ಅಪ್ಪ-ಅಮ್ಮನ ನೋಡಿ ಬೆಳೆದವ್ರು ನಾವು, ನಮಗೆ ಗೌರವ ಇದೆ: Drugs ಬಗ್ಗೆ ಅಭಿಷೇಕ್
ಬೆಂಗಳೂರು: ಇಂದು ನಟ ಅಭಿಷೇಕ್ ಅಂಬರೀಶ್ಗೆ ಹುಟ್ಟು ಹಬ್ಬದ ಸಂಭ್ರಮ. ಹಾಗಾಗಿ, ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳನ್ನು ಮಾತನಾಡಿಸಿದರು. ಬೆಳಗ್ಗೆಯಿಂದ ನಿರಂತರವಾಗಿ ಅಭಿಮಾನಿಗಳೊಂದಿಗೆ ಸೇರಿ ಅವರು ತಂದಿದ್ದ ಕೇಕ್ ಸಹ ಕಟ್ ಮಾಡಿದರು. ಈ ನಡುವೆ ಟಿವಿ 9 ಜೊತೆ ಮಾತ್ನಾಡಿದ ಅಭಿ ಅಮ್ಮನೇ ಒಂದು ಗಿಫ್ಟ್. ಈಗ ಏನು ಗಿಫ್ಟ್ ಕೊಡ್ತಾರೆ ಅಂತಾ ನೋಡಬೇಕು ಎಂದು ಹೇಳಿದ್ದಾರೆ. ಪ್ರತಿ ಹುಟ್ಟು ಹಬ್ಬವನ್ನ ಅಪ್ಪನೊಂದಿಗೆ ಆಚರಿಸಿಕೊಳ್ಳುತ್ತಿದ್ದೆ. ಹಾಗಾಗಿ, ಕಳೆದ ಎರಡೂ ವರ್ಷದಿಂದ ಹುಟ್ಟು ಹಬ್ಬದ ಆಚರಣೆಗೆ […]
ಬೆಂಗಳೂರು: ಇಂದು ನಟ ಅಭಿಷೇಕ್ ಅಂಬರೀಶ್ಗೆ ಹುಟ್ಟು ಹಬ್ಬದ ಸಂಭ್ರಮ. ಹಾಗಾಗಿ, ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳನ್ನು ಮಾತನಾಡಿಸಿದರು. ಬೆಳಗ್ಗೆಯಿಂದ ನಿರಂತರವಾಗಿ ಅಭಿಮಾನಿಗಳೊಂದಿಗೆ ಸೇರಿ ಅವರು ತಂದಿದ್ದ ಕೇಕ್ ಸಹ ಕಟ್ ಮಾಡಿದರು.
ಈ ನಡುವೆ ಟಿವಿ 9 ಜೊತೆ ಮಾತ್ನಾಡಿದ ಅಭಿ ಅಮ್ಮನೇ ಒಂದು ಗಿಫ್ಟ್. ಈಗ ಏನು ಗಿಫ್ಟ್ ಕೊಡ್ತಾರೆ ಅಂತಾ ನೋಡಬೇಕು ಎಂದು ಹೇಳಿದ್ದಾರೆ. ಪ್ರತಿ ಹುಟ್ಟು ಹಬ್ಬವನ್ನ ಅಪ್ಪನೊಂದಿಗೆ ಆಚರಿಸಿಕೊಳ್ಳುತ್ತಿದ್ದೆ.
ಹಾಗಾಗಿ, ಕಳೆದ ಎರಡೂ ವರ್ಷದಿಂದ ಹುಟ್ಟು ಹಬ್ಬದ ಆಚರಣೆಗೆ ಬ್ರೇಕ್ ಹಾಕಿದ್ದೆ. ಅಪ್ಪ ಇಲ್ಲದೇ ಆಚರಣೆ ಮಾಡ್ತಿರೊ ಮೊದಲ ಹುಟ್ಟು ಹಬ್ಬ ಇದು. ಆದರೆ, ಅಭಿಮಾನಿಗಳ ಪ್ರೀತಿ, ಅಭಿಮಾನ ನೋಡಿದ್ರೆ ಖುಷಿ ಆಗುತ್ತೆ ಎಂದು ಹೇಳಿದ್ದಾರೆ.
ಸ್ಯಾಂಡಲ್ವುಡ್ಗೆ ಡ್ರಗ್ ಜಾಲದ ನಂಟು ಪ್ರಕರಣದ ಬಗ್ಗೆ ಸಹ ನಟ ಅಭಿಷೇಕ್ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಅಪ್ಪ, ಅಮ್ಮಾನ ನೋಡಿ ಬೆಳೆದವರು ನಾವು. ಅವ್ರು ಇಂಡಸ್ಟ್ರಿ ಬಗ್ಗೆ ಹೇಳೋದು ಕೇಳ್ತಿದ್ರೆ ನಮಗೆ ಗೌರವ ಹೆಚ್ಚಾಗ್ತಾ ಇತ್ತು ಎಂದು ಅಭಿಷೇಕ್ ಹೇಳಿದ್ದಾರೆ.
ಈಗ ಯಾರೋ ಕೆಲವರು ಮಾಡಿರೋ ತಪ್ಪಿನಿಂದ ಇಂಡಸ್ಟ್ರಿಯನ್ನ ಅಳೆಯೋದು ತಪ್ಪು. ಇಲ್ಲಿ ಎಷ್ಟೋ ಮಂದಿ ಅನ್ನ ತಿನ್ನುತ್ತಿದ್ದಾರೆ. ಕೆಲವರಿಂದ ಇಡೀ ಚಿತ್ರರಂಗ ಹಾಗೆ ಅನ್ನೋದು ಸರಿಯಲ್ಲ. ತನಿಖೆ ನಡೀತಿದೆ, ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗತ್ತೆ. ದೇವರಿದ್ದಾನೆ, ಅವರು ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.