Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ

R Chandru | Upendra: ‘ಕಬ್ಜ’ ಸಿನಿಮಾಗೆ ಈಗ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಆರ್​. ಚಂದ್ರು ನಿರ್ದೇಶನ ಮಾಡಿರುವ ಈ ಚಿತ್ರದ ಪ್ರೀ-ರಿಲೀಸ್​ ಬಿಸ್ನೆಸ್​ ಚೆನ್ನಾಗಿ ಆಗುತ್ತಿದೆ.

Kabzaa: ನಾರ್ತ್​ ಅಮೆರಿಕದಲ್ಲಿ ಕನ್ನಡದ ‘ಕಬ್ಜ’ ಚಿತ್ರಕ್ಕೆ ಭಾರಿ ಡಿಮ್ಯಾಂಡ್​; ರಿಲೀಸ್​ಗೆ ಭರ್ಜರಿ ತಯಾರಿ
ಉಪೇಂದ್ರ

Updated on: Feb 10, 2023 | 4:36 PM

ಕನ್ನಡದ ಸಿನಿಮಾಗಳಿಗೆ (Sandalwood Movies) ಜಾಗತಿಕ ಮಟ್ಟದಲ್ಲಿ ಬೇಡಿಕೆ ಬಂದಿದೆ. ‘ಕೆಜಿಎಫ್​: ಚಾಪ್ಟರ್​ 2’, ‘ಕಾಂತಾರ’ ಸಿನಿಮಾಗಳು ಅಬ್ಬರಿಸಿದ ಬಳಿಕ ಕ್ರೇಜ್​ ಇನ್ನೂ ಜೋರಾಯಿತು. ಚಂದನವನದಿಂದ ಮುಂಬರುವ ಸಿನಿಮಾಗಳ ಬಗ್ಗೆ ವಿದೇಶದಲ್ಲಿನ ಪ್ರೇಕ್ಷಕರಿಗೂ ನಿರೀಕ್ಷೆ ಇದೆ. ಆ ಪೈಕಿ ಆರ್​. ಚಂದ್ರು (R Chandru) ನಿರ್ದೇಶನದ ‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಸಜ್ಜಾಗಿದ್ದಾರೆ. ನಾರ್ತ್​ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್​ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ (Kabzaa Movie) ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡಲಿದೆ.

ಉಪೇಂದ್ರ ಮತ್ತು ಸುದೀಪ್​ ಅವರು ‘ಕಬ್ಜ’ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್​ ನಟಿಸಿದ್ದಾರೆ. ಅದ್ದೂರಿ ಮೇಕಿಂಗ್​ ಕಾರಣದಿಂದ ಈ ಚಿತ್ರ ಗಮನ ಸೆಳೆಯುತ್ತಿದೆ. ಟೀಸರ್​ ಬಿಡುಗಡೆ ಆದಾಗಿನಿಂದಲೂ ಈ ಸಿನಿಮಾ ಇನ್ನಿಲ್ಲದಷ್ಟು ಹೈಪ್​ ಸೃಷ್ಟಿ ಮಾಡಿದೆ. ಇತ್ತೀಚೆಗೆ ಬಂದ ಟೈಟಲ್​ ಟ್ರ್ಯಾಕ್​ ಕೂಡ ದೂಳೆಬ್ಬಿಸಿದೆ. ಅದರಿಂದ ‘ಕಬ್ಜ’ ಕ್ರೇಜ್​ ಇನ್ನೂ ಜೋರಾಗಿದೆ.

ಇದನ್ನೂ ಓದಿ: Kabzaa Tittle Song: ರಿಲೀಸ್ ಆಯ್ತು ‘ಕಬ್ಜ’ ಟೈಟಲ್ ಸಾಂಗ್​; ರವಿ ಬಸ್ರೂರ್ ಕಮಾಲ್

ಇದನ್ನೂ ಓದಿ
‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಸೆಟ್​​ಗೆ ಶಿವರಾಜ್​ಕುಮಾರ್​-ಗೀತಾ ಭೇಟಿ
Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ

‘ಕಬ್ಜ’ ಕೇವಲ ಕನ್ನಡದ ಸಿನಿಮಾ ಅಲ್ಲ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ತೆಲುಗು, ತಮಿಳು, ಮಲಯಾಳ, ಹಿಂದಿ ಮುಂತಾದ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ಆರ್​. ಚಂದ್ರು ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೀಗ ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪ್ರೀ-ರಿಲೀಸ್​ ಬಿಸ್ನೆಸ್​ ಚೆನ್ನಾಗಿ ಆಗುತ್ತಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್

ಮಾರ್ಚ್​ 17 ಎಂದರೆ ಕನ್ನಡ ಸಿನಿಪ್ರಿಯರ ಪಾಲಿಗೆ ಸಖತ್​ ವಿಶೇಷ. ಅಂದು ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಜನ್ಮದಿನ. ಆ ಶುಭ ದಿನದಂದು ‘ಕಬ್ಜ’ ಸಿನಿಮಾ ಕೂಡ ಬಿಡುಗಡೆ ಆಗಲಿರುವುದು ವಿಶೇಷ. ಈ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ಪುನೀತ್​ ರಾಜ್​ಕುಮಾರ್​ ಅವರು ಬೆನ್ನು ತಟ್ಟಿದ್ದರು. ಆ ಕಾರಣದಿಂದ ಅವರಿಗೆ ನಮನ ಸಲ್ಲಿಸುವ ರೀತಿಯಲ್ಲಿ ಅವರ ಜನ್ಮದಿನದ ಪ್ರಯುಕ್ತ ‘ಕಬ್ಜ’ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಒಟಿಟಿಯವರು ಕಣ್ಮುಚ್ಚಿಕೊಂಡು ಕಬ್ಜ ಹಕ್ಕು ಖರೀದಿಸಿಲ್ಲ; ಟೀಕಾಕಾರರಿಗೆ ಚಂದ್ರು ಉತ್ತರ

‘ಕಬ್ಜ’ ಚಿತ್ರದ ಹಿಂದಿ ವರ್ಷನ್​ಗೆ ಸಾಕಷ್ಟು ಬೇಡಿಕೆ ಇದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಚಿತ್ರವನ್ನು ವಿತರಣೆ ಮಾಡಲು ಖ್ಯಾತ ನಿರ್ಮಾಪಕ/ವಿತರಕ ಆನಂದ್​ ಪಂಡಿತ್​ ಸಜ್ಜಾಗಿದ್ದಾರೆ. ರೆಟ್ರೋ ಕಾಲದ ಭೂಗತ ಲೋಕದ ಕಥೆಯನ್ನು ಈ ಸಿನಿಮಾ ಹೊಂದಿರಲಿದೆ. ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:36 pm, Fri, 10 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us