ಲೂಸ್ ಮಾದ 2 ದಿನ ಹಿಂದೆ ಮಾಡಿಕೊಂಡ ಎಡವಟ್ಟು! ಗಿರಿನಗರ ಪೊಲೀಸರು ಹೇಳೋದೇನು?
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟ ಲೂಸ್ ಮಾದ ಯೋಗೀಶ್ರನ್ನು ISD ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವುದು ಸಂಚಲನ ಉಂಟುಮಾಡಿದ್ದರೂ.. ಈ ನಡುವೆ ನಟನ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯೋಗಿ ಭಾಗಿಯಾಗಿದ್ದ ಒಂದು ಪಾರ್ಟಿಯ ವೇಳೆ ಕಿರಿಕ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವುದು ಭಾರೀ ಸಂಚಲನ ಉಂಟುಮಾಡಿದ್ದರೂ.. ಕೇವಲ ಎರಡು ದಿನಗಳ ಹಿಂದೆ ಯೋಗಿ ಟಾಟಾ ಪ್ರಮೋಟ್ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ನಟ ಲೂಸ್ ಮಾದ ಯೋಗೀಶ್ರನ್ನು ISD ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು.
ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವುದು ಸಂಚಲನ ಉಂಟುಮಾಡಿದ್ದರೂ.. ಈ ನಡುವೆ ನಟನ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಯೋಗಿ ಭಾಗಿಯಾಗಿದ್ದ ಒಂದು ಪಾರ್ಟಿಯ ವೇಳೆ ಕಿರಿಕ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲ ತಳುಕು ಹಾಕಿಕೊಂಡಿರುವುದು ಭಾರೀ ಸಂಚಲನ ಉಂಟುಮಾಡಿದ್ದರೂ.. ಕೇವಲ ಎರಡು ದಿನಗಳ ಹಿಂದೆ ಯೋಗಿ ಟಾಟಾ ಪ್ರಮೋಟ್ ಅಪಾರ್ಟ್ಮೆಂಟ್ನಲ್ಲಿ ನಡೆದ ಪಾರ್ಟಿ ಒಂದರಲ್ಲಿ ಭಾಗಿಯಾಗಿದ್ದರು. ರಾತ್ರಿ ಸುಮಾರು 8.30 ಗಂಟೆಗೆ ಪಾರ್ಟಿಯಿಂದ ಅಕ್ಕಪಕ್ಕದ ಫ್ಲ್ಯಾಟ್ನವರಿಗೆ ಕಿರಿಕಿರಿ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದರಂತೆ.
ಕೂಡಲೇ ಸ್ಥಳಕ್ಕೆ ಬಂದಿದ್ದ ಗಿರಿನಗರ ಠಾಣೆಯ ಬೀಟ್ ಪೊಲೀಸರು ಪಾರ್ಟಿ ಮಾಡುವಾಗ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಮಾಡದಂತೆ ವಾರ್ನಿಂಗ್ ಕೊಟ್ಟಿದ್ದರು ಎಂದು ತಿಳಿದುಬಂದಿದೆ.