DB ಪುರ: ಅಕುಲ್ ‘ಬಾಲಾಜಿ ಲೋಕ’ದಲ್ಲಿ ರಾಗಿಣಿ-ರವಿ ಪಾರ್ಟಿ ಮಾಡಿದ್ದು ಯಾವಾಗ ಗೊತ್ತಾ!?

|

Updated on: Sep 19, 2020 | 9:54 AM

ದೊಡ್ಡಬಳ್ಳಾಪುರ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ನೋಟಿಸ್​ ಪಡೆದಿರುವ ನಟ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ನಲ್ಲಿ ಪೇಜ್ 3 ಪಾರ್ಟಿ ನಡಿತಿತ್ತಾ ಎಂಬ ಅನುಮಾನ ಶುರುವಾಗಿದೆ. ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿ ಬಳಿ ಇದ್ದು, ಅಕುಲ್ ಬಾಲಾಜಿ ಸನ್ ಶೈನ್ ಬೈ ಜೆಡ್ ರೆಸಾರ್ಟ್ ಹೊಂದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ರೆಸಾರ್ಟ್​ನಲ್ಲಿ 20 ಮಂದಿ ಜೊತೆ ಪಾರ್ಟಿ ಮಾಡಿದರ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಸ್ಟೇಷನ್​ನಲ್ಲಿ […]

DB ಪುರ: ಅಕುಲ್ ‘ಬಾಲಾಜಿ ಲೋಕ’ದಲ್ಲಿ ರಾಗಿಣಿ-ರವಿ ಪಾರ್ಟಿ ಮಾಡಿದ್ದು ಯಾವಾಗ ಗೊತ್ತಾ!?
Follow us on

ದೊಡ್ಡಬಳ್ಳಾಪುರ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ನೋಟಿಸ್​ ಪಡೆದಿರುವ ನಟ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ನಲ್ಲಿ ಪೇಜ್ 3 ಪಾರ್ಟಿ ನಡಿತಿತ್ತಾ ಎಂಬ ಅನುಮಾನ ಶುರುವಾಗಿದೆ.

ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿ ಬಳಿ ಇದ್ದು, ಅಕುಲ್ ಬಾಲಾಜಿ ಸನ್ ಶೈನ್ ಬೈ ಜೆಡ್ ರೆಸಾರ್ಟ್ ಹೊಂದಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ರೆಸಾರ್ಟ್​ನಲ್ಲಿ 20 ಮಂದಿ ಜೊತೆ ಪಾರ್ಟಿ ಮಾಡಿದರ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಸ್ಟೇಷನ್​ನಲ್ಲಿ ಸ್ಥಳಿಯ ನಿವಾಸಿಯಾದ ಮಂಜುನಾಥ್ ದೂರು ನೀಡಿದ್ದರು.

ಇಡೀ ಜಗತ್ತು ಕೊರೊನಾದಿಂದ ತತ್ತರಿಸುತ್ತಿದ್ದಾಗ, ಅಕುಲ್ ‘ಬಾಲಾಜಿ ಲೋಕ’ ಮಾದಕ ಜಗತ್ತು ಅನಾವರಣಗೊಂಡಿತ್ತು. ಎಕ್ಸಾಕ್ಟ್​ಲಿ ಏಪ್ರಿಲ್ 20 ರಂದು.. ಅಕುಲ್ ಬಾಲಾಜಿ ರೆಸಾರ್ಟ್ ನಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ಲಘುಮೇನಹಳ್ಳಿ ನಿವಾಸಿ ಮಂಜುನಾಥ್ ಎಂಬುವವರು ದೂರು ನೀಡಿದ್ದರು. ಪ್ರಕರಣ ಸಂಬಂಧ ಎಫ್.ಐ.ಆರ್ ಕೂಡ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು.

ನಟ ಅಕುಲ್ ಬಾಲಾಜಿ ಒಡೆತನದ ದೊಡ್ಡಬಳ್ಳಾಪುರ ಬಳಿಯ ರೆಸಾರ್ಟ್​ಗೆ ರಾಗಿಣಿ ಮತ್ತು ರವಿಶಂಕರ್ ಹಲವು ಬಾರಿ ಬಂದಿರುವುದಾಗಿ ಆರೋಪಿಗಳು ಸಿಸಿಬಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ನಟ ಅಕುಲ್ ಬಾಲಾಜಿಯನ್ನು ವಿಚಾರಣೆ ನಡೆಸಬಹುದು.

Published On - 9:50 am, Sat, 19 September 20