ರಂಗಿತರಂಗ, ಅವನೇ ಶ್ರೀ ಮನ್ನಾರಾಯಣ ನಿರ್ಮಾಪಕರಿಂದ ಬರ್ತಿದೆ ಮತ್ತೊಂದು ವಿಭಿನ್ನ ಚಿತ್ರ

‘ರಂಗಿತರಂಗ’ ಹಾಗೂ ‘ಅವನೇ ಶ್ರೀಮನ್ನಾರಯಣ’ ಭರ್ಜರಿ ಯಶಸ್ಸು ಕಂಡ ಚಿತ್ರಗಳು. ಅಪಾರ ಜನ‌ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಅವರು ‘ಸ್ಪೂಕಿ ಕಾಲೇಜ್’ ಎಂಬ ಮತ್ತೊಂದು ವಿಭಿನ್ನ ಚಿತ್ರ ನಿರ್ಮಿಸುತ್ತಿದ್ದಾರೆ. ತಮ್ಮದೇ ಆದ ಶ್ರೀದೇವಿ ಎಂಟರ್ ಟೈನರ್ ಸಂಸ್ಥೆ ಮೂಲಕ. ಈ ಚಿತ್ರದ ಚಿತ್ರೀಕರಣ ನವೆಂಬರ್ ಮೊದಲ ವಾರದಲ್ಲಿ ಧಾರವಾಡದ 103 ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಆರಂಭವಾಗಲಿದೆ. ಎರಡನೇ ಹಂತದ ಚಿತ್ರವು ದಾಂಡೇಲಿ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯಲಿದೆ. ಹಾರಾರ್, ಕಾಮಿಡಿ ಹಾಗೂ ಸೈಕಲಾಜಿಕಲ್ […]

ರಂಗಿತರಂಗ, ಅವನೇ ಶ್ರೀ ಮನ್ನಾರಾಯಣ ನಿರ್ಮಾಪಕರಿಂದ ಬರ್ತಿದೆ ಮತ್ತೊಂದು ವಿಭಿನ್ನ ಚಿತ್ರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Oct 02, 2020 | 4:00 PM

‘ರಂಗಿತರಂಗ’ ಹಾಗೂ ‘ಅವನೇ ಶ್ರೀಮನ್ನಾರಯಣ’ ಭರ್ಜರಿ ಯಶಸ್ಸು ಕಂಡ ಚಿತ್ರಗಳು. ಅಪಾರ ಜನ‌ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಚಿತ್ರಗಳನ್ನು ನಿರ್ಮಿಸಿದ್ದ ಹೆಚ್.ಕೆ.ಪ್ರಕಾಶ್ ಅವರು ‘ಸ್ಪೂಕಿ ಕಾಲೇಜ್’ ಎಂಬ ಮತ್ತೊಂದು ವಿಭಿನ್ನ ಚಿತ್ರ ನಿರ್ಮಿಸುತ್ತಿದ್ದಾರೆ. ತಮ್ಮದೇ ಆದ ಶ್ರೀದೇವಿ ಎಂಟರ್ ಟೈನರ್ ಸಂಸ್ಥೆ ಮೂಲಕ.

ಈ ಚಿತ್ರದ ಚಿತ್ರೀಕರಣ ನವೆಂಬರ್ ಮೊದಲ ವಾರದಲ್ಲಿ ಧಾರವಾಡದ 103 ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ಆರಂಭವಾಗಲಿದೆ. ಎರಡನೇ ಹಂತದ ಚಿತ್ರವು ದಾಂಡೇಲಿ ದಟ್ಟ ಅರಣ್ಯ ಪ್ರದೇಶದಲ್ಲಿ ನಡೆಯಲಿದೆ. ಹಾರಾರ್, ಕಾಮಿಡಿ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದಾರ ಹೊಂದಿರುವ ಈ ಚಿತ್ರವನ್ನು ಭರತ್ ಜಿ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ಯೋಗರಾಜ್ ಭಟ್, ರಮೇಶ್ ಅರವಿಂದ್ ಮೊದಲಾದವರ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವ ಭರತ್ ಅವರಿಗಿದೆ. ರೆಡಿಯೋ ಹಾಗೂ ಪ್ರಚಾರ ವಿಭಾಗದಲ್ಲೂ ಭರತ್ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಭರತ್ ಅವರೆ ಬರೆದಿದ್ದಾರೆ.

ಹಾರಾರ್, ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರವಾಗಿರುವುದರಿಂದ ಈ ಚಿತ್ರ ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಹಾಗಾಗಿ ಅದಕ್ಕೆ ಸಂಬಂಧಿಸಿದ ಕೆಲವು ಸಾಮಗ್ರಿಗಳನ್ನು ಮುಂಬೈನಿಂದ ತರಿಸಿಕೊಳುತ್ತಿರುವುದಾಗಿ ತಿಳಿಸಿರುವ ನಿರ್ದೇಶಕರು ವಸ್ತ್ರ ವಿನ್ಯಾಸ ಕೂಡ ವಿಶೇಷವಾಗಿರುತ್ತದೆ ಎಂದು ತಿಳಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ವಿಶ್ವಾಸ್ ಕಲಾ ನಿರ್ದೇಶನ ಹಾಗೂ ಚೇತನ್ ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

‘ಪ್ರಿಮಿಯರ್ ಪದ್ಮಿನಿ’ ಚಿತ್ರದಲ್ಲಿ ಅಭಿನಯಿಸಿದ್ದ ವಿವೇಕ್ ಸಿಂಹ, ‘ದಿಯಾ’ ಖ್ಯಾತಿಯ ಖುಷಿ ರವಿ ಹಾಗೂ ಪೃಥ್ವಿ ರಾಷ್ಟಕೂಟ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಕಾಶ್ ಬೆಳವಾಡಿ, ಹನುಮಂತೇ ಗೌಡ, ರಘು ರಮಣಕೊಪ್ಪ, ಅರವಿಂದ್ ಬೋಳಾರ್, ವಿಜಯ್ ಚೆಂಡೂರ್, ಎಂ.ಕೆ.ಮಠ, ಅಶ್ವಿನ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Published On - 3:38 pm, Fri, 2 October 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