ಚಿತ್ರಸಾಹಿತಿ ಕಲ್ಯಾಣ್ ಪತ್ನಿ ಕುಟುಂಬದ ಆಪ್ತನ ಬಳಿ ಸಿಕ್ತು ಮಾಟ ಮಂತ್ರದ ವಸ್ತುಗಳು!

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ಸಿಕ್ಕಿವೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ನಿವಾಸಿ ಶಿವಾನಂದ ವಾಲಿ ವಿರುದ್ಧ ಮಾಟ ಮಂತ್ರದ ಆರೋಪ ಕೇಳಿ ಬಂದಿದೆ. ಶಿವಾನಂದ ವಾಲಿ ಕೆ.ಕಲ್ಯಾಣ್ ಪತ್ನಿ ಕುಟುಂಬದ ಆಪ್ತ. ಈ ಹಿಂದೆ ಕೆ‌.ಕಲ್ಯಾಣ್ ಶಿವಾನಂದ ವಾಲಿ ವಿರುದ್ಧ ಅಪಹರಣ ಆರೋಪ ಮಾಡಿದ್ದರು. ಪತ್ನಿ, ಅತ್ತೆ, ಮಾವರನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿದ್ದರು. ನಂತರ ಪುಸಲಾಯಿಸಿ ಪತ್ನಿ, […]

ಚಿತ್ರಸಾಹಿತಿ ಕಲ್ಯಾಣ್ ಪತ್ನಿ ಕುಟುಂಬದ ಆಪ್ತನ ಬಳಿ ಸಿಕ್ತು ಮಾಟ ಮಂತ್ರದ ವಸ್ತುಗಳು!
Follow us
ಆಯೇಷಾ ಬಾನು
|

Updated on:Oct 04, 2020 | 8:55 AM

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ಸಿಕ್ಕಿವೆ.

ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ನಿವಾಸಿ ಶಿವಾನಂದ ವಾಲಿ ವಿರುದ್ಧ ಮಾಟ ಮಂತ್ರದ ಆರೋಪ ಕೇಳಿ ಬಂದಿದೆ. ಶಿವಾನಂದ ವಾಲಿ ಕೆ.ಕಲ್ಯಾಣ್ ಪತ್ನಿ ಕುಟುಂಬದ ಆಪ್ತ. ಈ ಹಿಂದೆ ಕೆ‌.ಕಲ್ಯಾಣ್ ಶಿವಾನಂದ ವಾಲಿ ವಿರುದ್ಧ ಅಪಹರಣ ಆರೋಪ ಮಾಡಿದ್ದರು. ಪತ್ನಿ, ಅತ್ತೆ, ಮಾವರನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿದ್ದರು. ನಂತರ ಪುಸಲಾಯಿಸಿ ಪತ್ನಿ, ಅತ್ತೆ, ಮಾವ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. 19 ಲಕ್ಷ 80 ಸಾವಿರ ರೂ. ಹಣ ಶಿವಾನಂದ ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿದೆಯಂತೆ.

ಅಷ್ಟೇ ಅಲ್ಲದೇ ಜಾಯಿಂಟ್ ಪ್ರಾಪರ್ಟಿ ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಂಡ ಆರೋಪ ಕೂಡ ಇದೆ. ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಠಾಣೆಗೆ ಕೆ.ಕಲ್ಯಾಣ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಶಿವಾನಂದ ವಾಲಿಯನ್ನು ಬೀಳಗಿ ಪೊಲೀಸರು ವಶಕ್ಕೆ ಪಡೆದಿದ್ದರು. ನಿನ್ನೆ ಮಾಳಮಾರುತಿ ಠಾಣೆಗೆ ಶಿವಾನಂದನನ್ನು ಹಸ್ತಾಂತರಿಸಿದ್ದು, ಸದ್ಯ ಶಿವಾನಂದ ವಾಲಿ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: ಪ್ರೇಮಕವಿ K ಕಲ್ಯಾಣ್​ ದಾಂಪತ್ಯದಲ್ಲಿ ಬಿರುಕು, ಪೊಲೀಸ್ ಠಾಣೆ ಮೆಟ್ಟಿಲೇರಿದ ದಂಪತಿ

Published On - 8:50 am, Sun, 4 October 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?