ಸಂಜನಾ ಮತಾಂತರದ ಬಗ್ಗೆ ಆಕ್ಷೇಪ‌ ಇಲ್ಲ! ಆದ್ರೆ.. ಸಂಬರಗಿ ಎತ್ತಿದ ಮೂಲಭೂತ ಪ್ರಶ್ನೆ ಏನು?

ಬೆಂಗಳೂರು: ನಟಿ ಸಂಜನಾ ಇಸ್ಲಾಂ‌ ಧರ್ಮಕ್ಕೆ‌ ಮತಾಂತರಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾವು ಮಾಡಿರುವ ಪೋಸ್ಟ್ ವಿಚಾರದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಸಂಜನಾ ಮತಾಂತರಗೊಂಡಿರುವ ಬಗ್ಗೆ ಯಾವುದೇ ಆಕ್ಷೇಪ‌ ಇಲ್ಲ. ಸಂವಿಧಾನದಲ್ಲಿ ಯಾರು, ಯಾವ ಧರ್ಮಕ್ಕೆ ಬೇಕಾದ್ರೂ ಮತಾಂತರಗೊಳ್ಳುವ ಹಕ್ಕಿದೆ. ಆದ್ರೆ ಸಂಜನಾ ಹಿಂದೂ ಹಾಗೂ ಮುಸ್ಲಿಂ ಧರ್ಮಕ್ಕೆ ಅನ್ಯಾಯ ಮಾಡಿದ್ದಾರೆ ಎಂದಿದ್ದಾರೆ ಸಂಬರಗಿ. ಜೊತೆಗೆ, ಅವರು ಮತಾಂತರಗೊಂಡಿರೋದನ್ನ ಬಹಿರಂಗಪಡಿಸದೇ ಮುಚ್ಚಿಟ್ಟಿರೋದು ತಪ್ಪು. ಪೊಲೀಸರಿಗೆ ಸಂಜನಾ ಅಂತ ಸುಳ್ಳು ಮಾಹಿತಿ […]

ಸಂಜನಾ ಮತಾಂತರದ ಬಗ್ಗೆ ಆಕ್ಷೇಪ‌ ಇಲ್ಲ! ಆದ್ರೆ.. ಸಂಬರಗಿ ಎತ್ತಿದ ಮೂಲಭೂತ ಪ್ರಶ್ನೆ ಏನು?

Updated on: Sep 19, 2020 | 11:15 AM

ಬೆಂಗಳೂರು: ನಟಿ ಸಂಜನಾ ಇಸ್ಲಾಂ‌ ಧರ್ಮಕ್ಕೆ‌ ಮತಾಂತರಗೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾವು ಮಾಡಿರುವ ಪೋಸ್ಟ್ ವಿಚಾರದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಸಂಜನಾ ಮತಾಂತರಗೊಂಡಿರುವ ಬಗ್ಗೆ ಯಾವುದೇ ಆಕ್ಷೇಪ‌ ಇಲ್ಲ. ಸಂವಿಧಾನದಲ್ಲಿ ಯಾರು, ಯಾವ ಧರ್ಮಕ್ಕೆ ಬೇಕಾದ್ರೂ ಮತಾಂತರಗೊಳ್ಳುವ ಹಕ್ಕಿದೆ. ಆದ್ರೆ ಸಂಜನಾ ಹಿಂದೂ ಹಾಗೂ ಮುಸ್ಲಿಂ ಧರ್ಮಕ್ಕೆ ಅನ್ಯಾಯ ಮಾಡಿದ್ದಾರೆ ಎಂದಿದ್ದಾರೆ ಸಂಬರಗಿ.

ಜೊತೆಗೆ, ಅವರು ಮತಾಂತರಗೊಂಡಿರೋದನ್ನ ಬಹಿರಂಗಪಡಿಸದೇ ಮುಚ್ಚಿಟ್ಟಿರೋದು ತಪ್ಪು. ಪೊಲೀಸರಿಗೆ ಸಂಜನಾ ಅಂತ ಸುಳ್ಳು ಮಾಹಿತಿ ಕೊಟ್ಟಿದ್ದಾರೆ, ಈ ಬಗ್ಗೆ ಸೂಕ್ತ ತನಿಖೆ ಆಗ್ಬೇಕು ಎಂದಿದ್ದಾರೆ. ಜೊತೆಗೆ ಇಸ್ಲಾಂ ಧರ್ಮದಲ್ಲಿ ಡ್ರಗ್ಸ್ ಸೇವನೆ ಮಾಡೋದನ್ನ ನಿಷೇಧಿಸಲಾಗಿದೆ.

ಅಲ್ಲದೆ ಕೇರಳ ಹೈಕೋರ್ಟ್ ಈ ಹಿಂದಿನ ಬೇರೆಯದ್ದೇ ಪ್ರಕರಣಗಳಲ್ಲಿ ಲವ್ ಜಿಹಾದ್ ಬಗ್ಗೆ ತನಿಖೆ ಆಗ್ಬೇಕು ಅಂತಾನೂ ಉಲ್ಲೇಖ ಮಾಡಿದೆ. ಆ ಉಲ್ಲೇಖದ ಪ್ರತಿ ನನ್ನ ಹತ್ತಿರ ಇದೆ. ಹೀಗಾಗಿ ಎರಡೂ ಧರ್ಮಕ್ಕೂ ಧಕ್ಕೆ ತಂದಿರುವ ಸಂಜನಾಗೆ ಶಿಕ್ಷೆ ಆಗ್ಬೇಕು ಎಂದು ಪ್ರಶಾಂತ್ ಸಂಬರಗಿ ಅಭಿಪ್ರಾಯಪಟ್ಟಿದ್ದಾರೆ.