CCB ಕಚೇರಿ ಬಳಿ ಹೈಡ್ರಾಮಾ: ಯುವರಾಜನನ್ನ ಅಲ್ಲೇ ಕೂಡ್ರಿಸಿರು. ನಾವು ಬಂದು ವಿಚಾರಿಸ್ಕೋತೀವಿ ಅಂದರಂತೆ!
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೆ ಮತ್ತುಷ್ಟು ರೋಚಕ ಸಂಗತಿಗಳು ಹೊರಬೀಳುತ್ತಿದೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ನ್ಯಾಯಾಂಗ ಬಂಧನ ಹಾಗೂ ಐಂದ್ರಿತಾ ರೇ ಮತ್ತು ದಿಗಂತ್ ದಂಪತಿಯ ವಿಚಾರಣೆಯ ಬೆನ್ನಲ್ಲೇ ಚಿತ್ರರಂಗದ ಮತ್ತಷ್ಟು ನಟ ನಟಿಯರಿಗೆ CCB ಬುಲಾವ್ ಬರುವ ಸಾಧ್ಯತೆಯಿದೆ. ಯುವರಾಜನನ್ನ ಅಲ್ಲೇ ಮಹಡಿಯಲ್ಲಿ ಕೂಡ್ರಿಸಿರು. ನಾವೆಲ್ಲಾ ಬಂದು ವಿಚಾರಿಸ್ಕೋತೀವಿ ಅಂದರಂತೆ! ಈ ನಡುವೆ ಇಂದು CCB ಅಧಿಕಾರಿಗಳು ಚಿತ್ರನಟ ಸಂತೋಷ್ ಆರ್ಯನ್, ಌಂಕರ್ […]
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿ ದಿನೇ ದಿನೆ ಮತ್ತುಷ್ಟು ರೋಚಕ ಸಂಗತಿಗಳು ಹೊರಬೀಳುತ್ತಿದೆ. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಗೆ ನ್ಯಾಯಾಂಗ ಬಂಧನ ಹಾಗೂ ಐಂದ್ರಿತಾ ರೇ ಮತ್ತು ದಿಗಂತ್ ದಂಪತಿಯ ವಿಚಾರಣೆಯ ಬೆನ್ನಲ್ಲೇ ಚಿತ್ರರಂಗದ ಮತ್ತಷ್ಟು ನಟ ನಟಿಯರಿಗೆ CCB ಬುಲಾವ್ ಬರುವ ಸಾಧ್ಯತೆಯಿದೆ. ಯುವರಾಜನನ್ನ ಅಲ್ಲೇ ಮಹಡಿಯಲ್ಲಿ ಕೂಡ್ರಿಸಿರು. ನಾವೆಲ್ಲಾ ಬಂದು ವಿಚಾರಿಸ್ಕೋತೀವಿ ಅಂದರಂತೆ! ಈ ನಡುವೆ ಇಂದು CCB ಅಧಿಕಾರಿಗಳು ಚಿತ್ರನಟ ಸಂತೋಷ್ ಆರ್ಯನ್, ಌಂಕರ್ ಅಕುಲ್ ಬಾಲಾಜಿ ಹಾಗೂ ಪಾಲಿಕೆಯ ಮಾಜಿ ಸದಸ್ಯ R.V.ಯುವರಾಜ್‌ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮೂವರು ನಿಗದಿತ ಅವಧಿಗೆ ಮುನ್ನವೇ ಚಾಮರಾಜಪೇಟೆಯ CCB ಕಚೇರಿಗೆ ಹಾಜರಾಗಿದ್ದರು.
