Puneeth Rajkumar congratulates Kiccha Sudeep ಕಿಚ್ಚ ಸಿನಿ ‌ಜರ್ನಿ 25.. ಟ್ವಿಟರ್‌ನಲ್ಲಿ ಶುಭ ಕೋರಿದ ಪವರ್​ ಸ್ಟಾರ್​, ಕುಂಬ್ಲೆ..!

|

Updated on: Feb 01, 2021 | 6:30 PM

ಸಂತಸದ ವಿಚಾರವನ್ನು ಟ್ವಿಟರ್‌ನಲ್ಲಿ ಬರದುಕೊಂಡಿರುವ ಪವರ್​ಸ್ಟಾರ್​, ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್​ ಅವರಿಗೆ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್​ ದಂತಕಥೆ ಅನಿಲ್​ ಕುಂಬ್ಲೆ ಸಹ ಕಿಚ್ಚನ ಸಾಧನೆಗೆ ಶುಭಾಷಯ ತಿಳಿಸಿದ್ದಾರೆ

Puneeth Rajkumar congratulates Kiccha Sudeep ಕಿಚ್ಚ ಸಿನಿ ‌ಜರ್ನಿ 25.. ಟ್ವಿಟರ್‌ನಲ್ಲಿ ಶುಭ ಕೋರಿದ ಪವರ್​ ಸ್ಟಾರ್​, ಕುಂಬ್ಲೆ..!
ಪುನೀತ್​ ರಾಜ್​ಕುಮಾರ್​ ಹಾಗೂ ಸುದೀಪ್
Follow us on

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ಸಿನಿ‌ಜರ್ನಿಯ 25ನೇ ವರ್ಷದ ಸಂಭ್ರಮ (ಬೆಳ್ಳಿಹಬ್ಬ)ವನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡರು.

ಜೊತೆಗೆ ಕಿಚ್ಚ ಸಿನಿಜರ್ನಿ ಬೆಳ್ಳಿಹಬ್ಬದ ಪ್ರಯುಕ್ತ ಜಗತ್ತಿನ ಅತಿ ಎತ್ತರದ ಕಟ್ಟಡ, ಬುರ್ಜ್ ಖಲೀಫಾದ ಮೇಲೆ 2,000 ಅಡಿ ಎತ್ತರದ ಕಿಚ್ಚನ ಡಿಜಿಟಲ್​ ಕಟೌಟ್ ರಾರಾಜಿಸಿತು. ಈ ಸಂಭ್ರಮದ ಪ್ರಯುಕ್ತ ಜ. 30 ರಂದು ಸುದ್ದಿಗೋಷ್ಠಿ ನಡೆಸಿದ್ದ ಸುದೀಪ್ ತಮ್ಮ ಸಿನಿ‌ಜರ್ನಿಯ ಬಗ್ಗೆಗಿನ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದರು.

25 ವರ್ಷಗಳ ಸಿನಿ‌ಜರ್ನಿಯನ್ನು ಯಶಸ್ವಿಯಾಗಿ ಮುಗಿಸಿ ಮುನ್ನುಗುತ್ತಿರುವ ಕಿಚ್ಚ ಸುದೀಪ್​ಗೆ ದೇಶದಾದ್ಯಂತ ಸಿನಿ ತಾರೆಯರು ಹಾಗೂ ಗಣ್ಯರು ಶುಬಾಷಯ ಕೋರಿದ್ದರು. ಜೊತೆಗೆ ಸ್ಯಾಂಡಲ್​ವುಡ್​ ದಿಗ್ಗಜರು ಸಹ ಸುದೀಪ್​ನನ್ನು ಕೊಂಡಾಡಿದರು. ಈಗ ಅದೇ ಸಾಲಿಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಸೇರ್ಪಡೆಗೊಂಡಿದ್ದಾರೆ.

ಈ ಸಂತಸದ ವಿಚಾರವನ್ನು ಟ್ವಿಟರ್‌ನಲ್ಲಿ ಬರದುಕೊಂಡಿರುವ ಪವರ್​ಸ್ಟಾರ್​, ಸಿನಿ ರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್​ ಅವರಿಗೆ ಶುಭಾಷಯ ತಿಳಿಸಿದ್ದಾರೆ. ಜೊತೆಗೆ ಕ್ರಿಕೆಟ್​ ದಂತಕಥೆ ಅನಿಲ್​ ಕುಂಬ್ಲೆ ಸಹ ಕಿಚ್ಚನ ಸಾಧನೆಗೆ ಶುಭಾಷಯ ತಿಳಿಸಿದ್ದಾರೆ.

Vikrant Rona On Burj Khalifa ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಕಟೌಟ್!