ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿರುವ ‘ನಶೆ’ರಾಣಿಯರಿಂದ ಹೊಸ ಕಿರಿಕ್ ಶುರುವಾಗಿದೆ. ರಾಗಿಣಿ ಮತ್ತು ಸಂಜಳಾನ ಪ್ರತ್ಯೇಕ ಸೆಲ್ಗಳಲ್ಲಿಟ್ಟರೂ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ತಲೆನೋವು ಕಮ್ಮಿಯಾಗಿಲ್ಲ. ಜೈಲೂಟ ಅಡ್ಜೆಸ್ಟ್ ಆಗ್ತಿಲ್ಲ ಅಂತಾ ನಟಿ ರಾಗಿಣಿ ಹೊಸ ಕ್ಯಾತೆ ತೆಗೆದಿದ್ದಾರೆ.
ಸೌತ್ ಇಂಡಿಯನ್ ಸಾಕಾಗಿದೆ, ನಾರ್ತ್ ಇಂಡಿಯನ್ ಫುಡ್ ಕೊಡಿ:
ನಾರ್ಥ್ ಇಂಡಿಯನ್ ಸ್ಟೈಲ್ ಊಟ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ರಾಗಿಣಿಗೆ ಪ್ರತಿದಿನ ಅನ್ನ ತಿಂದು ತೂಕ ಜಾಸ್ತಿ ಆಗ್ತಿರೋ ಬಗ್ಗೆ ಚಿಂತೆ ಉಂಟಾಗಿದೆ. ಹೀಗಾಗಿ ಅನ್ನ ಬೇಡ ನಾರ್ಥ್ ಇಂಡಿಯನ್ ಸ್ಟೈಲ್ ಚಪಾತಿಗೆ ಬೇಡಿಕೆ ಇಟ್ಟಿದ್ದಾರೆ.
ಇನ್ನು ರಾಗಿಣಿಯದ್ದು ಊಟದ ಕಿರಿಕ್ ಆದ್ರೆ ಸಂಜನಾದು ಲವ್ ಕಿರಿಕ್. ಅಮ್ಮನ ಪ್ರೀತಿಗಾಗಿ ನಟಿ ಸಂಜನಾ ಹಂಬಲಿಸುತ್ತಿದ್ದಾರಂತೆ. ಅಮ್ಮನ ಜೊತೆ ಮಾತನಾಡಬೇಕು, ಫೋನ್ ಮಾಡಬೇಕು ಎಂದು ಪದೇಪದೆ ಬೇಡಿಕೆ ಇಡುತ್ತಿದ್ದಾರಂತೆ. ಅಮ್ಮನಿಗೆ ಕರೆ ಮಾಡಲು ಕ್ಯೂನಲ್ಲಿ ನಿಲ್ಲಬೇಕು. ನನಗೆ ಎಂತಹ ಪರಿಸ್ಥಿತಿ ಬಂತು ಎಂದು ಗೋಳಾಡ್ತಿದ್ದಾರೆ. ಹೇಗಿದ್ದ ಜೀವನ ಹೇಗಾಯ್ತಲ್ಲ ಎಂದು ಕಂಗಾಲಾದ ಸಂಜನಾ ಸದಾ ಅಮ್ಮನ ಕನವರಿಕೆಯಲ್ಲೇ ಇದ್ದಾತಂತೆ.
Published On - 9:15 am, Wed, 21 October 20