‘ಅನುಶ್ರೀ ನನ್ನ ಫ್ಲ್ಯಾಟ್ಗೆ ಬರ್ತಿದ್ಲು’ ಅನುಶ್ರೀಗೆ ಶುರುವಾಯ್ತು ಆಸ್ಕಾ ಕಂಟಕ
ಮಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಹಾಕಿರುವ ಬಲೆಯಲ್ಲಿ ಅನೇಕ ಮಂದಿ ಸಿಕ್ಕಿ ಬೀಳುತ್ತಿದ್ದಾರೆ. ಜೊತೆಗೆ ರೋಚಕ, ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಈಗ ನಟಿ ಕಮ್ ಆ್ಯಂಕರ್ ಅನುಶ್ರೀ ಬಗ್ಗೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ. ಸಿಸಿಬಿ ವಿಚಾರಣೆ ವೇಳೆ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ನಾಗಲ್ಯಾಂಡ್ ಮೂಲದ ಯುವತಿ ಆಸ್ಕಾ ಕೆಲವೊಂದು ಮಾಹಿತಿಯನ್ನು ಬಹಿರಂಗ ಗೊಳಿಸಿದ್ದಾರೆ. ಹಾಗಿದ್ರೆ ಸಿಸಿಬಿ ಅಧಿಕಾರಿಗಳ ಮುಂದೆ ಆಸ್ಕಾ ಏನೇನ್ ಹೇಳಿದ್ಲು ಅನ್ನೋದಾದ್ರೆ. ಮಂಗಳೂರಿಗೆ […]
ಮಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ಹಾಕಿರುವ ಬಲೆಯಲ್ಲಿ ಅನೇಕ ಮಂದಿ ಸಿಕ್ಕಿ ಬೀಳುತ್ತಿದ್ದಾರೆ. ಜೊತೆಗೆ ರೋಚಕ, ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಈಗ ನಟಿ ಕಮ್ ಆ್ಯಂಕರ್ ಅನುಶ್ರೀ ಬಗ್ಗೆ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.
ಸಿಸಿಬಿ ವಿಚಾರಣೆ ವೇಳೆ ಮಾತಿನ ಮಲ್ಲಿ ಅನುಶ್ರೀ ಬಗ್ಗೆ ನಾಗಲ್ಯಾಂಡ್ ಮೂಲದ ಯುವತಿ ಆಸ್ಕಾ ಕೆಲವೊಂದು ಮಾಹಿತಿಯನ್ನು ಬಹಿರಂಗ ಗೊಳಿಸಿದ್ದಾರೆ. ಹಾಗಿದ್ರೆ ಸಿಸಿಬಿ ಅಧಿಕಾರಿಗಳ ಮುಂದೆ ಆಸ್ಕಾ ಏನೇನ್ ಹೇಳಿದ್ಲು ಅನ್ನೋದಾದ್ರೆ. ಮಂಗಳೂರಿಗೆ ಬಂದಾಗ ಅನುಶ್ರೀ ನನ್ನ ಫ್ಲ್ಯಾಟ್ಗೆ ಬರ್ತಿದ್ಲು ಎಂದು ಸಿಸಿಬಿ ವಿಚಾರಣೆ ವೇಳೆ ಅನುಶ್ರೀ ಬಗ್ಗೆ ಆಸ್ಕಾ ಬಾಯ್ಬಿಟ್ಟಿದ್ದಾಳೆ. ಆಸ್ಕಾ ಡ್ರಗ್ಸ್ ಕೇಸ್ ಆರೋಪಿ ಕಿಶೋರ್ ಗರ್ಲ್ಫ್ರೆಂಡ್. ಮಂಗಳೂರು ಹೊರವಲಯದ ಕುಂಟಿಕಾನದಲ್ಲಿರೋ ಗ್ಲೋಬಲ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಂ. 103ಗೆ ಅನುಶ್ರೀ ಬರ್ತಿದ್ಲು. ನನಗೂ ಅನುಶ್ರೀಗೂ ಪರಿಚಯವಿದೆ ಎಂಬ ಮಾಹಿತಿ ಹೊರ ಹಾಕಿದ್ದಾಳೆ.