
ಪಡ್ಡೆ ಹುಡುಗರ ಕನಸಸಿನ ರಾಣಿ ಬಾಲಿವುಡ್ ನಟಿ ಪೂನಂ ಪಾಂಡೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಹುಕಾಲದ ಗೆಳೆಯ ಸ್ಯಾಮ್ನನ್ನು ವರಿಸಿದ್ದರು. ಆದರೆ ಈಗ ಗಂಡನ ವಿರುದ್ಧವೇ ದೂರು ನೀಡಿದ್ದಾರೆ.
ಕಳೆದ ಸೆಪ್ಟೆಂಬರ್ 10ರಂದು ಪೂನಂ ಪಾಂಡೆ ತನ್ನ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ಸದ್ಯ ಪೂನಂ ಪಾಂಡೆ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಸ್ಯಾಮ್ ಅಲ್ಲಿಗೆ ಬಂದು ಪೂನಂ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Published On - 6:55 am, Wed, 23 September 20