ಪ್ರೇಮಾ ಎರಡನೇ ಮದುವೆ ವದಂತಿಗೆ ಬ್ರೇಕ್​; ಸ್ಪಷ್ಟನೆ ನೀಡಿದ ನಟಿ

ಈಗ ಮನೆಯಲ್ಲಿ ಪ್ರೇಮಾಗೆ ಮದುವೆ ಆಗುವಂತೆ ಒತ್ತಾಯ ಬರುತ್ತಿದೆ. ಅವರು ಖಿನ್ನತೆಗೆ ಒಳಗಾಗಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ಹರಿ ಬಿಡಲಾಗುತ್ತಿದೆ.

ಪ್ರೇಮಾ ಎರಡನೇ ಮದುವೆ ವದಂತಿಗೆ ಬ್ರೇಕ್​; ಸ್ಪಷ್ಟನೆ ನೀಡಿದ ನಟಿ
ಪ್ರೇಮಾ

Updated on: Jun 02, 2021 | 9:14 PM

ನಟಿ ಪ್ರೇಮಾ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಇನ್ನು, ಅವರು ಇನ್​ಸ್ಟಾಗ್ರಾಂ ಬಿಟ್ಟು ಮತ್ತಾವುದೇ ಸೋಶಿಯಲ್​ ಮೀಡಿಯಾದಲ್ಲೂ ಆ್ಯಕ್ಟಿವ್​ ಇಲ್ಲ. ಆದಾಗ್ಯೂ ನಟಿ ಪ್ರೇಮಾ ಬಗ್ಗೆ ಕೆಲವರು ವದಂತಿ ಹಬ್ಬಿಸಿದ್ದಾರೆ. ಈ ಬಗ್ಗೆ ಖುದ್ದು ಪ್ರೇಮಾ ಅವರೇ ಸ್ಪಷ್ಟನೆ ನೀಡಿದ್ದಾರೆ.

ಪ್ರೇಮಾ ಮದುವೆ ಆಗಿದ್ದರು. ನಂತರ ವಿಚ್ಛೇದನ ಕೂಡ ಪಡೆದರು. ಈಗ ಮನೆಯಲ್ಲಿ ಪ್ರೇಮಾಗೆ ಮದುವೆ ಆಗುವಂತೆ ಒತ್ತಾಯ ಬರುತ್ತಿದೆ. ಅವರು ಖಿನ್ನತೆಗೆ ಒಳಗಾಗಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ಹರಿ ಬಿಡಲಾಗುತ್ತಿದೆ. ಇದು ಪ್ರೇಮಾ ಅವರ ಗಮನಕ್ಕೂ ಬಂದಿದೆ. ಅಷ್ಟೇ ಅಲ್ಲ, ಪ್ರೇಮಾ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದಾರೆ.

ನಕಲಿ ಸುದ್ದಿ ಹರಡಿದ ವೆಬ್​ಸೈಟ್​ನ ಸ್ಕ್ರೀನ್ ಶಾಟ್​ ಒಂದನ್ನು ಪ್ರೇಮಾ ಇನ್​ಸ್ಟಾಗ್ರಾಂ ಸ್ಟೇಟಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಇದು ಸುಳ್ಳು ಸುದ್ದಿ. ಇದನ್ನು ಜನರು ನಂಬಬಾರದು ಎಂಬುದು ನನ್ನ ಮನವಿ ಎಂದು ಕೋರಿದ್ದಾರೆ. ಈ ಮೂಲಕ ಅವರ ಬಗ್ಗೆ ಹರಿದಾಡುತ್ತಿದ್ದ ಸುಳ್ಳು ಸುದ್ದಿಗೆ ಬ್ರೇಕ್​ ಹಾಕಿದ್ದಾರೆ.

1995ರಲ್ಲಿ ತೆರೆಗೆ ಬಂದ ‘ಸವ್ಯಸಾಚಿ’ ಸಿನಿಮಾ ಮೂಲಕ ಪ್ರೇಮಾ ಬಣ್ಣದ ಬದುಕು ಆರಂಭಿಸಿದರು. ಅದೇ ವರ್ಷ ತೆರೆಗೆ ಬಂದ ಶಿವರಾಜ್​ಕುಮಾರ್​ ನಟನೆಯ ‘ಓಂ’ ಸಿನಿಮಾ ಪ್ರೇಮಾ ಅವರ ಸಿನಿ ಬದುಕಿನ ದಿಕ್ಕನ್ನೇ ಬದಲಾಯಿಸಿ ಬಿಟ್ಟಿತ್ತು. ಈ ಚಿತ್ರದ ನಟನೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ. 2009ರಲ್ಲಿ ತೆರೆಗೆ ಬಂದ ‘ಶಿಶಿರ’ ಚಿತ್ರದಲ್ಲಿ ಪ್ರೇಮಾ ನಟಿಸಿದ್ದರು. ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. 2017ರಲ್ಲಿ ತೆರೆಗೆ ಬಂದ ಉಪೇಂದ್ರ ಮತ್ತೆ ಬಾ ಸಿನಿಮಾದಲ್ಲಿ  ಪ್ರೇಮಾ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಲಾಕ್​ಡೌನ್​ ಮಧ್ಯೆಯೂ ಟೈಗರ್-ದಿಶಾ ರೊಮ್ಯಾಂಟಿಕ್​ ರೈಡ್​; ಇವರನ್ನು ತಡೆದ ಪೊಲೀಸರು, ಮುಂದೇನಾಯ್ತು?