ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣ ಸಂಬಂಧ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಈಗ ರಿಕ್ಕಿ ರೈ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ.
ಸ್ಯಾಂಡಲ್ವುಡ್ ನಶೆ ನಂಟಿನ ಬಗ್ಗೆ ಕೇಳಿದಾಗ ‘ಮಾದಕ’ ನಟಿ ಹೆಸರು ಹೊರಬಿದ್ದಿದೆ. ಆ ನಟಿ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ನಾವು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದು ನಿಜ, ಆಕೆ ನನಗೆ ಒಳ್ಳೆಯ ಸ್ನೇಹಿತೆ. ಆ ನಟಿ ಸ್ಯಾಂಡಲ್ವುಡ್ ಮಾತ್ರವಲ್ಲದೆ ಪಂಚ ಭಾಷಾ ತಾರೆಯಾಗಿದ್ದಾಳೆ. ಆ ನಟಿಯ ಜೊತೆಯಲ್ಲಿ ಸಾಕಷ್ಟು ಬಾರಿ ಪಾರ್ಟಿಗಳನ್ನ ಮಾಡಿದ್ದೇವೆ ಎಂಬ ಮಾಹಿತಿಯನನ್ನು ರಿಕ್ಕಿ ರೈ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.
ಆದಿತ್ಯ ಆಳ್ವಾ ಜೊತೆಗೂ ಈ ಪಂಚಭಾಷಾ ನಟಿಗೆ ಇದ್ಯಾ ಡ್ರಗ್ಸ್ ಲಿಂಕ್..?
ಆದ್ರೆ ನಾವಿಬ್ಬರೂ ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ರಿಕ್ಕಿ ರೈ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಆದರೆ ರಿಕ್ಕಿ ರೈ ಹೇಳಿಕೆಗೂ ಸಿಕ್ಕಿರೋ ಸಾಕ್ಷಿಗಳಿಗೂ ತಾಳೆಯಾಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ರಿಕ್ಕಿ ರೈ ಡ್ರಗ್ಸ್ ತೆಗೆದುಕೊಳ್ತಿದ್ದ ಬಗ್ಗೆ ಸಾಕ್ಷಿ ಇದೆ ಎಂದು ಸಿಸಿಬಿ ಸ್ಪಷ್ಟಪಡಿಸಿದೆ. ಮೊಬೈಲ್ ಫೊನ್ನಲ್ಲಿ ಸಿಕ್ಕ ಸಾಕ್ಷಿಗೂ ರಿಕ್ಕಿ ಹೇಳಿಕೆಗೂ ತಾಳೆಯಾಗುತ್ತಿಲ್ಲ ಹೀಗಾಗಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ರಿಕ್ಕಿ ರೈಗೆ ಸೂಚನೆ ನೀಡಲಾಗಿದೆ.