ಮುರಿದು ಬಿದ್ದ ಪ್ರೇಮ ಕಥೆಯ ಬಗ್ಗೆ ಮೌನ ಮುರಿದ ರಕ್ಷಿತ್​ ಶೆಟ್ಟಿ

|

Updated on: Dec 23, 2019 | 9:16 AM

ಸೌತ್​ ಸಿನಿರಂಗದಲ್ಲಿ ಅತಿ ಹೆಚ್ಚು ಗಮನ ಸೆಳೆದ ಜೋಡಿಗಳಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಜೋಡಿ ಕೂಡ ಒಂದು. ಆದ್ರೆ ಬ್ರೇಕಪ್ ನಂತ್ರ ಸೈಲೆಂಟ್‌​ ಆಗಿದ್ದ ನಟ ರಕ್ಷಿತ್​ ಶೆಟ್ಟಿ, ಮುರಿದ ಬಿದ್ದ ಪ್ರೇಮ ಕಥೆಯ ಬಗ್ಗೆ ಮೌನ ಮುರಿದಿದ್ದಾರೆ. ಕನ್ನಡ ಸಿನಿ ದುನಿಯಾದಲ್ಲಿ ಸೈಲೆಂಟ್ ಆಗಿ ಬಂದು ಕಮಾಲ್ ಮಾಡಿದ ಸಿನಿಮಾ ಅಂದ್ರೆ ಅದು ಕಿರಿಕ್ ಪಾರ್ಟಿ. ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ ತೆರೆ ಮೇಲೆ ಸೂಪರ್ ಹಿಟ್ಟ ಆಗಿತ್ತು. ನಂತ್ರ […]

ಮುರಿದು ಬಿದ್ದ ಪ್ರೇಮ ಕಥೆಯ ಬಗ್ಗೆ ಮೌನ ಮುರಿದ ರಕ್ಷಿತ್​ ಶೆಟ್ಟಿ
Follow us on

ಸೌತ್​ ಸಿನಿರಂಗದಲ್ಲಿ ಅತಿ ಹೆಚ್ಚು ಗಮನ ಸೆಳೆದ ಜೋಡಿಗಳಲ್ಲಿ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಜೋಡಿ ಕೂಡ ಒಂದು. ಆದ್ರೆ ಬ್ರೇಕಪ್ ನಂತ್ರ ಸೈಲೆಂಟ್‌​ ಆಗಿದ್ದ ನಟ ರಕ್ಷಿತ್​ ಶೆಟ್ಟಿ, ಮುರಿದ ಬಿದ್ದ ಪ್ರೇಮ ಕಥೆಯ ಬಗ್ಗೆ ಮೌನ ಮುರಿದಿದ್ದಾರೆ.

ಕನ್ನಡ ಸಿನಿ ದುನಿಯಾದಲ್ಲಿ ಸೈಲೆಂಟ್ ಆಗಿ ಬಂದು ಕಮಾಲ್ ಮಾಡಿದ ಸಿನಿಮಾ ಅಂದ್ರೆ ಅದು ಕಿರಿಕ್ ಪಾರ್ಟಿ. ಇದರಲ್ಲಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ ತೆರೆ ಮೇಲೆ ಸೂಪರ್ ಹಿಟ್ಟ ಆಗಿತ್ತು. ನಂತ್ರ ಇವರಿಬ್ಬರ ನಡುವೆ ಲವ್ ಆಗಿ ಅದ್ಧೂರಿಯಾಗಿ ಎಂಗೇಜ್ ಮೆಂಟ್ ಕೂಡ ಆಗಿದ್ರು. ಆಮೇಲೆ ಏನ್ ಆಯ್ತೋ ಗೊತ್ತಿಲ್ಲ ಇಬ್ಬರು ನಡುವೆ ಬ್ರೇಕಪ್ ಆಯ್ತು.

ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿಯ ಪ್ರೇಮ ಪುರಾಣ ಮುಗಿದು ಹೋದ ಅಧ್ಯಾಯ ಬಿಡಿ. ಆದ್ರೆ ಇವರಿಬ್ಬರು ಬ್ರೇಕಪ್ ನಂತ್ರ ಎಲ್ಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡರಲಿಲ್ಲ. ಅದ್ರಲ್ಲೂ ರಶ್ಮಿಕಾ ಸಾಲು ಸಾಲು ಟಾಲಿವುಡ್ ಮತ್ತು ಸ್ಯಾಂಡಲ್​ವುಡ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು ಯಾವುದೇ ಸುದ್ದಿಗೋಷ್ಟಿಯಲ್ಲೂ ಈ ಬಗ್ಗೆ ತುಟಿ ಬಿಚ್ಚಲಿಲ್ಲ. ರಶ್ಮಿಕಾ ಮಾತ್ರವಲ್ಲ ರಕ್ಷಿತ್ ಕೂಡ ಈ ಬಗ್ಗೆ ಮಾತಾಡಲು ನಿರಾಕರಿಸಿದ್ರು. ಆದ್ರೀಗ ತೆಲುಗು ಸಂದರ್ಶನವೊಂದ್ರಲ್ಲಿ ನಟ ರಕ್ಷಿತ್ ಶೆಟ್ಟಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ನಿಶ್ಚಿತಾರ್ಥ ಮುರಿದು ಬಿದ್ದಿದ್ದರ ಬಗ್ಗೆ ಮೌನ ಮುರಿದಿದ್ದಾರೆ.

ರಶ್ಮಿಕಾ ಜೊತೆಗಿನ ಬ್ರೇಕಪ್ ರಕ್ಷಿತ್ ನೋವಿಗೆ ಕಾರಣವಾಯಿತಾ ಅನ್ನೋ ಪ್ರಶ್ನೆಗೆ ರಕ್ಷಿತ್ ಉತ್ತರಿಸಿದ್ದಾರೆ. “ಜೀವನದಲ್ಲಿ ನಡೆಯೋ ಪ್ರತಿ ಘಟನೆಗಳಿಗೂ ಕಾರಣ ಇರುತ್ತೆ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಒಳ್ಳೆಯ ಅನುಭವಗಳಾಗುತ್ತವೆ. ಕೆಲವೊಮ್ಮೆ ಕೆಟ್ಟ ಅನುಭವಗಳಾಗುತ್ತವೆ. ಆದ್ರೆ ಏನೇ ಬಂದ್ರು ಅವನೆಲ್ಲಾ ಸ್ವೀಕರಿಸಿ ಮುಂದೆ ಸಾಗಬೇಕು. ಇವೆಲ್ಲ ನನ್ನ ಜೀವನದ ಸಣ್ಣ, ಸಣ್ಣ ಅಂಶಗಳಷ್ಟೇ, ಎಲ್ಲಕ್ಕಿಂತೂ ದೊಡ್ಡದು ಜೀವನ” ಎಂದಿದ್ದಾರೆ.

ರಕ್ಷಿತ್ ಅವರ ಈ ಮಾತುಗಳನ್ನ ಕೇಳಿದ್ರೆ ರಶ್ಮಿಕಾ ಜೊತೆಗಿನ ಬ್ರೇಕಪ್ ದೊಡ್ಡ ಅಘಾತವನ್ನ ನೀಡಿದೆ ಅನ್ನೋದು ಗೊತ್ತಾಗುತ್ತೆ. ಆದ್ರೆ ರಕ್ಷಿತ್ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ, ಶ್ರೀಮನ್ನಾರಾಯಣ ಸಿನಿಮಾ ಸೂಪರ್ ಹಿಟ್ ಆಗಲಿ ಅಂತ ಆಶಿಸೋಣ.

Published On - 9:15 am, Mon, 23 December 19