AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್ ಡ್ರಗ್ಸ್ ನಂಟು: ರಿಕ್ಕಿ ರೈ ಬಾಯ್ಬಿಟ್ಟ ಆ ‘ಮಾದಕ’ ನಟಿ ಯಾರು?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣ ಸಂಬಂಧ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಈಗ ರಿಕ್ಕಿ ರೈ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ. ಸ್ಯಾಂಡಲ್​ವುಡ್ ನಶೆ ನಂಟಿನ ಬಗ್ಗೆ ಕೇಳಿದಾಗ ‘ಮಾದಕ’ ನಟಿ ಹೆಸರು ಹೊರಬಿದ್ದಿದೆ. ಆ ನಟಿ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ನಾವು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದು ನಿಜ, ಆಕೆ ನನಗೆ ಒಳ್ಳೆಯ ಸ್ನೇಹಿತೆ. […]

ಸ್ಯಾಂಡಲ್​ವುಡ್ ಡ್ರಗ್ಸ್ ನಂಟು: ರಿಕ್ಕಿ ರೈ ಬಾಯ್ಬಿಟ್ಟ ಆ 'ಮಾದಕ' ನಟಿ ಯಾರು?
ಆಯೇಷಾ ಬಾನು
|

Updated on: Oct 08, 2020 | 9:24 AM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಶೆಯ ನಂಟಿದೆ ಎಂಬ ಪ್ರಕರಣ ಸಂಬಂಧ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಈಗ ರಿಕ್ಕಿ ರೈ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ.

ಸ್ಯಾಂಡಲ್​ವುಡ್ ನಶೆ ನಂಟಿನ ಬಗ್ಗೆ ಕೇಳಿದಾಗ ‘ಮಾದಕ’ ನಟಿ ಹೆಸರು ಹೊರಬಿದ್ದಿದೆ. ಆ ನಟಿ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ನಾವು ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದು ನಿಜ, ಆಕೆ ನನಗೆ ಒಳ್ಳೆಯ ಸ್ನೇಹಿತೆ. ಆ ನಟಿ ಸ್ಯಾಂಡಲ್​ವುಡ್ ಮಾತ್ರವಲ್ಲದೆ ಪಂಚ ಭಾಷಾ ತಾರೆಯಾಗಿದ್ದಾಳೆ. ಆ ನಟಿಯ ಜೊತೆಯಲ್ಲಿ ಸಾಕಷ್ಟು ಬಾರಿ ಪಾರ್ಟಿಗಳನ್ನ ಮಾಡಿದ್ದೇವೆ ಎಂಬ ಮಾಹಿತಿಯನನ್ನು ರಿಕ್ಕಿ ರೈ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

ಆದಿತ್ಯ ಆಳ್ವಾ ಜೊತೆಗೂ ಈ ಪಂಚಭಾಷಾ ನಟಿಗೆ ಇದ್ಯಾ ಡ್ರಗ್ಸ್ ಲಿಂಕ್..? ಇನ್ನು ರಿಕ್ಕಿ ಬಹಿರಂಗ ಪಡಿಸಿದ ಪಂಚಭಾಷಾ ನಟಿಗೆ ಆದಿತ್ಯ ಆಳ್ವಾ ಜೊತೆಗೂ ನಂಟಿದೆಯಂತೆ. ಪಾರ್ಟಿಗಳಲ್ಲಿ ಆ ನಟಿ ಪಾಲ್ಗೊಳ್ಳುತ್ತಿದ್ದ ಬಗ್ಗೆ ರಿಕ್ಕಿ ರೈ ಮಾಹಿತಿ ನೀಡಿದ್ದಾನೆ. ಹಾಗೂ ಆದಿತ್ಯ ಆಳ್ವಾ ಪಾರ್ಟಿಗಳಲ್ಲಿ ನಾನು ಮತ್ತು ಆ ನಟಿ ಭಾಗವಹಿಸ್ತಿದ್ದಿದ್ದು ನಿಜ.

ಆದ್ರೆ ನಾವಿಬ್ಬರೂ ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ರಿಕ್ಕಿ ರೈ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಆದರೆ ರಿಕ್ಕಿ ರೈ ಹೇಳಿಕೆಗೂ ಸಿಕ್ಕಿರೋ ಸಾಕ್ಷಿಗಳಿಗೂ ತಾಳೆಯಾಗುತ್ತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಆದ್ರೆ ರಿಕ್ಕಿ ರೈ ಡ್ರಗ್ಸ್ ತೆಗೆದುಕೊಳ್ತಿದ್ದ ಬಗ್ಗೆ ಸಾಕ್ಷಿ ಇದೆ ಎಂದು ಸಿಸಿಬಿ ಸ್ಪಷ್ಟಪಡಿಸಿದೆ. ಮೊಬೈಲ್ ಫೊನ್​ನಲ್ಲಿ ಸಿಕ್ಕ ಸಾಕ್ಷಿಗೂ ರಿಕ್ಕಿ ಹೇಳಿಕೆಗೂ ತಾಳೆಯಾಗುತ್ತಿಲ್ಲ ಹೀಗಾಗಿ ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ರಿಕ್ಕಿ ರೈಗೆ ಸೂಚನೆ ನೀಡಲಾಗಿದೆ.

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