AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು

ಬೆಂಗಳೂರು: ರಾಗಿಣಿ ಮತ್ತು ಸಂಜನಾರ ದಿನನಿತ್ಯದ ಕಿತ್ತಾಟದಿಂದ ಜೈಲು ಸಿಬ್ಬಂದಿಗೆ ಮತ್ತು ಇತರೆ ಕೈದಿಗಳಿಗೆ ತಲೆನೋವು ಶುರುವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ನಶೆರಾಣಿಯರ ಜಗಳಕ್ಕೆ ಜೈಲಿಗೆ ಜೈಲೇ ಕಂಗಾಲಾಗಿ ಹೋಗಿದೆ. ಪ್ರತಿದಿನ ಒಬ್ಬರ ಮೇಲೆ ಮತ್ತೊಬ್ಬರು ಸಾಲು ಸಾಲು ಆರೋಪ ಮಾಡ್ತಿದ್ದಾರಂತೆ. ಹಾವು-ಮುಂಗುಸಿಯಂತೆ ಕಿತ್ತಾಡ್ತಿರೋ ನಟಿಯರಿಂದ ಜೈಲು ಸಿಬ್ಬಂದಿಗೆ ನೆಮ್ಮದಿ ಹಾಳಾಗಿದೆ. ಸಿಬ್ಬಂದಿಯ ಜೊತೆಗೆ ಇತರೆ ಕೈದಿಗಳಿಗೂ ಸಿಕ್ಕಾಪಟ್ಟೆ ತಲೆಬಿಸಿಯಾಗಿದ್ದು ಇಬ್ಬರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ ಅಂತಾ ಜೈಲಿನಲ್ಲಿರುವ ಇತರರು […]

ಇಬ್ರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ -ಜಡೆಜಗಳಕ್ಕೆ ಸಿಬ್ಬಂದಿ, ಕೈದಿ ಕಂಗಾಲು
KUSHAL V
|

Updated on:Oct 09, 2020 | 10:07 AM

Share

ಬೆಂಗಳೂರು: ರಾಗಿಣಿ ಮತ್ತು ಸಂಜನಾರ ದಿನನಿತ್ಯದ ಕಿತ್ತಾಟದಿಂದ ಜೈಲು ಸಿಬ್ಬಂದಿಗೆ ಮತ್ತು ಇತರೆ ಕೈದಿಗಳಿಗೆ ತಲೆನೋವು ಶುರುವಾಗಿದೆ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ, ನಶೆರಾಣಿಯರ ಜಗಳಕ್ಕೆ ಜೈಲಿಗೆ ಜೈಲೇ ಕಂಗಾಲಾಗಿ ಹೋಗಿದೆ.

ಪ್ರತಿದಿನ ಒಬ್ಬರ ಮೇಲೆ ಮತ್ತೊಬ್ಬರು ಸಾಲು ಸಾಲು ಆರೋಪ ಮಾಡ್ತಿದ್ದಾರಂತೆ. ಹಾವು-ಮುಂಗುಸಿಯಂತೆ ಕಿತ್ತಾಡ್ತಿರೋ ನಟಿಯರಿಂದ ಜೈಲು ಸಿಬ್ಬಂದಿಗೆ ನೆಮ್ಮದಿ ಹಾಳಾಗಿದೆ. ಸಿಬ್ಬಂದಿಯ ಜೊತೆಗೆ ಇತರೆ ಕೈದಿಗಳಿಗೂ ಸಿಕ್ಕಾಪಟ್ಟೆ ತಲೆಬಿಸಿಯಾಗಿದ್ದು ಇಬ್ಬರೂ ಯಾವಾಗ ಬೇಲ್ ತಗೊಂಡು ಹೋಗ್ತಾರೋ ಅಂತಾ ಜೈಲಿನಲ್ಲಿರುವ ಇತರರು ಚಡಪಡಿಸುತ್ತಿದ್ದಾರಂತೆ.

