ಯುಗಾದಿಯ ಶುಭ ಸಂದರ್ಭದಲ್ಲಿ ಯುವರತ್ನ ಹೊಸ ಸುದ್ದಿ ನೀಡಿದ್ದಾನೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮುಂದಿನ ಚಿತ್ರ ಘೋಷಣೆಯಾಗಿದೆ. ಹೊಂಬಾಳೆ ಫಿಲ್ಮ್ ನಿರ್ಮಿಸಲಿರುವ ಪುನೀತ್ ರಾಜ್ಕುಮಾರ್ ಮುಂದಿನ ಸಿನಿಮಾವನ್ನು ಲೂಸಿಯಾ ಪವನ್ ನಿರ್ದೇಶಿಸಲಿದ್ದಾರೆ. ಈ ಕುರಿತು ಸ್ವತಃ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿ ವಿಷಯ ಬಹಿರಂಗಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಿತ್ತು. ಈ ಚಿತ್ರಕ್ಕೆ ಎದುರಾಗಿದ್ದ ಅಡ್ಡಿ ಆತಂಕಗಳು ಒಂದೆರಡಲ್ಲ. ಯುವರತ್ನ ಬಿಡುಗಡೆಯಾದ ಸಮಯದಲ್ಲೇ ಕೊರೊನಾ ವೈರಸ್ ಹಾವಳಿ ಹೆಚ್ಚಾಯಿತು. ಪೈರಸಿ ಕಾಟವನ್ನೂ ಈ ಸಿನಿಮಾ ಎದುರಿಸಬೇಕಾಯಿತು. ನಂತರ ಶೇ.50 ಆಸನ ಮಿತಿ ನಿಯಮ ಜಾರಿ ಆಯಿತು. ಇದೆಲ್ಲದರ ನಡುವೆಯೂ ಹೆಚ್ಚು ಜನರನ್ನು ತಲುಪುವ ಸಲುವಾಗಿ ಯುವರತ್ನ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿತ್ತು. ಇದಾದ ನಂತರ ಪುನೀತ್ ರಾಜ್ಕುಮಾರ್ ಯಾರ ಜತೆಗೆ ಮುಂದಿನ ಸಿನಿಮಾ ಮಾಡಲಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ. ಮುಂದಿನ ಸಿನಿಮಾವನ್ನೂ ವಿಜಯ್ ಕಿರಗಂದೂರು ಅವರೇ ನಿರ್ಮಾಣ ಮಾಡಲಿದ್ದಾರೆ.
Announcing my next movie on this auspicious day of Ugadi. #HombaleFilms9 with @pawanfilms ⚡@VKiragandur @hombalefilms
Principal photography starts in July✌️ pic.twitter.com/29CMGBjgWQ— Puneeth Rajkumar (@PuneethRajkumar) April 13, 2021
ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು, ವಿದ್ಯಾರ್ಥಿಗಳಿಗೆ ಅಂಟಿರುವ ಡ್ರಗ್ಸ್ ನಂಟು ಮುಂತಾದ ಗಂಭೀರ ವಿಷಯದ ಕುರಿತು ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಯುವರತ್ನದಲ್ಲಿ ಮೆಸೇಜ್ ನೀಡಿದ್ದಾರೆ. ಇದು ಎಲ್ಲ ರಾಜ್ಯಗಳ ಪ್ರೇಕ್ಷಕರಿಗೂ ಅನ್ವಯ ಆಗುವಂತಹ ವಸ್ತುವಿಷಯವಾಗಿತ್ತು. ಹಾಗಾಗಿ ದೇಶಾದ್ಯಂತ ಇರುವ ಸಿನಿಪ್ರಿಯರಿಗೆ ಮತ್ತು ಪರಭಾಷೆಯ ಯುವಜನತೆಗೆ ‘ಯುವರತ್ನ’ ಮನರಂಜನೆ ನೀಡಿತ್ತು. ಇನ್ನು ಮುಂದಿನ ಸಿನಿಮಾದದಲ್ಲಿ ಲೂಸಿಯಾ ಪವನ್ ಪವರ್ ಸ್ಟಾರ್ಗೆ ಯಾವ ಕಥೆ ಹೆಣೆಯುತ್ತಾರೆ ಕಾದು ನೋಡಬೇಕಿದೆ.
(Powerstar Puneethrajkumar announced his next film with Lucia Pawan and Hombale films)