ಕುಡಿದ ಮತ್ತಿನಲ್ಲಿ ಖಾಕಿ ಜೊತೆ ಸ್ಯಾಂಡಲ್ ವುಡ್ ನಟನ ಕಿರಿಕ್..

ಕುಡಿದ ಮತ್ತಿನಲ್ಲಿ ಖಾಕಿ ಜೊತೆ ಸ್ಯಾಂಡಲ್ ವುಡ್ ನಟನ ಕಿರಿಕ್..

[lazy-load-videos-and-sticky-control id=”CP7OSWfezfI”]

ಬೆಂಗಳೂರು: ತಡರಾತ್ರಿ ಮದ್ಯದ ಅಮಲಿನಲ್ಲಿ ಪೊಲೀಸರ ಜತೆ ಸ್ಯಾಂಡಲ್ ವುಡ್ ನಟ ಹರ್ಷ ಕಿರಿಕ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಗಲಗುಂಟೆ ಠಾಣಾ ವ್ಯಾಪ್ತಿಯ ಜಾಲಹಳ್ಳಿ ಮುಖ್ಯರಸ್ತೆಯ ಖಾಸಗಿ ಅಪಾರ್ಟ್‌ಮೆಂಟ್ ಬಳಿ ಗೆಳೆಯರ ಜತೆ ಸೇರಿ ನಟ ಹರ್ಷ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಎಂಟ್ರಿ ಕೊಟ್ಟ ಪೊಲೀಸರಿಗೆ ನಟ ಹರ್ಷ, ಜತೆಗಿದ್ದ ಸ್ನೇಹಿತರು ಆವಾಜ್ ಹಾಕಿದ್ದಾರೆ.

ಕೂಡಲೇ ಕಿರಿಕ್ ಮಾಡಿದವರನ್ನು ಬಾಗಲಗುಂಟೆ ಪೊಲೀಸರು ವಶಕ್ಕೆ ಪಡೆದು ಬುದ್ಧಿ ಮಾತು ಹೇಳಿ ಇನ್ನೊಮ್ಮೆ ಈ ರೀತಿ ಮಾಡದಂತೆ ವಾರ್ನಿಗ್ ನೀಡಿ ಕಳಿಸಿದ್ದಾರೆ. ನಟ ಹರ್ಷ ಸ್ಯಾಂಡಲ್ ವುಡ್​ನ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಾಹುಲಿ, ವರ್ಧನ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Published On - 7:19 am, Mon, 7 September 20

Click on your DTH Provider to Add TV9 Kannada