂದ ಹೊರ ಬಂದು ಇನ್ನಾದರು ನಿರ್ದೇಶಕರ ಆಲೋಚನೆಗಳಂತೆ ಸಿನಿಮಾ ಮಾಡಿದ್ರೆ ಸಕ್ಸಸ್ ಸಿನಿಮಾಗಳನ್ನ ಕೊಡಬಹುದು ಎನ್ನಲಾಗ್ತಿದೆ. ಟಾಲಿವುಡ್ನಲ್ಇ ಹರಿದಾಡ್ತಿರೋ ಈ ಸುದ್ದಿ ಬಗ್ಗೆ ಮುಂದಿನ ದಿನಗಳಲ್ಲಿ ವಿಜಯ್ ಏನ್ ಉತ್ತರ ಕೊಡ್ತಾರೆ ಅನ್ನೋದನ್ನ ಕಾದು ನೋಡ್ಬೇಕು.