ಆರಂಭದಲ್ಲಿ ನಟಿಯರೆಂದು ಗೌರವಿಸಿದ್ದ ಸಿಬ್ಬಂದಿ, ಕೈದಿಗಳು ಇದೀಗ ಯಪ್ಪಾ ರಾಗಿಣಿನಾ ಮತ್ತು ಸಂಜನಾನಾ ಅನ್ನೋ ಮಟ್ಟಿಗೆ ತಲುಪಿದ್ದಾರೆ. ಸಿಬ್ಬಂದಿ ಜಗಳ ಬಿಡಿಸಲು ಹೋದರೇ ಸಾಕು ಶುರುವಾಗುತ್ತೆ ಆರೋಪಗಳ ಸುರಿಮಳೆ. ಒಬ್ಬರ ಮೇಲೆ ಮತ್ತೊಬ್ಬರು ಆರೋಪಗಳ ಪಟ್ಟಿ ರೆಡಿ ಮಾಡಿಕೊಂಡಿರ್ತಾರಂತೆ.

ಸೆಲ್​ ಲೈಟ್​ನಿಂದ ಇಬ್ಬರು ನಟಿಯರು ಫೈಟ್​! ಪರಪ್ಪನ ಅಗ್ರಹಾರದ ಒಂದೇ ಸೆಲ್​ನಲ್ಲಿರುವ ನಟಿಯರ ಪೈಕಿ ರಾಗಿಣಿಗೆ ಪುಸ್ತಕ ಓದೋದು, ಟಿವಿ ನೋಡೋದು ದಿನ ನಿತ್ಯದ ಚಟುವಟಿಕೆಯಾದರೆ, ಬೆಳಗ್ಗೆ ಎದ್ದು ಯೋಗ ಮಾಡೋದು ಸಂಜನಾ ಗಲ್ರಾನಿ ದಿನಚರಿ. ಜೊತೆಗೆ, ಸಂಜನಾ ಜೈಲಲ್ಲಿರೋ ಪುಟ್ಟ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ, ಸಂಜನಾ ಬೆಳ್ಳಂಬೆಳಗ್ಗೆ ಸೆಲ್​ನ ಲೈಟ್ ಹಾಕಿ ಯೋಗ ಮಾಡ್ತಾಳೆ ಅಂತಾ ತುಪ್ಪದ ಹುಡುಗಿಗೆ ಸಿಟ್ಟು. ನನ್ನನ್ನು ನೆಮ್ಮದಿಯಾಗಿ ಮಲಗೋಕೆ ಬಿಡ್ತಿಲ್ಲ ಅಂತಾ ಜೈಲರ್ ಮುಂದೆ ಕಂಪ್ಲೇಂಟ್ ಹಾಕಿದ್ದಾಳೆ.

ಇತ್ತ, ರಾಗಿಣಿ ರಾತ್ರಿಯೆಲ್ಲಾ ಲೈಟ್ ಹಾಕಿರ್ತಾಳೆ ಅಂತಾ ಸಂಜನಾ ದೂರುತ್ತಾಳಂತೆ. ಮಲಗೋದು ಬಿಟ್ಟು ಪುಸ್ತಕ ಓದಿಕೊಂಡು ಕಿರಿಕಿರಿ ಮಾಡ್ತಿದ್ದಾಳೆಂದು ಸಂಜನಾ ಕೊರಗುತ್ತಾಳೆ. ಇಷ್ಟೇ ಅಲ್ಲದೆ ಸಣ್ಣಸಣ್ಣ ವಿಚಾರಗಳಿಗೂ ಕಂಪ್ಲೇಂಟ್ ಮಾಡಿ ಇಬ್ಬರೂ ಕಿತ್ತಾಡ್ತಾರಂತೆ. ಜೈಲಿಗೆ ಬರೋಕೆ ನೀನು ಕಾರಣ, ಅವನಿಂದಲೇ ನಾನು ಈ ಪರಿಸ್ಥಿತಿಗೆ ಬಂದೆ ಎಂದು ಪರಸ್ಪರ ಆರೋಪ ಮಾಡಿಕೊಂಡು ರಂಪಾಟ ಮಾಡ್ತಿದ್ದಾರಂತೆ. ‘ಮಾದಕ ದುನಿಯಾ’ದಲ್ಲಿ ದೋಸ್ತಿ, ಜೈಲಲ್ಲಿ ದುಶ್ಮನ್: ನಶೆ ರಾಣಿಯರ ಕಿತ್ತಾಟ ಬಲು ಜೋರು!

Published On - 10:02 am, Fri, 9 October 20

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