ಬೆಂಗಳೂರು: ಇಂದು ನಟಿ ಮೇಘನಾ ರಾಜ್ರ ಸೀಮಂತ ಶಾಸ್ತ್ರವನ್ನು ಆಯೋಜಿಸಲಾಗಿತ್ತು. ನಟಿಯ ಸೀಮಂತ ಶಾಸ್ತ್ರವನ್ನು ಅವರ ಕುಟುಂಬಸ್ಥರು ನೆರವೇರಿಸಿದರು.
ಮೇಘನಾ ಪತಿ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಲ್ಲೇ ನಟಿಯ ಕುಟುಂಬಸ್ಥರು ಶಾಸ್ತ್ರವನ್ನು ನೆರವೇರಿಸಿದರು. ನಟಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.