ಸ್ಟಾರ್​ ನಟರ ಪತ್ನಿಯರಿಗೂ ಇದ್ಯಾ Drugs ಚಟ.. ‘ಬಾಲಾಜಿ ಲೋಕ’ದಲ್ಲಿ ಇನ್ನೂ ಏನೇನಿದೆ!?

ಸ್ಟಾರ್​ ನಟರ ಪತ್ನಿಯರಿಗೂ ಇದ್ಯಾ Drugs ಚಟ.. ‘ಬಾಲಾಜಿ ಲೋಕ’ದಲ್ಲಿ ಇನ್ನೂ ಏನೇನಿದೆ!?

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಆಂಕರ್ ಅಕುಲ್‌ ಬಾಲಾಜಿ ರೆಸಾರ್ಟ್‌ನಲ್ಲೇ ಸ್ಟಾರ್‌ಗಳ ಡ್ರಗ್ಸ್‌ ಪಾರ್ಟಿಗಳು ನಡೀತಿದ್ವಾ? ನಟಿಯರು ಮಾತ್ರವಲ್ಲ ಸ್ಟಾರ್‌ ನಟರ ಪತ್ನಿಯರಿಗೂ ಇದ್ಯಾ Drugs ಅಭ್ಯಾಸ? ನಟ, ನಟಿಯರಿಗೆ ಅಕುಲ್‌ ಡ್ರಗ್ಸ್‌ ಸಪ್ಲೈ ತರಿಸಿಕೊಡ್ತಿದ್ರಾ? ಪೊಲೀಸ್‌ ತನಿಖೆಯಲ್ಲಿ ಬಯಲಾದ ಸ್ಫೋಟಕ ಸತ್ಯಗಳೇನು? ಹೀಗೆ ನಿಮ್ಮಲ್ಲಿ ಹುಟ್ಟುತ್ತಿರುವ ಹತ್ತು ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಅಕುಲ್‌ ‘ಡ್ರಗ್ಸ್‌ ಪಾರ್ಟಿ’ಯ ಎಕ್ಸ್‌ಕ್ಲೂಸಿವ್‌ ಡಿಟೇಲ್ಸ್‌ ಟಿವಿ 9ಗೆ ದೊರೆತಿದೆ. ಸನ್​ಶೈನ್ ಲೇಡಿಸ್ ಪಾರ್ಟಿ ವಿತ್ ಸ್ಮೈಲ್. ಅರೇ, ಏನಿದು ಸನ್​ಶೈನ್ ಲೇಡಿಸ್ […]

KUSHAL V

|

Sep 19, 2020 | 11:36 AM

ಬೆಂಗಳೂರು: ದೊಡ್ಡಬಳ್ಳಾಪುರ ಸಮೀಪದ ಆಂಕರ್ ಅಕುಲ್‌ ಬಾಲಾಜಿ ರೆಸಾರ್ಟ್‌ನಲ್ಲೇ ಸ್ಟಾರ್‌ಗಳ ಡ್ರಗ್ಸ್‌ ಪಾರ್ಟಿಗಳು ನಡೀತಿದ್ವಾ? ನಟಿಯರು ಮಾತ್ರವಲ್ಲ ಸ್ಟಾರ್‌ ನಟರ ಪತ್ನಿಯರಿಗೂ ಇದ್ಯಾ Drugs ಅಭ್ಯಾಸ? ನಟ, ನಟಿಯರಿಗೆ ಅಕುಲ್‌ ಡ್ರಗ್ಸ್‌ ಸಪ್ಲೈ ತರಿಸಿಕೊಡ್ತಿದ್ರಾ? ಪೊಲೀಸ್‌ ತನಿಖೆಯಲ್ಲಿ ಬಯಲಾದ ಸ್ಫೋಟಕ ಸತ್ಯಗಳೇನು? ಹೀಗೆ ನಿಮ್ಮಲ್ಲಿ ಹುಟ್ಟುತ್ತಿರುವ ಹತ್ತು ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಅಕುಲ್‌ ‘ಡ್ರಗ್ಸ್‌ ಪಾರ್ಟಿ’ಯ ಎಕ್ಸ್‌ಕ್ಲೂಸಿವ್‌ ಡಿಟೇಲ್ಸ್‌ ಟಿವಿ 9ಗೆ ದೊರೆತಿದೆ.

