AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜಕುಮಾರ್ ನನ್ನ ವಸ್ತು, ನನ್ನವರಾಗೇ ಉಳಿದರು’; ಅಣ್ಣಾವ್ರ ಬಗ್ಗೆ ಪಾರ್ವತಮ್ಮ ಆಡಿದ್ದ ಮಾತಿದು

ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳಾದ ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ಅವರ 53 ವರ್ಷಗಳ ಅಪರೂಪದ ದಾಂಪತ್ಯ ಬದುಕಿನ ಭಾವುಕ ಕ್ಷಣವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ರಾಜಕುಮಾರ್ ನನ್ನ ವಸ್ತು, ಅವರನ್ನು ನನ್ನಿಂದ ಯಾರೂ ಕಿತ್ಕೊಳ್ಳೋಕೆ ಆಗಲ್ಲ" ಎಂದು ಪಾರ್ವತಮ್ಮ ಅವರು ಅಣ್ಣಾವ್ರ ಮೇಲಿದ್ದ ಪ್ರೀತಿಯನ್ನು ಹೆಮ್ಮೆಯಿಂದ ಹಂಚಿಕೊಂಡಿರುವ ಹಳೆಯ ಸಂದರ್ಶನದ ವಿಡಿಯೋ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

‘ರಾಜಕುಮಾರ್ ನನ್ನ ವಸ್ತು, ನನ್ನವರಾಗೇ ಉಳಿದರು’; ಅಣ್ಣಾವ್ರ ಬಗ್ಗೆ ಪಾರ್ವತಮ್ಮ ಆಡಿದ್ದ ಮಾತಿದು
Rajkumar And Parvathamma
TV9 Web
| Edited By: |

Updated on:Jul 15, 2026 | 10:46 AM

Share

ಮುಖ್ಯಾಂಶಗಳು

  • ಬದಲಾಗದ ಒಲವು, 53 ವರ್ಷಗಳ ಅಪೂರ್ವ ನಂಟು
  • ರಾಜಕುಮಾರ್ ನನ್ನ ವಸ್ತು, ಯಾರೂ ಕಿತ್ಕೊಳ್ಳೋಕೆ ಆಗಲ್ಲ!
  • ಅಣ್ಣಾವ್ರ ಅಭಿಮಾನಿಗಳ ಕಣ್ಣಾಲಿ ತುಂಬಿಸಿದ ಪಾರ್ವತಮ್ಮ ಅವರ ಭಾವುಕ ನುಡಿ

ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್‌ಕುಮಾರ್ ಮತ್ತು ಅವರ ಧರ್ಮಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ದಾಂಪತ್ಯ ಇಡೀ ಚಿತ್ರರಂಗಕ್ಕೇ ಒಂದು ಮಾದರಿ. ಅಣ್ಣಾವ್ರ ಪ್ರತಿಯೊಂದು ಯಶಸ್ಸಿನ ಹಿಂದೆಯೂ ಪಾರ್ವತಮ್ಮ ಅವರ ಬೆಂಬಲ ಮತ್ತು ಅಪ್ರತಿಮ ಶ್ರಮವಿತ್ತು. ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಲೇ ರಾಜ್ ಕುಟುಂಬವನ್ನು ಮುನ್ನಡೆಸಿದ್ದ ಪಾರ್ವತಮ್ಮ ಅವರು, ತಮ್ಮ ಪತಿಯ ಬಗ್ಗೆ ಆಡಿದ್ದ ಅಪರೂಪದ ಹಾಗೂ ಭಾವುಕ ಮಾತುಗಳ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

