ಸುಪ್ರೀಂ ಜಾಮೀನು ಸಿಕ್ಕಿದ್ದರೂ ರಾಗಿಣಿ ದ್ವಿವೇದಿಗೆ ಈ ವೀಕೆಂಡ್​ ಜೈಲಿನಲ್ಲೇ!

3 ಲಕ್ಷ ರೂ. ಮೌಲ್ಯದ ಬಾಂಡ್ ನೀಡಿ. ಮತ್ತು ಇಬ್ಬರ ಶ್ಯೂರಿಟಿ ನೀಡಿ ಎಂದು ಎನ್​ಡಿಪಿಎಸ್ ಕೋರ್ಟ್‌ ಜಡ್ಜ್ ಜಿ.ಎಂ.ಶೀನಪ್ಪ ಷರತ್ತು ಹಾಕಿದ್ದರು. ಆದರೆ, ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಗಿಣಿ ಜೈಲು ವಾಸ ಮುಂದುವರಿದಿದೆ.

ಸುಪ್ರೀಂ ಜಾಮೀನು ಸಿಕ್ಕಿದ್ದರೂ ರಾಗಿಣಿ ದ್ವಿವೇದಿಗೆ ಈ ವೀಕೆಂಡ್​ ಜೈಲಿನಲ್ಲೇ!
ರಾಗಿಣಿ ದ್ವಿವೇದಿ (ಸಂಗ್ರಹ ಚಿತ್ರ)
Edited By:

Updated on: Jan 23, 2021 | 4:47 PM

ಬೆಂಗಳೂರು: ಡ್ರಗ್​ ಕೇಸ್​ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿಗೆ ಗುರುವಾರವೇ ಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಆದರೆ, ರಾಗಿಣಿ ದ್ವಿವೇದಿಗೆ ಇಂದು ಕೂಡ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಹೀಗಾಗಿ, ಈ ವಾರಾಂತ್ಯವನ್ನು ರಾಗಿಣಿ ಜೈಲಿನಲ್ಲೇ ಕಳೆಯಬೇಕಿದೆ.

3 ಲಕ್ಷ ರೂ. ಮೌಲ್ಯದ ಬಾಂಡ್ ನೀಡಿ. ಮತ್ತು ಇಬ್ಬರ ಶ್ಯೂರಿಟಿ ನೀಡಿದರಷ್ಟೇ ರಾಗಿಣಿ ರಿಲೀಸ್​ ಮಾಡಲಾಗುತ್ತದೆ ಎಂದು ಎನ್​ಡಿಪಿಎಸ್ ಕೋರ್ಟ್‌ ಜಡ್ಜ್ ಜಿ.ಎಂ. ಶೀನಪ್ಪ ಷರತ್ತು ಹಾಕಿದ್ದರು. ಆದರೆ, ಷರತ್ತುಗಳನ್ನು ಪೂರೈಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಗಿಣಿ ಜೈಲು ವಾಸ ಮುಂದುವರಿದಿದೆ.

ಈವರೆಗೆ ಶ್ಯೂರಿಟಿಗಳನ್ನು ಜೈಲಿನಲ್ಲಿ ಹಾಜರು ಪಡಿಸಲು ರಾಗಿಣಿ ಕಡೆಯವರಿಗೆ ಸಾಧ್ಯವಾಗಿಲ್ಲ. ಕೊವಿಡ್ ನಿಯಮಾವಳಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನೇರವಾಗಿ ಶ್ಯೂರಿಟಿಗಳಿಗೆ ನ್ಯಾಯಾಲಯಕ್ಕೆ ಪ್ರವೇಶವಿಲ್ಲ. ಹೀಗಾಗಿ ಮೊದಲು ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು. ದಾಖಲೆಗಳನ್ನ ಪರಿಶೀಲಿಸಿದ ಬಳಿಕವಷ್ಟೇ ಶ್ಯೂರಿಟಿ ವಿಚಾರಣೆ ಮಾಡಲಾಗುತ್ತದೆ. ಆ ನಂತರ NDPS ವಿಶೇಷ ಕೋರ್ಟ್​​ ಬಿಡುಗಡೆಗೆ ಆದೇಶ ಹೊರಡಿಸುತ್ತದೆ.

ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು.. 140 ದಿನಗಳ ಜೈಲುವಾಸ ಅಂತ್ಯ

 

Published On - 4:46 pm, Sat, 23 January 21