
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ದ್ವಿವೇದಿಯನ್ನ CCB ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆಗೆ ಒಳಪಡಿಸಿದರು. ಇನ್ಸ್ಪೆಕ್ಟರ್ಗಳಾದ ಅಂಜುಮಾಲಾ ನಾಯಕ್ ಹಾಗೂ ಪುನೀತ್‌ರಿಂದ ವಿಚಾರಣೆ ನಡೆಸಲಾಯಿತು.
ರಾಗಿಣಿ ಎಲ್ಲರನ್ನೂ ಭೇಟಿಯಾಗಿರುವುದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪಾರ್ಟಿಯಲ್ಲಿ ಅವರನ್ನ ಭೇಟಿಯಾಗಿರಬಹುದು. ನನಗೆ ಅಷ್ಟು ನೆನಪಾಗ್ತಿಲ್ಲ ಅಂತಾ ರಾಗಿಣಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರಂತೆ.