ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?

ಟೀಸರ್​ನಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಹೀರೋಯಿನ್​ ಬಂದು ಪುನೀತ್​ ಬಳಿ ನೀವು ಥೇಟ್​ ಅಣ್ಣನ ರೀತಿ ಕಾಣುತ್ತೀರಿ ಎಂದು ಹೇಳುತ್ತಾರೆ. ಇದೇ ವಿಚಾರವಾಗಿ ಪುನೀತ್​ಗೆ ಪ್ರಶ್ನೆ ಕೇಳಲಾಯಿತು.

ನನ್ನನ್ನು ಪ್ರೀತಿಸಬೇಡಿ, ನನಗೆ ಮದ್ವೆ ಆಗಿದೆ; ಪುನೀತ್​ ರಾಜ್​ಕುಮಾರ್​ ಹೀಗೆ ಅಂದಿದ್ಯಾಕೆ?

Updated on: Mar 20, 2021 | 6:52 PM

ಪುನೀತ್​ ರಾಜ್​ಕುಮಾರ್​ ನಟನೆಯ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ತೆರೆಗೆ ಬರುತ್ತಿದೆ. ಇಂದು ರಿಲೀಸ್​ ಆದ ಚಿತ್ರದ ಟ್ರೇಲರ್​ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಮೂಡಿಸಿದೆ. ಸಿನಿಮಾ ರಿಲೀಸ್​ಗೂ ಮೊದಲು ಪುನೀತ್​ ರಾಜ್​ಕುಮಾರ್​ ಟಿವಿ9 ಕನ್ನಡಕ್ಕೆ ವಿಶೇಷ ಸಂದರ್ಶನವೊಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ ಅಪ್ಪು ವಿಶೇಷ ಮನವಿ ಒಂದನ್ನು ಮಾಡಿದ್ದಾರೆ.

ಟೀಸರ್​ನಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಹೀರೋಯಿನ್​ ಬಂದು ಪುನೀತ್​ ಬಳಿ ನೀವು ಥೇಟ್​ ಅಣ್ಣನ ರೀತಿ ಕಾಣುತ್ತೀರಿ ಎಂದು ಹೇಳುತ್ತಾರೆ. ಹೌದು, ಆದ್ರೆ, ಅಣ್ಣ ಎಂದು ಮಾತ್ರ ಕರೆಯಬೇಡಿ ಎಂದು ಪುನೀತ್​ ಮನವಿ ಮಾಡುತ್ತಾರೆ. ಇದೇ ವಿಚಾರವಾಗಿ ಪುನೀತ್​ಗೆ ಪ್ರಶ್ನೆ ಕೇಳಲಾಯಿತು. ನೀವು ಈ ಡೈಲಾಗ್​ ಹೇಳಿದ್ದು, ನಾಯಕಿಗೋ ಅಥವಾ ಸಮಸ್ತ ಯುವತಿಯರಿಗೋ ಎಂದು ಕೇಳಲಾಯಿತು. ಇದಕ್ಕೆ ಪುನೀತ್​ ಫನ್ನಿಯಾಗಿ ಉತ್ತರಿಸಿದ್ದಾರೆ.

ನನ್ನನ್ನು ಯಾರೂ ಪ್ರೀತಿಸಬೇಡಿ. ನನಗೆ ಮದುವೆ ಆಗಿದೆ ಎಂದು ನಕ್ಕರು ಪುನೀತ್​. ನಂತರ ಮಾತನಾಡಿದ ಅವರು, ಅವರು ಪ್ರೀತಿ ಮಾಡಲಿ. ಅವರ ಪ್ರೀತಿ-ಅಭಿಮಾನವೇ ಇಲ್ಲಿವರೆಗೆ ತಂದು ನಿಲ್ಲಿಸಿದೆ ಎಂದು ಸಂತಸ ಹೊರಹಾಕಿದರು. ಇನ್ನು ಆಹಾರದಲ್ಲಿ ಏನು ಇಷ್ಟ ಎನ್ನು ಪ್ರಶ್ನೆಗೆ ಉತ್ತರಿಸಿದ ಪುನೀತ್​, ನನಗೆ ನಾನ್​ ವೆಜ್​ ಎಂದರೆ ತುಂಬಾನೇ ಇಷ್ಟ. ಊಟ ಎಂದ್ರೆ ಇಷ್ಟ. ಎಲ್ಲಾ ಊರುಗಳಲ್ಲಿ ಎಲ್ಲಾ ರೀತಿಯ ಊಟ ಮಾಡಿದ್ದೇನೆ ಎಂದರು.

YouTube video player

ಪುನೀತ್​ ಹಾಗೂ ನಿರ್ದೇಶಕ ಸಂತೋಷ್​​​ ಆನಂದ್​​ರಾಮ್​ ಕಾಂಬಿನೇಷನ್​ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್​ ಆಗಿರುವ ಸಿನಿಮಾ ಟೀಸರ್​ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್​ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್​ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್​ ಹಾಗೂ ಪ್ರಕಾಶ್​ ರಾಜ್​ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್​ 1ರಂದು ಸಿನಿಮಾ ತೆರೆಗೆ ಬರುತ್ತಿದೆ.
YouTube video player

ಇದನ್ನೂ ಓದಿ: Yuvarathnaa Trailer: ಕೌಂಟರ್​ ಕೊಟ್ರೆ ಎನ್​ಕೌಂಟರ್​​; ಯುವರತ್ನ ಟ್ರೇಲರ್​ನಲ್ಲಿ ಮಿಂಚಿದ ಪುನೀತ್​ ರಾಜ್​ಕುಮಾರ್​

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us