ಯುವರಾಜನಂತೂ ಎಲ್ಲರಿಗಿಂತಾ ಮೊದಲು ಬಂದಿದ್ದಾರೆ. ಸಿಸಿಬಿ ಕಚೇರಿಯಲ್ಲಿ ಆಗ ಸೆಂಟ್ರಿ ಮಾತ್ರವೇ ಇದ್ದಿದ್ದಂತೆ. ಆತ ದಡಬಡಾಯಿಸಿ.. ಇನ್ನೂ ಮನೆಯಲ್ಲೇ ಇದ್ದ ಮೇಲಿನ ಅಧಿಕಾರಿಗಳಿಗೆ ಫೋನಾಯಿಸಿ ನಿಮ್ಮನ್ನು ಕೇಳ್ಕಂಡು ಯಾರೋ ಬಂದಿದ್ದಾರೆ ಎಂದು ತಿಳಿಸಿದನಂತೆ. ಮುಗುಳ್ನಕ್ಕ ಆ ಅಧಿಕಾರಿ ಸರಿ ಆತನನ್ನು ಅಲ್ಲೇ ಮೇಲಿನ ಮಹಡಿಯಲ್ಲಿ ಕೂಡ್ರಿಸಿರು. ನಾವೆಲ್ಲಾ ಬಂದು ವಿಚಾರಿಸ್ಕೋತೀವಿ ಅಂದರಂತೆ!
ಮಾಜಿ ಶಾಸಕ RV ದೇವರಾಜ್ ಮಗ ಹಾಗೂ ಪಾಲಿಕೆ ಮಾಜಿ ಸದಸ್ಯರಾಗಿರುವ RV ಯುವರಾಜ್‌ಗೂ ಹಾಗೂ ಪ್ರಕರಣದ A5 ಆರೋಪಿ ವೈಭವ್ ಜೈನ್ ಜೊತೆ ನಂಟು ಇರುವ ಅಧಿಕಾರಿಗಳ ಗಮನಕ್ಕೆ ಬಂದಿತ್ತು. RV ಯುವರಾಜ್ ಮತ್ತು ಅವರ ಸ್ನೇಹಿತರ ಪಾರ್ಟಿಗಳಲ್ಲಿ ವೈಭವ್ ಜೈನ್ ಭಾಗಿಯಾಗುತ್ತಿದ್ದ ಎಂದು ತಿಳಿದುಬಂದಿದೆ.
ನಗರದ ಹೊರವಲಯದಲ್ಲಿ ಪಾರ್ಟಿಗಳನ್ನ ನಡೆಸಿರುವ ಮಾಹಿತಿ ಸಿಕ್ಕಿದ್ದು ಬಂಧಿತ ಆರೋಪಿಗಳ ಜೊತೆ RV ಯುವರಾಜ್ ಹಲವಾರು ಬಾರಿ ಫೋನ್ ಮೂಲಕ ಸಂಭಾಷಣೆ ನಡೆಸಿದ್ದರು ಎಂಬ ಮಾಹಿತಿ ದೊರೆತಿದೆ. ಈ ಹಿಂದೆ ಯಲಹಂಕದ ಬಳಿಯಿರುವ ಲೇ ರೋಮ ಗಾರ್ಡೇನಿಯಾ ರೆಸಾರ್ಟ್‌ನಲ್ಲಿ ಯುವರಾಜ್ ಬರ್ತ್‌ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಈ ವೇಳೆ ಡ್ರಗ್ಸ್ ಪೆಡ್ಲರ್ ಜೊತೆ ಪಾರ್ಟಿ ಮಾಡಿರುವ ಬಗ್ಗೆ CCB ಗೆ ಸಾಕ್ಷ್ಯ ಸಿಕ್ಕಿತ್ತು. ಈ ಆಧಾರದ ಮೇಲೆ ಯುವರಾಜ್‌ಗೆ CCB ಅಧಿಕಾರಿಗಳ ನೋಟಿಸ್ ನೀಡಿದ್ದಾರಂತೆ.
ಇನ್ನು ವಿಚಾರಣೆಗೆ ಹಾಜರಾದ ಚಿತ್ರನಟ ಸಂತೋಷ್ ಕುಮಾರ್ ಅಧಿಕಾರಿಗಳು ಕಚೇರಿಗೆ ಆಗಮಿಸುವ ಮುನ್ನವೇ ತಾವು ಬಂದಿಳಿದರು. ನಿನ್ನೆ ಮಧ್ಯಾಹ್ನ 1:20 ಕ್ಕೆ CCBಯಿಂದ ನೋಟಿಸ್ ಬಂದಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಪಷ್ಟನೆ ಕೇಳಲು ಕರೆದಿದ್ದಾರೆ ಎಂದು ಸಂತೋಷ್ ಆರ್ಯನ್ ತಿಳಿಸಿದರು.
