ಬಾಲಿವುಡ್ ಮಂದಿ 2-3 ತಾಸು ಜಿಮ್ ಮಾಡ್ತಾರೆ, ಅವರು ನಿಮಗೆ ಡ್ರಗ್ ಅಡಿಕ್ಟ್ನಂತೆ ಕಾಣ್ತಾರಾ?
ಡ್ರಗ್ಸ್.. ಈ ಶಬ್ದ ಇಡೀ ಚಿತ್ರರಂಗದಲ್ಲಿ ಧೂಳು ಎಬ್ಬಿಸಿದೆ. ಸ್ಟಾರ್ ನಟರಿಗೆ ನಡುಕ ಹುಟ್ಟಿಸಿದೆ. ದೊಡ್ಡ ಹೆಸರು ಮಾಡಿದ್ದ ಸ್ಟಾರ್ಗಳು ಕಣ್ಣೀರಿಡುವಂತೆ ಮಾಡಿದೆ. ರಾಜ್ಯ ಹಾಗೂ ದೇಶದಲ್ಲಿ ಈ ಡ್ರಗ್ಸ್ ನಶೆ ನಂಟಿನ ಪ್ರಕರಣ ಅನೇಕ ತಿರುವುಗಳನ್ನು ಪಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಮತ್ತು ಗೀತ ರಚನೆಕಾರ ಜಾವೀದ್ ಅಕ್ತರ್ ಅವರು ಚಿತ್ರೋದ್ಯದ ಮಂದಿಯನ್ನು ನಖಶಿಖಾ ಸಮರ್ಥಿಸಿಕೊಂಡಿದ್ದಾರೆ. ಬಾಲಿವುಡ್‌ನ ಡ್ರಗ್ ಲಿಂಕ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್‌ನ ಸಾಕ್ಷೀಪ್ರಜ್ಞೆ ಜಾವೀದ್ ಅಕ್ತರ್ ಅವರು ನಾನು ಆ […]
ಡ್ರಗ್ಸ್.. ಈ ಶಬ್ದ ಇಡೀ ಚಿತ್ರರಂಗದಲ್ಲಿ ಧೂಳು ಎಬ್ಬಿಸಿದೆ. ಸ್ಟಾರ್ ನಟರಿಗೆ ನಡುಕ ಹುಟ್ಟಿಸಿದೆ. ದೊಡ್ಡ ಹೆಸರು ಮಾಡಿದ್ದ ಸ್ಟಾರ್ಗಳು ಕಣ್ಣೀರಿಡುವಂತೆ ಮಾಡಿದೆ. ರಾಜ್ಯ ಹಾಗೂ ದೇಶದಲ್ಲಿ ಈ ಡ್ರಗ್ಸ್ ನಶೆ ನಂಟಿನ ಪ್ರಕರಣ ಅನೇಕ ತಿರುವುಗಳನ್ನು ಪಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಸಾಹಿತಿ ಮತ್ತು ಗೀತ ರಚನೆಕಾರ ಜಾವೀದ್ ಅಕ್ತರ್ ಅವರು ಚಿತ್ರೋದ್ಯದ ಮಂದಿಯನ್ನು ನಖಶಿಖಾ ಸಮರ್ಥಿಸಿಕೊಂಡಿದ್ದಾರೆ.
ಬಾಲಿವುಡ್‌ನ ಡ್ರಗ್ ಲಿಂಕ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್‌ನ ಸಾಕ್ಷೀಪ್ರಜ್ಞೆ ಜಾವೀದ್ ಅಕ್ತರ್ ಅವರು ನಾನು ಆ ವರದಿಗಳನ್ನು ನಂಬುವುದಿಲ್ಲ. ಏಕೆಂದರೆ ಬಾಲಿವುಡ್ ಸೆಲೆಬ್ರಿಟಿಗಳ ಆರೋಗ್ಯ, ಮೈಕಟ್ಟು, ದೈಹಿಕ ಸಾಮರ್ಥ್ಯವನ್ನು ಗಮನಿಸಿ. “ವಾಸ್ತವವಾಗಿ, ಅವರು ಎರಡು ಮೂರು ಗಂಟೆಗಳ ಕಾಲ ಜಿಮ್‌ನಲ್ಲಿ ದೈಹಿಕ ಕಸರತ್ತು ಮಾಡುತ್ತಾ ದಿನಾ ಸಮಯ ಕಳೆಯುತ್ತಾರೆ. ಅವರು ಮಾದಕ ವ್ಯಸನಿಗಳಂತೆ ಕಾಣುತ್ತಾರೆಯೇ, ನಿಮಗೇ? ಅವರು ಅತ್ಯಂತ ವೃತ್ತಿಪರ ಮತ್ತು ಜವಾಬ್ದಾರಿಯುತ ವ್ಯಕ್ತಿಗಳು ಎಂದು ಜಾವೀದ್ ಷರಾ ಬರೆದಿದ್ದಾರೆ.
ಮಾದಕವಸ್ತು ವ್ಯಾಪಾರ ಮತ್ತು ಬಳಕೆಗೆ ಸಂಬಂಧಿಸಿದ ಸಂಪರ್ಕಗಳ ಬಗ್ಗೆ NCB ತನಿಖೆ, ವಿಚಾರಣೆ ನಡೆಸುತ್ತಿದೆ. ಆದರೆ ಈ ಪ್ರಕರಣ ಬಯಲಾದ ನಂತರ ಚಿತ್ರೋದ್ಯಮ ವಿವಾದದಲ್ಲಿ ಸಿಲುಕಿದೆ ಅಂದರು. ಹಾಗೂ ಕರಣ್ ಜೋಹರ್ ಅವರ ಪಾರ್ಟಿಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ವಿಷಾದದಿಂದ ಹೇಳಿದರು.
ಸಂದರ್ಶನವೊಂದರಲ್ಲಿ ಮಾತನಾಡುತ್ತ.. ನಾನು ಕೃಷಿ ಮತ್ತು ಆರ್ಥಿಕತೆಯ ಬಗ್ಗೆ ಪರಿಣಿತನಲ್ಲ, ಹಾಗೆಯೇ ಎಲ್ಲಾ ವಿಷಯಗಳು ಎಲ್ಲರಿಗೆ ತಿಳಿದಿರುವುದಿಲ್ಲ. ಮತ್ತು ಕೆಲವು ಸುದ್ದಿ ವಾಹಿನಿಗಳು ಬಾಲಿವುಡ್‌ನತ್ತ ಗಮನ ಹರಿಸುವ ಬದಲು ಜನರಿಗೆ ಮಾಹಿತಿಯನ್ನು ಒದಗಿಸಬಲ್ಲವು. ವಿಷಯಗಳನ್ನು ಅರ್ಥ ಮಾಡಿಸಬೇಕು. ಚಾನಲ್‌ಗಳು ಶಿಕ್ಷಣ ನೀಡಬೇಕು. ಆದರೆ ಅವರು ತಮ್ಮ ಜವಾಬ್ದಾರಿಯನ್ನು ಎತ್ತಿ ಹಿಡಿಯುತ್ತಿಲ್ಲ ಎಂದು ಜಾವೀದ್ ಅಕ್ತರ್, ಬಾಲಿವುಡ್ ಮನೆಯ ಹಿರಿಯರಾಗಿ ಹೇಳಿದ್ದಾರೆ.