‘ಪ್ರೇಮದ ಊರಲಿ’ ಸಿನಿಮಾ ರಿಲೀಸ್ ಆಗಿ ತಿಂಗಳು; ಮಾಡಿದ ಕಲೆಕ್ಷನ್ ಎಷ್ಟು?

‘ಪ್ರೇಮದ ಊರಲಿ’ ಸಿನಿಮಾ 31 ದಿನಗಳಲ್ಲಿ ಭರ್ಜರಿ 101.22 ಕೋಟಿ ರೂಪಾಯಿ ನೆಟ್ ಗಳಿಸುವ ಮೂಲಕ 100 ಕೋಟಿಯ ಕ್ಲಬ್ ಸೇರಿ ಇತಿಹಾಸ ಸೃಷ್ಟಿಸಿದೆ. ಪ್ರೇಕ್ಷಕರ ಅದ್ಭುತ ಬೆಂಬಲದಿಂದಾಗಿ ಚಿತ್ರವು ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಭಾರಿ ಏರಿಕೆ ಕಂಡು ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

‘ಪ್ರೇಮದ ಊರಲಿ’ ಸಿನಿಮಾ ರಿಲೀಸ್ ಆಗಿ ತಿಂಗಳು; ಮಾಡಿದ ಕಲೆಕ್ಷನ್ ಎಷ್ಟು?
ಪ್ರೇಮದ ಊರಲಿ

Updated on: Oct 26, 2026 | 7:05 AM

ಮುಖ್ಯಾಂಶಗಳು

  • ‘ಪ್ರೇಮದ ಊರಲಿ’ ಸಿನಿಮಾ ರಿಲೀಸ್ ಆಗಿ ತಿಂಗಳು
  • 100 ಕೋಟಿ ಕ್ಲಬ್ ಸೇರಿದ 'ಪ್ರೇಮದ ಊರಲಿ'
  • ಭಾನುವಾರದ ಗಳಿಕೆಯಲ್ಲಿ ಶೇ. 25ರಷ್ಟು ಭಾರಿ ಏರಿಕೆ

‘ಪ್ರೇಮದ ಊರಲಿ‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಭರ್ಜರಿ ಗಳಿಕೆಯ ಓಟವನ್ನು ಮುಂದುವರಿಸಿದೆ. 31 ದಿನಗಳ ಅಂತ್ಯಕ್ಕೆ ಭಾರತದಲ್ಲೇ ಒಟ್ಟು 101.22 ಕೋಟಿ ನೆಟ್ ಕಲೆಕ್ಷನ್ ಹಾಗೂ 118.33 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ವಿದೇಶದ ಕಲೆಕ್ಷನ್ ಸೇರಿದರೆ 121 ಕೋಟಿ ರೂಪಾಯಿ ಕೋಟಿ ರೂಪಾಯಿ ಆಗಿದೆ. ಈ ಮೂಲಕ ತಿಂಗಳ ಒಳಗಾಗಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. 31ನೇ ದಿನದಂದು 851 ಶೋಗಳಿಂದ 3.75 ಕೋಟಿ ನೆಟ್ ಕಲೆಕ್ಷನ್ ಆಗಿದ್ದು ವಿಶೇಷ. ಶನಿವಾರದ ಗಳಿಕೆಗೆ ಹೋಲಿಸಿದರೆ ಶೇಕಡಾ 25 ರಷ್ಟು ಏರಿಕೆ ಕಂಡಿದೆ.

ಮೊದಲ 10 ದಿನಗಳಲ್ಲಿ ಚಿತ್ರವು ಮಂದಗತಿಯಲ್ಲಿ ಶುರುವಾಗಿ ನಂತರ ಪ್ರೇಕ್ಷಕರ ಬೆಂಬಲದಿಂದ ತೀವ್ರ ಚೇತರಿಕೆ ಕಂಡುಕೊಂಡಿತು. ಮೊದಲ ದಿನ ಕೇವಲ 13 ಲಕ್ಷದಿಂದ ಆರಂಭವಾದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಾ, ಮೊದಲ ವಾರದ 7 ದಿನಗಳಲ್ಲಿ ಒಟ್ಟು 5.32 ಕೋಟಿ ರೂಪಾಯಿ ಗಳಿಸಿತು. ನಂತರದ ದಿನಗಳಲ್ಲಿ ಅಂದರೆ 8ನೇ ದಿನದಿಂದ 10ನೇ ದಿನದವರೆಗೆ (2ನೇ ಶುಕ್ರವಾರದಿಂದ ಭಾನುವಾರ) 9.25 ಕೋಟಿ ರೂಪಾಯಿ ಗಳಿಸುವುದರೊಂದಿಗೆ, ಮೊದಲ 10 ದಿನಗಳ ಅಂತ್ಯಕ್ಕೆ ಚಿತ್ರವು ಒಟ್ಟು 4.57 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಗಟ್ಟಿಯಾಗಿ ಬೇರೂರಿತು.

ಅದರ ನಂತರದ 10 ದಿನಗಳಲ್ಲಿ (11ನೇ ದಿನದಿಂದ 20ನೇ ದಿನದವರೆಗೆ) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸಿತು. ದ್ವಿತೀಯ ವಾರದ ಉಳಿದ ದಿನಗಳಲ್ಲಿ ದಬರೋಬ್ಬರಿ 50.70 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ತನ್ನ ಕಲೆಕ್ಷನ್ ಗ್ರಾಫ್ ಅನ್ನು ಹೆಚ್ಚಿಸಿಕೊಂಡಿತು.

ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ ಬಗ್ಗೆ ಸಾಯಿಕುಮಾರ್ ಮಾತು: ನಟ ಹೇಳಿದ್ದೇನು?

ನಂತರದ 10 ದಿನಗಳಲ್ಲಿ (21ನೇ ದಿನದಿಂದ 30ನೇ ದಿನದವರೆಗೆ) ಸಹ ಸಿನಿಮಾ ತನ್ನ ಭರ್ಜರಿ ಗಳಿಕೆಯ ಓಟವನ್ನು ಕಾಯ್ದುಕೊಂಡಿತು. ರಜೆಗಳ ಸಾಲು ಹಾಗೂ ವಾರಾಂತ್ಯದ ಲಾಭ ಪಡೆದ ಚಿತ್ರವು 4ನೇ ವಾರದಲ್ಲಿ 27.00 ಕೋಟಿ ಕಲೆಕ್ಷನ್ ಮಾಡಿತು. ಈ 21ರಿಂದ 30ನೇ ದಿನಗಳ ಅವಧಿಯಲ್ಲಿ ಚಿತ್ರವು ಒಟ್ಟು 32.90 ಕೋಟಿ ನೆಟ್ ಕಲೆಕ್ಷನ್ ಮಾಡಿತು. 31ನೇ ದಿನದ 3.75 ಕೋಟಿ ಗಳಿಕೆಯೊಂದಿಗೆ ‘ಪ್ರೇಮದ ಊರಲಿ’ ಚಿತ್ರವು 100 ಕೋಟಿ ರೂಪಾಯಿ ಕ್ಲಬ್ ಸೇರಿ ಹೊಸ ಇತಿಹಾಸ ಬರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us