ಸಿಸಿಬಿ ವಿಚಾರಣೆ: ಸಂತೋಷ್ ಹಾಗೂ ಅಕುಲ್ ಹೇಳಿಕೆಗೂ, ಆಸ್ತಿ ದಾಖಲಾತಿಗೂ ಮಿಸ್ಮ್ಯಾಚ್!
[lazy-load-videos-and-sticky-control id=”PUg04Yydkqw”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ನಟ ಸಂತೋಷ್ ಕುಮಾರ್ ಹಾಗೂ ಆಂಕರ್ ಅಕುಲ್ ವಿಚಾರಣೆ ನಡೆಸಲಾಗುತ್ತಿದೆ. ನಟ ಸಂತೋಷ್ಗೆ ಸೇರಿದ ವಿಲ್ಲಾ ಹಾಗೂ ಅಕುಲ್ಗೆ ಸೇರಿದ ರೆಸಾರ್ಟ್ ಡಾಕ್ಯುಮೆಂಟ್ಗಳನ್ನು ಈ ಇಬ್ಬರು ನಟರು ವಿಚಾರಣೆಗೆ ಹಾಜರಾಗುವಾಗ ತಂದಿದ್ದು, ಸಂತೋಷ್ ಹಾಗೂ ಬಾಲಾಜಿ ತಂದಿದ್ದ ಡಾಕ್ಯುಮೆಂಟ್ಸ್ನಲ್ಲಿ ಸಿಸಿಬಿ ಅಧಿಕಾರಿಗಳಿಗೆ ವ್ಯತ್ಯಾಸ ಕಂಡು ಬಂದಿದೆ. ನಟ ಸಂತೋಷ್ ದೇವನಹಳ್ಳಿ ಬಳಿಯ ವಿಲ್ಲಾಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದ್ದು, ಅಕುಲ್ ಬಾಲಾಜಿ ದೊಡ್ಡಬಳ್ಳಾಪುರ […]
[lazy-load-videos-and-sticky-control id=”PUg04Yydkqw”]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ನಟ ಸಂತೋಷ್ ಕುಮಾರ್ ಹಾಗೂ ಆಂಕರ್ ಅಕುಲ್ ವಿಚಾರಣೆ ನಡೆಸಲಾಗುತ್ತಿದೆ.
ನಟ ಸಂತೋಷ್ಗೆ ಸೇರಿದ ವಿಲ್ಲಾ ಹಾಗೂ ಅಕುಲ್ಗೆ ಸೇರಿದ ರೆಸಾರ್ಟ್ ಡಾಕ್ಯುಮೆಂಟ್ಗಳನ್ನು ಈ ಇಬ್ಬರು ನಟರು ವಿಚಾರಣೆಗೆ ಹಾಜರಾಗುವಾಗ ತಂದಿದ್ದು, ಸಂತೋಷ್ ಹಾಗೂ ಬಾಲಾಜಿ ತಂದಿದ್ದ ಡಾಕ್ಯುಮೆಂಟ್ಸ್ನಲ್ಲಿ ಸಿಸಿಬಿ ಅಧಿಕಾರಿಗಳಿಗೆ ವ್ಯತ್ಯಾಸ ಕಂಡು ಬಂದಿದೆ.
ನಟ ಸಂತೋಷ್ ದೇವನಹಳ್ಳಿ ಬಳಿಯ ವಿಲ್ಲಾಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದ್ದು, ಅಕುಲ್ ಬಾಲಾಜಿ ದೊಡ್ಡಬಳ್ಳಾಪುರ ಬಳಿಯ ರೆಸಾರ್ಟ್ ಲೀಜ್ ಕುರಿತು ಡಾಕ್ಯುಮೆಂಟ್ಸ್ ತಂದಿದ್ದಾರೆ. ಈ ಇಬ್ಬರು ತಂದಿದ್ದ ದಾಖಲಾತಿಗಳನ್ನು ಸಿಸಿಬಿ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಈ ವೇಳೆ, ಸಂತೋಷ್ ಹಾಗೂ ಅಕುಲ್ ಬಾಲಾಜಿ ನೀಡಿರುವ ಹೇಳಿಕೆಗಳಿಗೂ ಹಾಗೂ ಅವರ ಡಾಕ್ಯುಮೆಂಟ್ಸ್ ಕುರಿತು ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಮೊದಲು ದಾಖಲಾತಿಗಳ ಬಗ್ಗೆಯೇ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ದಾಖಲಾತಿಗಳ ಕುರಿತು ಮೊದಲು ಸ್ಪಷ್ಟನೆ ನೀಡಿ ಅಂತಾ ತಾಕೀತು ಮಾಡಿದ್ದಾರೆ.
Published On - 12:36 pm, Sat, 19 September 20