ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  

Puneeth Rajkumar: ರಾಮು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿದ್ದರು. ನಾನು ಎಷ್ಟೋ ವರ್ಷಗಳಿಂದ ಅವರನ್ನ ನೋಡುತ್ತಾ ಇದ್ದೇನೆ. ರಾಜಕುಮಾರ ಸಿನಿಮಾ ಟೈಟಲ್ ಅವರ ಬಳಿಯೆ ಇತ್ತು. ನನಗಾಗಿ ಟೈಟಲ್​ ಬಿಟ್ಟು ಕೊಟ್ಟಿದ್ದರು ಎಂದು ಪುನೀತ್​ ಭಾವುಕರಾದರು.

ನನಗಾಗಿ ರಾಜಕುಮಾರ ಸಿನಿಮಾ ಟೈಟಲ್ ಬಿಟ್ಟುಕೊಟ್ಟಿದ್ರು; ನಿರ್ಮಾಪಕ ರಾಮು ನಿಧನ ಸುದ್ದಿ ಕೇಳಿ ಭಾವುಕರಾದ ಪುನೀತ್​  
ರಾಮು-ಪುನೀತ್​ ರಾಜ್​ಕುಮಾರ್

Updated on: Apr 26, 2021 | 9:20 PM

ಸ್ಯಾಂಡಲ್​ವುಡ್​ಗೆ ಕೊರೊನಾ ಆಘಾತ ಉಂಟಾಗಿದೆ. ಖ್ಯಾತ ನಿರ್ಮಾಪಕ ಕೋಟಿ ರಾಮು (52) ಕೊರೊನಾದಿಂದ ನಿಧನ ಹೊಂದಿದ್ದಾರೆ. ಈ ವಿಚಾರ ಕೇಳಿ ನಟ ಪುನೀತ್​ ರಾಜ್​ಕುಮಾರ್​ ಭಾವುಕರಾಗಿದ್ದಾರೆ. ಅವರು ಮೃತಪಟ್ಟಿದ್ದಾರೆ ಎನ್ನುವುದನ್ನು ನನ್ನಿಂದ ನಂಬೋಕೆ ಆಗಿಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.

ರಾಮು ಅವರ ಸಾವಿನ ವಿಚಾರ ಕೇಳಿ ಶಾಕ್​ನಲ್ಲಿಯೇ ಇದ್ದೇನೆ. ಮಾಲಾಶ್ರೀ ಇರಬಹುದು, ಮಕ್ಕಳು ಇರಬಹುದು ಅವರಿಗೆ ನೋವು ತಡೆದುಕೊಳ್ಳುವ ಶಕ್ತಿ ಕೊಡಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ. ರಾಮು ಅವರು ಕೊಟ್ಟ ಎ.ಕೆ.47 ಸಿನಿಮಾ ಮೆರೆಯಲು ಆಗಲ್ಲ. ಅವರು ಹಲವು ಉತ್ತಮ ಚಿತ್ರಗಳನ್ನು ಕೊಟ್ಟರು. ನಾನು ಯಾವತ್ತೂ ಅವರ ಜೊತೆಗೆ ಸಿನಮಾ ಮಾಡಿಲ್ಲ. ಆದರೆ ನನಗೆ ಅವರು ತುಂಬಾ ಪರಿಚಯ. ನನಗೆ ತುಂಬಾ ನೋವಾಗುತ್ತಿದೆ ಎಂದು ಪುನೀತ್​ ಹೇಳಿದರು.

ರಾಮು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರಾಗಿದ್ದರು. ನಾನು ಎಷ್ಟೋ ವರ್ಷಗಳಿಂದ ಅವರನ್ನ ನೋಡುತ್ತಾ ಇದ್ದೇನೆ. ರಾಜಕುಮಾರ ಸಿನಿಮಾ ಟೈಟಲ್ ಅವರ ಬಳಿಯೆ ಇತ್ತು. ನನಗಾಗಿ ಟೈಟಲ್​ ಬಿಟ್ಟು ಕೊಟ್ಟಿದ್ದರು ಎಂದು ಪುನೀತ್​ ಭಾವುಕರಾದರು.

ಕೊರೊನಾ ವಿಚಾರದಲ್ಲಿ ಯಾಮಾರಬೇಡಿ. ನಿಯಮಗಳನ್ನು ಪಾಲಿಸಿ. ಲಸಿಕೆ ಹಾಕಿಸಿಕೊಳ್ಳಿ. ಈಗ ಲಾಕ್​ಡೌನ್​ ಘೋಷಣೆ ಆಗಿದೆ. 14 ದಿನಗಳಲ್ಲಿ ಮತ್ತೆ ಕೆಲಸ ಮಾಡುವಂತೆ ಆಗಬೇಕು ಅಂದರೆ ನಾವು ಸರಿಯಾಗಿ ಇರಬೇಕು. ಸರ್ಕಾರ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು. ನಾವು ಮೊದಲು ಒಳ್ಳೇ ಮನುಷ್ಯರಾಗೋಣ. ಅಕ್ಕಪಕ್ಕದವರಿಗೆ ಸಹಾಯ ಮಾಡೋಣ ಎಂದು ಪುನೀತ್​ ಮನವಿ ಮಾಡಿದ್ದಾರೆ.

ಕೊರೊನಾದಿಂದ ರಾಮು ನಿಧನ

ರಾಮು ಅವರಿಗೆ ಕಳೆದವಾರ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಮೂರು ದಿನಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು. ಅವರಿಗೆ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಲೇ ಇದ್ದರು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಹೀಗಾಗಿ, ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಮು ಸ್ಯಾಂಡಲ್​ವುಡ್​ನಲ್ಲಿ ಖ್ಯಾತ ನಿರ್ಮಾಪಕರು. ಕನ್ನಡದಲ್ಲಿ ಅವರು ಸಾಕಷ್ಟು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಲಾಕಪ್​ಡೆತ್, AK-47, ರಾಕ್ಷಸ‌, ಕಲಾಸಿಪಾಳ್ಯ, ಅರ್ಜುನ್ ಗೌಡ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದರು.ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಚಿತ್ರಗಳನ್ನು ರಾಮು ನಿರ್ಮಾಣ ಮಾಡುತ್ತಿದ್ದರು.  ಅವರು ಕೋಟಿ ರಾಮು ಎಂದೇ ಖ್ಯಾತರಾಗಿದ್ದರು.

ಇದನ್ನೂ ಓದಿ: Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

Published On - 9:18 pm, Mon, 26 April 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us