ಡ್ರಗ್ಸ್​​ ಲಿಂಕ್​: ಕೊರೊನಾ ಇದೆ ನನ್ನ ಮುಟ್ಟಬೇಡಿ ಅಂತಿರೋ ಆ ನಟಿ ಯಾರು?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧಿಸಿ ಬಾಲಿವುಡ್ ಮತ್ತು ಸ್ಯಾಂಡಲ್​ವುಡ್​ನಲ್ಲಿ ಕೇವಲ ನಟಿಯರೇ ವಿಚಾರಣೆಗೆ ಒಳಪಡುತ್ತಿದ್ದಾರೆ. ಡ್ರಗ್ಸ್ ಕೇಸ್​​ನಲ್ಲಿ ನಟಿಯರದ್ದೇ ಕೈ ಕಾಣಿಸುತ್ತಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ. ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿರುವ ಸಂಜನಾಗೂ, ಪ್ರಶಾಂತ್ ಸಂಬರಗಿಗೂ ಹಾವು ಮುಂಗುಸಿಯ ನಂಟು. ಆಗಾಗ ಒಬ್ಬರನೊಬ್ಬರು ಕಾಲೆಳಿತಾನೇ ಇರ್ತಾರೆ. ಅಲ್ಲದೆ ಪ್ರಕರಣ ಸಂಬಂಧ ಜೈಲು ಸೇರಿದ ಮೇಲೆ ನಟಿಮಣಿಯರು ಒಂದಲ್ಲಾ ಒಂದು ತಕರಾರು ಮಾಡುತ್ತಲೇ ಬಂದಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ […]

ಡ್ರಗ್ಸ್​​ ಲಿಂಕ್​: ಕೊರೊನಾ ಇದೆ ನನ್ನ ಮುಟ್ಟಬೇಡಿ ಅಂತಿರೋ ಆ ನಟಿ ಯಾರು?

Updated on: Oct 03, 2020 | 1:25 PM

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧಿಸಿ ಬಾಲಿವುಡ್ ಮತ್ತು ಸ್ಯಾಂಡಲ್​ವುಡ್​ನಲ್ಲಿ ಕೇವಲ ನಟಿಯರೇ ವಿಚಾರಣೆಗೆ ಒಳಪಡುತ್ತಿದ್ದಾರೆ. ಡ್ರಗ್ಸ್ ಕೇಸ್​​ನಲ್ಲಿ ನಟಿಯರದ್ದೇ ಕೈ ಕಾಣಿಸುತ್ತಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ.

ಡ್ರಗ್ಸ್ ಕೇಸ್​ನಲ್ಲಿ ಜೈಲು ಸೇರಿರುವ ಸಂಜನಾಗೂ, ಪ್ರಶಾಂತ್ ಸಂಬರಗಿಗೂ ಹಾವು ಮುಂಗುಸಿಯ ನಂಟು. ಆಗಾಗ ಒಬ್ಬರನೊಬ್ಬರು ಕಾಲೆಳಿತಾನೇ ಇರ್ತಾರೆ. ಅಲ್ಲದೆ ಪ್ರಕರಣ ಸಂಬಂಧ ಜೈಲು ಸೇರಿದ ಮೇಲೆ ನಟಿಮಣಿಯರು ಒಂದಲ್ಲಾ ಒಂದು ತಕರಾರು ಮಾಡುತ್ತಲೇ ಬಂದಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡ್ತಾನೆ ಇದಾರೆ. ಈ ಪ್ರಕರಣ ಸಂಬಂಧ ಈಗ ಆ್ಯಂಕರ್ ಅನುಶ್ರೀ ಕೂಡ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಎದುರಿಸಿದವರೆಲ್ಲಾ ಒಂದಲ್ಲಾ ಒಂದು ಡ್ರಾಮಾಗಳನ್ನು ಮಾಡುತ್ತಿದ್ದಾರೆ.

ಈ ಕುರಿತು ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಹೀಗಿದೆ:
ಕೊರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನವಾಗಲಿರುವ ಹೊಸ ಡ್ರಾಮಾ. ಪೊಲೀಸರು ಅರೆಸ್ಟ್ ಮಾಡುತ್ತಾರೆಂದು ಗೊತ್ತಾದ ತಕ್ಷಣ ನಾಟಕದ ರಾಣಿಯ ಹೊಸ ಅವತಾರ ಶುರುವಾಗುತ್ತದೆ ಎಂದು ನಟಿಯರ ಹೈಡ್ರಾಮಾದ ಬಗ್ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ.

ಅಲ್ಲದೆ 24 ಗಂಟೆ ಅಥವಾ 48 ಗಂಟೆಯಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿಯೊಬ್ಬರನ್ನ ಬಂಧಿಸಲಾಗುತ್ತೆ. ನಾನು ಭವಿಷ್ಯವಾಣಿ ಹೇಳುತ್ತಿಲ್ಲ, ಇರೋ ವಿಚಾರ ಹೇಳ್ತಿದ್ದೇನೆ ಎಂದು ಟಿವಿ9ಗೆ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

Published On - 1:20 pm, Sat, 3 October 20