ಸನ್​ಶೈನ್ ಲೇಡಿಸ್ ಪಾರ್ಟಿ ವಿತ್ ಸ್ಮೈಲ್. ಅರೇ, ಏನಿದು ಸನ್​ಶೈನ್ ಲೇಡಿಸ್ ಪಾರ್ಟಿ ವಿತ್ ಸ್ಮೈಲ್ ಅಂತಿರಾ? ಇಲ್ಲೆ ಇರೋದು ವಿಚಾರ. ಅಕುಲ್ ಬಾಲಾಜಿ ಹೊಂದಿರುವ ರೆಸಾರ್ಟ್ ಹೆಸರು Sunshine BY JADE. ಬೆಂಗಳೂರಿನ ಹೊರವಲಯದಲ್ಲಿ ಇರುವ ದೊಡ್ಡಬಳ್ಳಾಪುರ ಬಳಿಯಿದೆ ಈ ರೆಸಾರ್ಟ್. ಈ ರೆಸಾರ್ಟ್​ನಲ್ಲಿ ಹೊರಗಿನ ಜನರಿಗೆಂದು ರೆಸಾರ್ಟ್ ವತಿಯಿಂದಲೇ ಇವೆಂಟ್ ಮಾಡುತ್ತಿದ್ರು.

ಸ್ಟಾರ್ ನಟ ಮತ್ತು ನಿರ್ಮಾಪಕರ ಪತ್ನಿಯರಿಗಾಗಿಯೇ ಪಾರ್ಟಿ ಆಯೋಜಿಸಲಾಗುತ್ತಿತ್ತು. ಕನ್ನಡದ ಸ್ಟಾರ್ ನಟರ ಪತ್ನಿಯರನ್ನ ಕರೆಸಿ ಮಾಡುತಿದ್ದ ಲೇಡಿಸ್ ಪಾರ್ಟಿ ನಡೆಸುತ್ತಿದ್ದ ಅಕುಲ್​ ಮಧ್ಯಾಹ್ನ ಶುರುವಾಗುತ್ತಿದ್ದ ಈ ಪಾರ್ಟಿಗಳು ತಡರಾತ್ರಿವರೆಗೂ ನಡೆಯುತ್ತಿದ್ದವು ಎಂದು ತಿಳಿದುಬಂದಿದೆ.

ಪಾರ್ಟಿಯಲ್ಲಿ ಇಸ್ಪೀಟ್, ಮಾಂಸದೂಟ ನಂತರ ಭರ್ಜರಿ ಎಣ್ಣೆ ಪಾರ್ಟಿ. ಎಲ್ಲಾ ಪಾರ್ಟಿ ಮುಗಿದ ನಂತರ ಡ್ರಗ್ಸ್ ಸಹ ನೀಡಲಾಗುತಿತ್ತು ಎಂದು ಹೇಳಲಾಗಿದೆ. ಜ್ಯೂಸ್​ಗೆ MDMA ಮಾತ್ರೆಗಳನ್ನು ಬೆರಸಿ ನೀಡಲಾಗುತಿತ್ತಂತೆ. ಈ MDMA ಮಾತ್ರೆಗಳಿಗೆ ಸ್ಮೈಲಿ ಎಂದು ಕರೆಯುತ್ತಿದ್ದರಂತೆ  ಎಂದು ಮೂಲಗಳಿಂದ ತಿಳಿದುಬಂದಿದೆ.

ಜೊತೆಗೆ, ಒಂದು MDMA ಮಾತ್ರೆಯನ್ನು ಮೂವರಿಗೆ ಹಂಚಲಾಗುತಿತ್ತು ಎಂದು ತಿಳಿದುಬಂದಿದೆ. ಬಳಿಕ ವಾಪಸ್​ ಬೆಂಗಳೂರಿಗೆ ಬರುವವರಿಗೆ ವ್ಯವಸ್ಥೆ ಮಾಡಲಾಗುತಿತ್ತು. ಇದಲ್ಲದೆ, ಅಲ್ಲೆ ಉಳಿಯುವವರಿಗೆ ಮಲಗಲು ರೂಮ್ ವ್ಯವಸ್ಥೆ ಸಹ ಮಾಡಲಾಗುತ್ತಿತ್ತು. ಈ ರೀತಿ ನಿರೂಪಕ ಅಕುಲ್ ಬಾಲಾಜಿಯ ಸನ್​ಶೈನ್ ರೆಸಾರ್ಟ್​ನಲ್ಲಿ ಡ್ರಗ್ಸ್ ದಂಧೆ ನಡೆದಿರಬಹುದು ಎಂಬ ಮಾಹಿತಿ CCBಗೆ ಲಭ್ಯವಾಗಿದೆ.

Follow us on

Most Read Stories

Click on your DTH Provider to Add TV9 Kannada