53 ವರ್ಷಗಳ ಅಪರೂಪದ ದಾಂಪತ್ಯ ಬದುಕು

ಆ ಸಂದರ್ಶನದಲ್ಲಿ ಪಾರ್ವತಮ್ಮ ಅವರು ಅಣ್ಣಾವ್ರೊಂದಿಗಿನ ತಮ್ಮ ಸುದೀರ್ಘ ಬಾಂಧವ್ಯವನ್ನು ನೆನಪಿಸಿಕೊಂಡು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ‘ನಾನು ಮದುವೆಯಾಗಿ ಬಂದ ದಿನದಿಂದ ಹಿಡಿದು ಅವರು ಸಾಯುವವರೆಗೂ ಅವರ ನಡವಳಿಕೆಯಲ್ಲಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಕಾಣಲಿಲ್ಲ. ನನ್ನ ಮೇಲೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಹಾಗೆಯೇ ನನಗೂ ಅವರ ಮೇಲೆ ಅಷ್ಟೇ ಅಗಾಧವಾದ ಪ್ರೇಮವಿತ್ತು. ಅದೇ ನಂಬಿಕೆಯಲ್ಲಿ ನಾನು 53 ವರ್ಷಗಳ ಕಾಲ ಅವರ ಜೊತೆ ಹಾಗೇ ಬದುಕಿಬಿಟ್ಟೆ’ ಎಂದು ದಾಂಪತ್ಯದ ಸುಂದರ ದಿನಗಳನ್ನು ನೆನದಿದ್ದಾರೆ.

‘ಅವರನ್ನು ಯಾರೂ ಕಿತ್ಕೊಳ್ಳೋಕೆ ಆಗಲ್ಲ’

ಮಾತು ಮುಂದುವರಿಸಿದ ಪಾರ್ವತಮ್ಮ ಅವರು, ಅಣ್ಣಾವ್ರು ತಮಗೆ ಎಷ್ಟು ಮುಖ್ಯ ಎಂಬುದನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ. ‘ರಾಜಕುಮಾರ್ ನನ್ನ ವಸ್ತು. ಅದನ್ನು ನನ್ನಿಂದ ಯಾರೂ ಕಿತ್ತುಕೊಳ್ಳಲು ಆಗಲ್ಲ. ನನ್ನದು ಕೊನೆವರೆಗೂ ನನ್ನದಾಗಿಯೇ ಉಳಿದುಕೊಂಡಿತ್ತು’ ಎಂದು ಅತ್ಯಂತ ಹೆಮ್ಮೆಯಿಂದ ನುಡಿದಿದ್ದಾರೆ.

ಇದನ್ನೂ ಓದಿ: ರಾಜ್​​ಕುಮಾರ್ ಹಾಗೂ ಪಾರ್ವತಮ್ಮಗೆ ಇಷ್ಟ ಆಗಿತ್ತು ಆ ಒಂದು ಸಿನಿಮಾ

ಈ ಅಪರೂಪದ ವಿಡಿಯೋ ಅಣ್ಣಾವ್ರ ಅಭಿಮಾನಿಗಳ ಕಣ್ಣಾಲಿಗಳನ್ನು ತುಂಬಿ ಬರುವಂತೆ ಮಾಡಿದ್ದು, ಆದರ್ಶ ದಂಪತಿಗಳಿಗೆ ಇವರಿಗಿಂತ ದೊಡ್ಡ ಉದಾಹರಣೆ ಸಿಗಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:45 am, Wed, 15 July 26

Follow Us
TV9 Web
TV9 Web

TV9 Kannada

Read More
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ಕೈದಿ ಬಿಡುಗಡೆಗೆ ಪತ್ನಿ ಮೇಲೆ ಆಸೆ: ಅಪರಾಧಿ ಪತ್ನಿಗೆ ಡಿಐಜಿ ವಿಡಿಯೋ ಕಾಲ್!
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ವೀರಶೈವ ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪಕ್ಕೆ ಸ್ಪಷ್ಟನೆ ನೀಡಿದ ಡಿಕೆಶಿ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ರಸ್ತೆ ಅಸ್ತವ್ಯಸ್ತ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹುಬ್ಬಳ್ಳಿಯ ಜೈನ ಮಂದಿರಗಳಲ್ಲೇ ಪದೇ ಪದೇ ಕಳ್ಳತನ: ಸಮುದಾಯದಿಂದ ಆಕ್ರೋಶ
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್!
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ಪಾವಗಡದಲ್ಲಿ ವರುಣಾರ್ಭಟ: ಬೃಹತ್ ಮರ ಧರೆಗುರುಳಿ ಸಂಚಾರಕ್ಕೆ ಅಡಚಣೆ
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ನಕಲಿ ಔಷಧಿಗಳನ್ನು ವಿತರಿಸಿದ ಫಾರ್ಮಸಿಗಳಿಗೆ ಎಸ್​ಐಟಿ ಶಾಕ್
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು
ಆಕಾಶವಾಣಿ ಭವನದ ಬಳಿ ರಾಹುಲ್, ಪ್ರಿಯಾಂಕಾರನ್ನು ತಡೆದ ದೆಹಲಿ ಪೊಲೀಸರು