ನನಗೆ ವೈಭವ್ ಜೈನ್ ಪರಿಚಯ ಇದ್ದ ಕಾರಣಕ್ಕೆ ಕರೆದಿರಬಹುದು. ಅವನು ಈ ಥರ ಅಂತಾ ಗೊತ್ತಿದ್ರೆ ಅವನ ಕಪಾಳಕ್ಕೆ ಹೊಡೀತಿದ್ದೆ. ವೈಭವ್ ಜೈನ್ ಎರಡು ಮಕ್ಕಳ ತಂದೆ. ಯಲಹಂಕದಲ್ಲಿರುವ ನನ್ನ JD ಗಾರ್ಡನ್ ವಿಲ್ಲಾವನ್ನು ವೈಭವ್ ಜೈನ್ ನೋಡಿಕೊಳ್ತಿದ್ದ ಎಂಬ ಮಾಹಿತಿ ನೀಡಿದ್ದಾರೆ. ಜೊತೆಗೆ, ವೈಭವ್ಗೂ ನನಗೂ ಜಗಳ ಸಹ ಆಗಿತ್ತು ಎಂದು ಹೇಳಿದ ಸಂತೋಷ್ ಜನವರಿ 14ರಂದೇ ಆತನ ಜೊತೆ ನಾನು ಸಂಪರ್ಕ ಕೈಬಿಟ್ಟಿದ್ದೇನೆ. ಅವನು ಡ್ರಗ್ ಪೆಡ್ಲರ್ ಅಥವಾ ಮತ್ತಿನ್ನೇನೆಂದು ಗೊತ್ತಿಲ್ಲ. ಸಂಜನಾ ಬರ್ತ್‌ಡೇ ಪಾರ್ಟಿಯಲ್ಲಿ ರಾಹುಲ್ ಪರಿಚಯವಾದ. ಸಹಜವಾಗಿಯೇ ನನ್ನ ಜೊತೆ ಫೋಟೋ ತೆಗೆಸಿಕೊಂಡಿದ್ದ ಎಂದು ಸಹ ತಿಳಿಸಿದ್ದಾರೆ. ಇತ್ತ ಹೈದರಾಬಾದ್ಗೆ ಹೋಗಿದ್ದ ಕಿರುತೆರೆ ಌಂಕರ್ ಅಕುಲ್ ಬಾಲಾಜಿ ಸಹ ಕಚೇರಿಗೆ ಆಗಮಿಸಿದರು. ಸಿಸಿಬಿ ಕಚೇರಿಗೆ ಆಗಮಿಸಿದ ನಿರೂಪಕ ಅಕುಲ್ ಬಾಲಾಜಿ ನಾನು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದೇನೆ. ಸಿಸಿಬಿಗೆ ನನ್ನಿಂದ ಆಗುವ ಎಲ್ಲ ಸಹಕಾರವನ್ನು ನೀಡುತ್ತೇನೆ. ಸಿಸಿಬಿ ಪ್ರಶ್ನೆಗಳಿಗೆ ಅಚ್ಚುಕಟ್ಟಾಗಿ ಉತ್ತರಿಸುತ್ತೇನೆ. ವೈಭವ್ ಜೈನ್ ನನಗೆ ಹಾಯ್ ಬಾಯ್ ಪರಿಚಯವಷ್ಟೇ ಎಂದು ಹೇಳಿದ್ದಾರೆ.
ಸ್ವಲ್ಪ ತಡವಾಯಿತು, ಆದರೆ ವಿಚಾರಣೆಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅಕುಲ್ ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
Published On - 10:49 am, Sat, 19 September 20